Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಂದು ಹನಿ ಎಣ್ಣೆ ಬೇಡ, ತುಪ್ಪವೂ ಬೇಡ! ಬಾಯಲ್ಲಿಟ್ಟರೆ ಅಮೃತವೇ ಸರಿ.. ಈ ಕಿಚಡಿ ಮಾಡುವುದು ಹೇಗೆ?
ಒಂದು ಹನಿ ಎಣ್ಣೆ ಬೇಡ, ಬೆಣ್ಣೆಯೂ ಬೇಡ! ಬಾಯಲ್ಲಿಟ್ಟರೆ ಅಮೃತವೇ ಸರಿ.. ಈ ಕಿಚಡಿ ರುಚಿ ಎಂದಿಗೂ ಮರೆಯಲ್ಲ. ಡಯಟ್ ಮಾಡುವವರಿಗೆ ಬೆಸ್ಟ್. ಹೌದು, ಬೆಣ್ಣೆ ಅಥವಾ ಎಣ್ಣೆ ಇಲ್ಲದೆ ರುಚಿಕರ ಕಿಚಡಿ (oil free khichdi) ತಯಾರಿಸುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಬನ್ನಿ, ಒಂದು ಹನಿ ಎಣ್ಣೆ ಅಥವಾ ತುಪ್ಪ ಇಲ್ಲದೆ ಕಿಚಡಿ ಮಾಡುವುದು ಹೇಗೆ ಎಂದು ತಿಳಿಯೋಣ.
ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಕಡಿಮೆ ಎಣ್ಣೆ ಮತ್ತು ಮಸಾಲೆಗಳಿಂದ ತಯಾರಿಸಿದ ಆಹಾರಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಅದರಲ್ಲೂ ಎಣ್ಣೆ, ತುಪ್ಪವಿಲ್ಲದೆ ತಯಾರಿಸುವ ಅಡುಗೆಗಳಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಎಣ್ಣೆ ಅಥವಾ ತುಪ್ಪವಿಲ್ಲದೆ ತಯಾರಿಸಬಹುದಾದ ಟೇಸ್ಟಿ ಭಕ್ಷ್ಯಗಳಲ್ಲಿ ಕಿಚಡಿ (oil free khichdi recipe) ಸಹ ಒಂದು. ಈ ರೆಸಿಪಿ ತಯಾರಿಸಲು ಹೆಚ್ಚು ಸಮಯ ಬೇಕಾಗಿಲ್ಲ. ಕಡಿಮೆ ಸಾಮಗ್ರಿಗಳೊಂದಿಗೆ ಉತ್ತಮ ರುಚಿಯನ್ನು ಪಡೆಯಬಹುದು.

ಎಣ್ಣೆ ಅಥವಾ ತುಪ್ಪವಿಲ್ಲದ ಕಿಚಡಿಗೆ ಬೇಕಾಗುವ ಸಾಮಗ್ರಿಗಳು
• ಅಕ್ಕಿ - 250 ಗ್ರಾಂ ಅಕ್ಕಿ (ಒಂದು ಗ್ಲಾಸ್)
• ಹೆಸರುಬೇಳೆ - 125 ಗ್ರಾಂ ಹೆಸರುಬೇಳೆ (ಅರ್ಧ ಗ್ಲಾಸ್)
• ಜೀರಿಗೆ - 1 ಸ್ಪೂನ್
• ಲವಂಗ - 5
• ಏಲಕ್ಕಿ - 2
• ಸ್ಟಾರ್ ಅನೀಸ್ - 1
• ಬಿರಿಯಾನಿ ಎಲೆ - 2
• ಕಲ್ಲು ಹೂ
• ಹಸಿ ಮೆಣಸಿನಕಾಯಿ
• ನೀರು
• ಉಪ್ಪು
• ಮೆಣಸು - 10 ಕಾಳು
• ಈರುಳ್ಳಿ - 1
• ಬೀನ್ಸ್
• ಒಣ ಕೊಬ್ಬರಿ ತುರಿ - 3 ಸ್ಪೂನ್
• ಕ್ಯಾರೆಟ್
• ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಸ್ಪೂನ್
• ಗೋಡಂಬಿ
• ಕೊತ್ತಂಬರಿ ಸೊಪ್ಪು
• ಕರಿಬೇವಿನ ಎಲೆ ಅಥವಾ ಸೊಪ್ಪು

ಎಣ್ಣೆ ಅಥವಾ ತುಪ್ಪವಿಲ್ಲದೆ ಕಿಚಡಿ ತಯಾರಿಸುವ ವಿಧಾನ
ಮೊದಲಿಗೆ ಒಂದು ದೊಡ್ಡ ಬಟ್ಟಲಿನಲ್ಲಿ ಅಕ್ಕಿ ಮತ್ತು ಹೆಸರುಬೇಳೆ ತೆಗೆದುಕೊಳ್ಳಿ. ಅದನ್ನು ನೀರು ಹಾಕಿ ಚೆನ್ನಾಗಿ ತೊಳೆಯಿರಿ. ತೊಳೆದ ಅಕ್ಕಿ ಮತ್ತು ಹೆಸರುಬೇಳೆ ಮಿಶ್ರಣಕ್ಕೆ ಮತ್ತೆ ನೀರು ಹಾಕಿ 15 ನಿಮಿಷಗಳ ಕಾಲ ನೆನೆಸಿಡಿ. ನಂತರ ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ಜೀರಿಗೆ, ಏಲಕ್ಕಿ,ಬಿರಿಯಾನಿ ಎಲೆ, ಲವಂಗ, ದಾಲ್ಚಿನ್ನಿ, ಮೆಣಸು, ಕಲ್ಲು ಹೂ, ಸ್ಟಾರ್ ಅನೀಸ್ ಹಾಕಿ ಒಂದು ನಿಮಿಷ ಹುರಿಯಿರಿ.
ನಂತರ ಅದಕ್ಕೆ ಸಣ್ಣಗೆ ಮತ್ತು ಉದ್ದವಾಗಿ ಹೆಚ್ಚಿದ ಈರುಳ್ಳಿ, ಸ್ವಲ್ಪ ನೀರು ಸೇರಿಸಿ ಹುರಿಯಿರಿ. ಈರುಳ್ಳಿ ಗೋಲ್ಡನ್ ಬ್ರೌನ್ ಆದ ನಂತರ, ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಆಲೂಗಡ್ಡೆ, ಬೀನ್ಸ್, ಕಾಲು ಕಪ್ ಕ್ಯಾರೆಟ್, ಗೋಡಂಬಿ, ಉದ್ದವಾಗಿ ಸೀಳಿದ ಹಸಿ ಮೆಣಸಿನಕಾಯಿ ಹಾಕಿ ಸುಮಾರು 2 ರಿಂದ 3 ನಿಮಿಷ ಬೇಯಿಸಿ. ಅಡುಗೆ ಮಾಡುವಾಗ ಯಾವುದೇ ಸಾಮಗ್ರಿ ತಳ ಹಿಡಿಯದಂತೆ ನೋಡಿಕೊಳ್ಳಲು, ಆಗಾಗ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸುತ್ತಾ ಇರಿ. ನಂತರ ಅದಕ್ಕೆ ಒಣ ಕೊಬ್ಬರಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಗಾಗ ನೀರು ಹಾಕಿ ಫ್ರೈ ಮಾಡಿ.
ನಂತರ ನೆನೆಸಿದ ಅಕ್ಕಿ ಮತ್ತು ಹೆಸರುಬೇಳೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಅದರಲ್ಲಿನ ನೀರು ಆರುವವರೆಗೆ 2-3 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ. ನಂತರ ನೀರು, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಮತ್ತು ಪುದೀನಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ. ಹೆಚ್ಚಿನ ಉರಿಯಲ್ಲಿ 2 ಸೀಟಿ ಬರುವವರೆಗೆ ಬೇಯಿಸಿ, ನಂತರ ಒಲೆ ಆಫ್ ಮಾಡಿ. ಇಷ್ಟು ಮಾಡಿದರೆ, ಬಿಸಿ ಬಿಸಿಯಾದ ಕಿಚಡಿ ಸಿದ್ಧ.



Click it and Unblock the Notifications