Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಯಾವ ಹೋಟೆಲ್‌ನಲ್ಲೂ ಸಿಗದ ಹೀರೆಕಾಯಿ ಗ್ರೇವಿ ಇದು..! ಟ್ರೈ ಮಾಡಿ ನೋಡಿ..!
ಹೀರೆಕಾಯಿ ತರಕಾರಿ ಬಳಸಿ ನೀವು ಎಷ್ಟೊಂದು ಬಗೆಯ ಖಾದ್ಯಗಳ ರೆಡಿ ಮಾಡಿ ಸವಿದಿರುತ್ತೀರಿ. ಹಲವು ಖಾದ್ಯಗಳು ನಿಮ್ಮ ಊಟ ಹಾಗೂ ತಿಂಡಿಯ ರುಚಿಯನ್ನು ಹೆಚ್ಚಿಸಿರುತ್ತೆ. ಹೀರೆಕಾಯಿ ಪಲ್ಯ, ಸಾಂಬಾರ್, ಚಟ್ನಿ ಹೀಗೆ ಒಂದಿಷ್ಟು ಖಾದ್ಯಗಳ ನೆನೆದರೆ ಬಾಯಲ್ಲಿ ನೀರು ಬರುತ್ತೆ. ಅಷ್ಟೊಂದು ರುಚಿಯಾಗಿ ಈ ಹೀರೆಕಾಯಿಯ ಬಳಸಿ ಹಲವು ಬಗೆ ಬಗೆಯ ಖಾದ್ಯ ರೆಡಿ ಮಾಡಬಹುದು.
ಹಾಗೆ ಹೀರೆಕಾಯಿಯು ಆರೋಗ್ಯಕ್ಕೂ ಬಹಳ ಉತ್ತಮವಾದ ತರಕಾರಿಯಾಗಿದೆ. ಹೀರೆಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಕೆ, ಫೋಲೇಟ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂನಂತಹ ಅಂಶಗಳು ಕಂಡುಬರುತ್ತದೆ. ಹಾಗೆ ಹೆಚ್ಚಿನ ನಾರಿನ ಅಂಶ ಇದು ಹೊಂದಿರುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಇದು ಸಹಕಾರಿಯಾಗಿದೆ. ಹಾಗೆ ತೂಕ ನಿಯಂತ್ರಣಕ್ಕೂ ಕೂಡ ಇದು ಫಸ್ಟ್ ಕ್ಲಾಸ್.

ಹಾಗಾದ್ರೆ ನೀವು ಹೀರೆಕಾಯಿಯಿಂದ ಸ್ಪೆಷಲ್ ಆಗಿ ಏನಾದರು ಖಾದ್ಯ ಮಾಡಬೇಕು ಎಂದುಕೊಂಡಿದ್ದರೆ ಈ ರೀತಿ ನಾವಿಂದು ಹೇಳುವಂತೆ ಹೀರೆಕಾಯಿ ಗ್ರೇವಿಯನ್ನು ಮಾಡಿ ನೋಡಿ. ಏಕೆಂದರೆ ನೀವು ಎಲ್ಲಿಯೂ ಈ ಬಗೆಯಲ್ಲಿ ಹೀರೆಕಾಯಿಯ ಗ್ರೇವಿ ಮಾಡಿ ಸವಿದಿರುವುದಿಲ್ಲ. ನಾವಿಂದು ವಿಶೇಷ ಬಗೆಯ ಹೊಸ ವಿಧಾನದಲ್ಲಿ ಹೀರೆಕಾಯಿ ಗ್ರೇವಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ.
ಹೀರೆಕಾಯಿ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಹೀರೆಕಾಯಿ ಗ್ರೇವಿ ಮಾಡುವ ವಿಧಾನವೇನು? ಹೀರೆಕಾಯಿಯ ಗ್ರೇವಿ ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ಸರಿಯಾದ ಮಾರ್ಗ ಕುರಿತಂತೆ ನಾವಿಂದು ತಿಳಿದುಕೊಳ್ಳೋಣ.
ಹೀರೆಕಾಯಿ ಗ್ರೇವಿ ಮಾಡಲು ಈ ಪದಾರ್ಥಗಳ ಅವಶ್ಯಕತೆ ಇದೆ
- ಹೀರೇಕಾಯಿ
- ಈರುಳ್ಳಿ -2
- ಟೊಮೆಟೋ - 2
- ತೆಂಗಿನಕಾಯಿ ತುರಿ
- ಕಡ್ಲೆಕಾಯಿ ಬೀಜ- ಸ್ವಲ್ಪ
- ಸಾಂಬಾರ್ ಪುಡಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಸಾಸಿವೆ
- ಜೀರಿಗೆ
- ಅರಿಶಿಣದ ಪುಡಿ
- ಬೆಳ್ಳುಳ್ಳಿ
- ಉಪ್ಪು
- ಎಣ್ಣೆ
ಹೀರೆಕಾಯಿ ಗ್ರೇವಿ ಮಾಡುವ ವಿಧಾನ ಇಲ್ಲಿದೆ
ಮೊದಲು ಪಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಕಡಲೆ ಬೀಜ ಹಾಕಿಕೊಂಡು ಪ್ರೈ ಮಾಡಬೇಕು. 5 ನಿಮಿಷ ಹುರಿದುಕೊಂಡು ತೆಗೆದು ಬದಿಗಿಟ್ಟುಕೊಳ್ಳಿ. ಈಗ ಬಾಣಲೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಕರಿಬೇವು ಹಾಕಿ ಬಿಸಿ ಮಾಡಿ. ಅನಂತರ ಇದಕ್ಕೆ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಸಾಂಬಾರ್ ಪೌಡರ್ ಹಾಕಿಕೊಳ್ಳಿ, 3 ಸ್ಪೂನ್ ಹಾಕಿದರೆ ಸಾಕು, ಹಾಗೆ ಸ್ವಲ್ಪ ಅರಶಿಣ ಪುಡಿ ಹಾಕಿ ಮಿಕ್ಸ್ ಮಾಡಿ 1 ನಿಮಿಷ ಫ್ರೈ ಮಾಡಿ. ಈಗ ಸಣ್ಣದಾಗಿ ಹೆಚ್ಚಿದ ಟೊಮೆಟೋ ಹಾಕಿಕೊಳ್ಳಿ, 3ರಿಂದ 5 ನಿಮಿಷ ಫ್ರೈ ಮಾಡಿಕೊಳ್ಳಿ. ಒಂದು ಗೊಜ್ಜಿನ ರೀತಿ ಇದು ಕಾಣಬೇಕು. ಅನಂತರ ಸಣ್ಣದಾಗಿ ಕತ್ತರಿಸಿಕೊಂಡಿರುವ ಹೀರೆಕಾಯಿಯನ್ನು ಇದಕ್ಕೆ ಹಾಕಬೇಕು.
ಇದಕ್ಕೆ ಸ್ವಲ್ಪ ನೀರು, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಹಾಗೆ 10 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಲು ಬಿಡಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ. ಈಗ ತಣ್ಣಗಾಗಿರುವ ಕಡಲೆ ಬೀಜವನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಂಡು ಬೌಲ್‌ಗೆ ಹಾಕಿ. ಈಗ ಮಿಕ್ಸಿ ಜಾರ್‌ಗೆ ತೆಂಗಿನಕಾಯಿ ತುರಿ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಲೆ ಮೇಲೆ ಬೇಯುತ್ತಿರುವ ಹೀರೆಕಾಯಿಗೆ ಪುಡಿ ಮಾಡಿದ ಕಡಲೆ ಬೀಜದ ಪುಡಿ, ತೆಂಗಿನಕಾಯಿ ಪೇಸ್ಟ್ ಅನ್ನು ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಹಾಕಿಕೊಂಡು ಮತ್ತೆ ಬೇಯಲು ಬಿಡಿ. 2 ನಿಮಿಷ ಕುದಿ ಬಂದರೆ ಸಾಕಾಗುತ್ತದೆ. ಇಷ್ಟಾದರೆ ಒಲೆ ಆಫ್ ಮಾಡಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿ ಮಾಡಿದರೆ ಹೀರೆಕಾಯಿ ಗ್ರೇವಿ ಸಿದ್ದವಾಗುತ್ತದೆ.



Click it and Unblock the Notifications