Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಬೆಳಗ್ಗೆ ತಿಂಡಿಗೆ ರುಚಿಕರ ಹೆಸರು ಕಾಳಿನ ಪಲಾವ್.!! ಮಾಡುವ ವಿಧಾನವಿದು!
ಬೆಳಗ್ಗೆ ತಿಂಡಿಗೆ ಎಲ್ಲರು ಸುಲಭವಾಗಿ ಮಾಡಬಹುದುದಾದ ತಿಂಡಿ ಯಾವುದು ಎಂಬುದನ್ನು ಹುಡುಕುತ್ತಿರುತ್ತಾರೆ. ಬೆಳಗ್ಗೆಯ ಗಡಿಬಿಡಿಯಲ್ಲಿ ಗಂಟೆಗಳ ಕಾಲ ತಿಂಡಿ ಮಾಡುತ್ತಿದ್ದರೆ ಸಮಯ ಮುಗಿದು ಹೋಗಿರುತ್ತೆ. ಹೀಗಾಗಿ ಎಲ್ಲರು ಕುಕ್ಕರ್‌ನಲ್ಲಿ ಮಾಡುವ ಅಥವಾ ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿ ಮಾಡುವ ತಿಂಡಿಯ ಕಡೆ ಹೆಚ್ಚು ಗಮನ ಹರಿಸುತ್ತಾರೆ.
ಹೀಗಾಗಿ ಹಲವರ ಮನೆಯಲ್ಲಿ ಯಾವಾಗಲು ಬೆಳಗ್ಗೆ ಪಲಾವ್ ಇದ್ದೇ ಇರುತ್ತೆ. ಇನ್ನು ಮಧ್ಯಾಹ್ನದ ಬಾಕ್ಸ್‌ಗೂ ಏನಾದರು ಮಾಡಬೇಕಾಗಿರುವಾಗ ಪಲಾವ್ ಒಂದನ್ನೇ ಬೆಳಗ್ಗೆ ತಿಂಡಿಗೆ ಹಾಗೂ ಮಧ್ಯಾಹ್ನದ ಊಟಕ್ಕೆ ಹಾಕಿ ಕೊಡುತ್ತಾರೆ. ಮಾಡೋದು ಸುಲಭ ಆಗಿರೋದ್ರಿಂದ ಎಲ್ಲರು ಇದನ್ನು ಮಾಡುತ್ತಾರೆ. ಆದ್ರೆ ಈ ಪಲಾವ್‌ನಲ್ಲಿ ಎಷ್ಟೊಂದು ವಿಧಗಳಿವೆ ಅಂದ್ರೆ ನೀವು ಅದರ ಹೆಸರು ಸಹ ಕೇಳಿರೋದಿಲ್ಲ.

ಹೀಗೆ ಪಲಾವ್‌ನ ವಿಧಗಳಲ್ಲಿ ಹೆಸರು ಕಾಳು ಹಾಕಿ ಮಾಡುವ ಪಲಾವ್ ಸಹ ಒಂದಾಗಿದೆ. ಇದು ರುಚಿಯಲ್ಲಿ ಎಲ್ಲಾ ಪಲಾವ್ ಅನ್ನು ಮೀರಿಸಲಿದೆ. ತರಕಾರಿಗಳು, ಕಾಳುಗಳು ಈ ಪಲಾವ್ ರುಚಿಯನ್ನ ದುಪ್ಪಟ್ಟು ಮಾಡಲಿವೆ. ಈ ಪಲಾವ್ ಆರೋಗ್ಯದ ದೃಷ್ಟಿಯಿಂದಲೂ ರುಚಿಯಿಂದಲೂ ಹೆಸರುವಾಸಿ. ಕೆಲವೊಂದು ಕ್ಯಾಂಟೀನ್‌ಗಳಲ್ಲಿ ಈ ಹೆಸರು ಕಾಳಿನ ಪಲಾವ್ ಅಲ್ಲಿನ ವಿಶೇಷ ಖಾದ್ಯ ಆಗಿರುತ್ತೆ.
ಹಾಗಾದ್ರೆ ನಾವಿಂದು ಈ ಹೆಸರು ಕಾಳಿನ ಪಲಾವ್ ಮಾಡುವುದು ಹೇಗೆ ನೋಡೋಣ. ಹೆಸರು ಕಾಳಿನ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು ಯಾವುದು?, ಹೆಸರು ಕಾಳಿನ ಪಲ್ಯ ಮಾಡುವ ವಿಧಾನವೇನು? ಹೇಗೆ ಅಳತೆ ತೆಗೆದುಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೆಸರು ಕಾಳಿನ ಪಲಾವ್ ಮಾಡಲು ಬೇಕಾಗುವ ವಸ್ತುಗಳು
- ಬಾಸುಮತಿ ಅಕ್ಕಿ - 1 ಕಪ್
- ಹೆಸರು ಕಾಳು- ಕಾಲು ಕಪ್
- ಬೆಳ್ಳುಳ್ಳಿ
- ಹಸಿ ಮೆಣಸು
- ಶುಂಠಿ
- ಕೊತ್ತಂಬರಿ ಸೊಪ್ಪು
- ಪಲಾವ್ ಎಲೆ
- ಅರಶಿನ
- ಖಾರದ ಪುಡಿ
- ಗರಂ ಮಸಾಲೆ
- ಧನಿಯಾ
- ಪುದಿನ ಸೊಪ್ಪು
- ಉಪ್ಪು
- ಎಣ್ಣೆ
- ಮೊಸರು
ಹೆಸರು ಕಾಳಿನ ಪಲಾವ್ ಮಾಡುವುದು ಹೇಗೆ?
ಮೊದಲು ಒಂದು ಕಾಲು ಕಪ್‌ನಲ್ಲಿ ಹೆಸರು ಕಾಳು ನೀರಿನಲ್ಲಿ ಹಾಕಿ ತೊಳೆದುಕೊಳ್ಳಿ. ಬಳಿಕ ಬಿಸಿ ನೀರಿನಲ್ಲಿ ಹೆಸರು ಕಾಳನ್ನು ಹಾಕಿ ನೆನೆಸಿಡಬೇಕು. ಕುದಿಯುತ್ತಿರುವ ನೀರಾದರೆ ಉತ್ತಮ. 10 ನಿಮಿಷ ನೆನೆಸಿಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಬೆಳ್ಳುಳ್ಳಿ, ಹಸಿ ಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಕಾಯಿ ಚಟ್ನಿ ರೂಪದಲ್ಲಿ ಈ ಮಸಾಲೆಯನ್ನು ರೆಡಿ ಮಾಡಿಟ್ಟುಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಡಿ. ಇದಕ್ಕೆ ಪಲಾವ್ ಎಲೆ, ಏಲಕ್ಕಿ, ಚಕ್ರಮೊಗ್ಗು, ಚಕ್ಕೆ ಲವಂಗ, ಜೀರಿಗೆ ಹಾಕಿಕೊಂಡು ಫ್ರೈ ಮಾಡಿ. ನಂತರ ಇದಕ್ಕೆ ಈರುಳ್ಳಿ ಉದ್ದವಾಗಿ ಹೆಚ್ಚಿ ಹಾಕಿಕೊಂಡು ಫ್ರೈ ಮಾಡಿ ಫ್ರೈ ಮಾಡಿದ ಬಳಿಕ ರುಬ್ಬಿಕೊಂಡ ಮಸಾಲೆಯನ್ನು ಹಾಕಿಕೊಂಡು ಮಿಕ್ಸ್ ಮಾಡಿ ಫ್ರೈ ಮಾಡಿ.
3 ನಿಮಿಷ ಫ್ರೈ ಮಾಡಿ ಇದಕ್ಕೆ ಪುದಿನ, ಕೊತ್ತಂಬರಿ, ಟೊಮೆಟೋ ಹಾಕಿ ಫ್ರೈ ಆಗಲು ಬಿಡಿ. ನಂತರ ಅರಶಿನ, ಖಾರದ ಪುಡಿ, ಧನಿಯಾ ಪುಡಿ ಹಾಕಿ ಮಿಕ್ಸ್ ಮಾಡಿ. 1 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ನೆನೆಸಿಟ್ಟ ಹಸಿರು ಕಾಳನ್ನು ಹಾಕಿಕೊಂಡು 1 ನಿಮಿಷ ಫ್ರೈ ಮಾಡಿ. ನಂತರ ಇದಕ್ಕೆ ಉಪ್ಪು, 2 ವರೆ ಕಪ್ ನೀರು ಹಾಕಿಕೊಂಡು ಚೆನ್ನಾಗಿ ತಿರುಗಿಸಿ. ಕೊನೆಯಲ್ಲಿ ಗರಂ ಮಸಾಲ ಮೊಸರು ಹಾಕಿಕೊಂಡು ಮಿಕ್ಸ್ ಮಾಡಿ ಕುದಿಯಲು ಬಿಡಿ. ನಂತರ ತೊಳೆದಿಟ್ಟಿರುವ ಬಾಸುಮತಿ ಅಕ್ಕಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದನ್ನು ಕುಕ್ಕರ್‌ನಲ್ಲಿ ಮಾಡುವುದಾದರೆ 2 ಸೀಟಿ ಹೊಡೆಸಿದರೆ ಸಾಕು. ಪಾತ್ರೆಯಲ್ಲಾದರೆ 10 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಬೇಕು. ಇಷ್ಟಾದರೆ ನಿಮ್ಮ ಮುಂದೆ ಹೆಸರು ಕಾಳಿನ ಪಲ್ಯ ರೆಡಿಯಾಗುತ್ತೆ.



Click it and Unblock the Notifications