Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಿರಿಯರು ಮಾಡುತ್ತಿದ್ದ ಹೀರೆಕಾಯಿ ಮಸ್ಕಾಯಿ ಸಾರು ಮಾಡಿ..! ಹೇಗೆ ಮಾಡೋದು ಗೊತ್ತಾ?
ನೀವು ಊಟಕ್ಕೆ ಹಲವು ಬಗೆಯ ಸಾಂಬಾರ್, ತಿಳಿಸಾರು, ತರಕಾರಿ ಸಾರು ಮಾಡಿರುತ್ತೀರಿ. ಬಹುತೇಕರ ಮನೆಯಲ್ಲಿ ಮಿಕ್ಸ್ ತರಕಾರಿ ಸಾರು ಮಾಡಿಯೇ ಮಾಡುತ್ತಾರೆ. ಆದ್ರೆ ಹಿಂದೆ ನಮ್ಮ ಹಿರಿಯರು ಮಾಡುತ್ತಿದ್ದ ಕೆಲವು ಅಡುಗೆಗಳನ್ನು ನಾವೀಗ ಮರೆತ್ತಿದ್ದೇವೆ. ಅಂತಹ ಹಲವು ಅಡುಗೆ ಪ್ರಕಾರಗಳಲ್ಲಿ ಈ ಹೀರೇಕಾಯಿ ಮಸ್ಕಾಯಿ ಸಹ ಒಂದಾಗಿದೆ.
ಹೀರೆಕಾಯಿ ಮಸ್ಕಾಯಿ ಹಿಂದೆ ಹಿರಿಯರು ಹೆಚ್ಚಾಗಿ ಊಟಕ್ಕೆ ಮಾಡಿಕೊಳ್ಳುತ್ತಿದ್ದರು, ಆದ್ರೆ ಇತ್ತೀಚಿಗೆ ಈ ರುಚಿ ರುಚಿಯ ಖಾದ್ಯ ಮಾಡುವುದನ್ನೇ ಮರೆತ್ತಿದ್ದೇವೆ. ಹೊಸ ಬಗೆಯ ಅಡುಗೆಗಳ ಹಿಂದೆ ಬಿದ್ದ ನಾವು ಈ ರುಚಿ ರುಚಿಯ ಅಡುಗೆ ಮರೆತು ಬಿಟ್ಟಿದ್ದೇವೆ. ಹೀರೆಕಾಯಿ ಮಸ್ಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಊಟದ ಜೊತೆಗೆ ಇದನ್ನು ಮಾಡಿದರೆ ಅದರ ರುಚಿಗೆ ನೀವು ಫಿದಾ ಆಗುತ್ತೀರಿ.

ಹಾಗಾದ್ರೆ ಹೀರೆಕಾಯಿ ಮಸ್ಕಾಯಿ ಮಾಡುವುದು ಹೇಗೆ? ಹಿರಿಯರು ಮಡಕೆಯಲ್ಲಿ ಮಾಡುತ್ತಿದ್ದ ಈ ಖಾದ್ಯವನ್ನು ಮತ್ತೆ ನಾವೀಗ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಹೀರೆಕಾಯಿ ಮಸ್ಕಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಹೀರೆಕಾಯಿ ಮಸ್ಕಾಯಿ ಮಾಡುವುದು ಹೇಗೆ? ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೀರೆಕಾಯಿ ಮಸ್ಕಾಯಿ ಮಾಡಲು ಬೇಕಾಗುವ ಪದಾರ್ಥಗಳು
- ಹೀರೆಕಾಯಿ - 2
- ಒಣ ಮೆಣಸು
- ಈರುಳ್ಳಿ - 4
- ತೊಗರಿ ಬೇಳೆ
- ಅವರೆ ಬೇಳೆ
- ಜೀರಿಗೆ
- ಸಾಸಿವೆ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಉಪ್ಪು
- ಎಣ್ಣೆ
- ಟೊಮೆಟೋ-2
- ಬೆಳ್ಳುಳ್ಳಿ
ಹೀರೆಕಾಯಿ ಮಸ್ಕಾಯಿ ಮಾಡುವುದು ಹೇಗೆ?
ಮೊದಲು ಎರಡು ಹೀರೆಕಾಯಿ ತೆಗೆದುಕೊಂಡು ಅದರ ಸಿಪ್ಪೆ ತೆಗದುಕೊಳ್ಳಿ. ನಂತರ ಚೆನ್ನಾಗಿ ತೊಳೆದು ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ತಟ್ಟೆಯಲ್ಲಿ ಹಾಕಿ ಇಡಿ. ಈಗ ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಅವರೇ ಬೇಳೆ ಹಾಗು ತೊಗೆರಿ ಬೇಳೆ ಹಾಕಿ. ನಂತರ ಇದಕ್ಕೆ ಹೆಚ್ಚಿಟ್ಟುಕೊಂಡಿರುವ ಹೀರೆಕಾಯಿ ಹಾಕಿ. ಜೊತೆಗೆ ಹಸಿ ಮೆಣಸು, ಈರುಳ್ಳಿ, ಟೊಮೆಟೋ, ಜೀರಿಗೆ, ಎಣ್ಣೆ, ಅರಶಿನ, ಉಪ್ಪು ಹಾಕಿ ಈ ಎಲ್ಲಾ ವಸ್ತು ಬೇಯಲು ಬೇಕಾದ ಅಗತ್ಯ ನೀರು ಹಾಕಿ ಮುಚ್ಚಳ ಮುಚ್ಚಿ.
ಮಧ್ಯಮ ಉರಿಯಲ್ಲಿ ಮೂರು ಸೀಟಿ ಹೊಡೆಯಲು ಬಿಡಿ. ಮೂರು ಸೀಟಿ ಹೊಡೆದರೆ ಈ ಎಲ್ಲಾ ವಸ್ತುಗಳು ಚೆನ್ನಾಗಿ ಬೇಯುತ್ತವೆ. ಮೂರು ಸೀಟಿಯ ನಂತರ ಒಲೆ ಆಫ್ ಮಾಡಿ ಕುಕ್ಕರ್ ತಣ್ಣಗಾಗಲು ಬಿಡಿ. ನಂತರ ಕುಕ್ಕರ್ ಮುಚ್ಚಳ ತೆಗೆದು ತಿರುಗಿಸಿಕೊಳ್ಳಿ, ಬೆಂದಿರುವ ವಸ್ತುಗಳು ಸ್ವಲ್ಪ ಪುಡಿಯಾಗುವಂತೆ ತಿರುಗಿಸಿಕೊಳ್ಳಿ.
ಈಗ ಮುಚ್ಚಳ ತೆಗೆದು ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟು ಕುದಿಯಲು ಬಿಡಿ. ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಈಗ ಇನ್ನೊಂದು ಕಡೆಯಲ್ಲಿ ಒಗ್ಗರಣೆ ಮಾಡಿಕೊಳ್ಳಿ. ಒಂದು ಪಾತ್ರೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಳ್ಳಿ. ಈ ಎಣ್ಣೆ ಬಿಸಿ ಆದಾಗ ಜೀರಿಗೆ, ಸಾಸಿವೆ, ಬೆಳ್ಳುಳ್ಳಿ, ಕರಿಬೇವಿನ ಸೊಪ್ಪು, ಒಣಮೆಣಸು ಹಾಕಿ ಫ್ರೈ ಮಾಡಿ. 30 ಸೆಕೆಂಡ್ ಬಳಿಕ ಒಂದು ಸಣ್ಣ ಈರುಳ್ಳಿ ಕತ್ತರಿಸಿಕೊಂಡು ಹಾಕಿ.
ನಂತರ ಚೆನ್ನಾಗಿ ಫ್ರೈ ಮಾಡಿದ ಬಳಿಕ ಒಲೆ ಮೇಲೆ ಕುದಿಯುತ್ತಿರುವ ಸಾರಿಗೆ ಈ ಒಗ್ಗರಣೆ ಹಾಕಿ ಚೆನ್ನಾಗಿ ತಿರುಗಿಸಿ. ಕೊನೆಯದಾಗಿ ಒಲೆ ಆಫ್ ಮಾಡಿಕೊಂಡು ಕೊತ್ತಂಬರಿ ಸೊಪ್ಪು ಹಾಕಿ ತಿರುಗಿಸಿಕೊಂಡು ಸಾವು ಕೆಳಗಿಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಹೀರೆಕಾಯಿ ಮಸ್ಕಾಯಿ ಸಾರು ರೆಡಿಯಾಗುತ್ತದೆ. ಇದು ಅನ್ನ ಹಾಗೂ ಮುದ್ದೆಗೆ ಹೇಳಿ ಮಾಡಿಸಿದ ಖಾದ್ಯವಾಗಲಿದೆ. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications