Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಿಸ್ಟರ್.. ತೂಕ ಇಳಿಸಬೇಕಾ? ಮನೆಯಲ್ಲೇ ಓಟ್ಸ್ ಪೋಹಾ ಮಾಡಿ ತಿನ್ನಿ! ತುಂಬಾ ಈಸಿ
ಇನ್ಮುಂದೆ ಗೃಹಿಣಿಯರಿಗೆ ನೋ ಟೆನ್ಷನ್. ಮಾರ್ನಿಂಗ್ ಟಿಫಿನ್ ಬಗ್ಗೆ ಚಿಂತೆ ಬೇಡ. ಬೆಳಗ್ಗಿನ ತಿಂಡಿಗೆ ಓಟ್ಸ್ ಪೋಹಾ (Oats Poha) ಮಾಡಿ, ಕೆಲಸಕ್ಕೆ ಓಡಿ. ಇದು ತೂಕ ಇಳಿಸುವಲ್ಲಿ ಪರಿಣಾಮಕಾರಿ. ಹೌದು, ಬೆಳಗ್ಗೆ ಆಯ್ತು ಅಂದ್ರೆ ಸಾಕು, ಬಹುತೇಕ ಗೃಹಿಣಿಯರಿಗೆ ಬೆಳಗ್ಗೆ ಏನಪ್ಪಾ ತಿಂಡಿ ಮಾಡೋದು ಎಂಬ ಯೋಚನೆ ತಲೆ ತಿನ್ನುತ್ತದೆ. ನಮ್ಮಲ್ಲಿ ಅನೇಕ ರೀತಿಯ ಆರೋಗ್ಯಕರ ತಿಂಡಿಯ ಆಯ್ಕೆಗಳು ಇದೆ. ಆದರೆ, ಮಕ್ಕಳಿಗೆ ಪೌಷ್ಟಿಕ ಆಹಾರ ಮಾಡಿಕೊಡುವುದು ಒಳ್ಳೆಯದು. ಬಹುತೇಕ ಅಮ್ಮಂದಿರು, ತಾವು ಮಾಡುವ ತಿಂಡಿ ರುಚಿ ಮತ್ತು ಪೌಷ್ಟಿಕವಾಗಿರಬೇಕು ಅಂತ ಬಯಸುತ್ತಾರೆ. ಅಂತಹವರು ಬೆಳಗ್ಗೆ ಓಟ್ಸ್ ಪೋಹಾ ಮಾಡಬಹುದು.
ಹೌದು, ಬೆಳಗ್ಗೆ ಎದ್ದ ಬಳಿಕ ಆರೋಗ್ಯಕರ ಮತ್ತು ರುಚಿಕರವಾದ ಉಪಹಾರ ತಿನ್ನಲು ಬಯಸಿದರೆ, ನೀವು ಓಟ್ಸ್ ಪೋಹಾ (Oats Poha Recipe) ಮಾಡಿ. ಓಟ್ಸ್‌ನಿಂದ ಟೇಸ್ಟಿಯಾದ ಪೋಹಾ ತಯಾರಿಸಬಹುದು. ಇದನ್ನು ಮಾಡುವುದು ತುಂಬಾ ಸುಲಭ. ಓಟ್ಸ್ ಪೋಹಾ ಕೇವಲ 15 ನಿಮಿಷಗಳಲ್ಲಿ ತಯಾರಾಗುತ್ತದೆ. ಈ ಪೋಹಾ ತಿನ್ನುವುದರಿಂದ ತೂಕ ಇಳಿಸಿಕೊಳ್ಳಲು ಸಹ ಸಹಾಯವಾಗುತ್ತದೆ. ಡಯಟ್ ಮಾಡುವವರು ಓಟ್ಸ್ ಪೋಹಾ ತಿನ್ನಬಹುದು. ಇದನ್ನು ವಯಸ್ಕರು ಮತ್ತು ಮಕ್ಕಳು ಇಷ್ಟಪಡುತ್ತಾರೆ. ಆರೋಗ್ಯಕರ ಮತ್ತು ರುಚಿಕರವಾದ ಓಟ್ಸ್ ಪೋಹಾವನ್ನು ಹೇಗೆ ಮಾಡುವುದು ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಓಟ್ಸ್ ಪೋಹಾ ತಯಾರಿಸಲು ಬೇಕಾಗಿರುವ ಪದಾರ್ಥಗಳು
• ರೋಲ್ಡ್ ಓಟ್ಸ್
• ಹುರಿದ ಕಡಲೆಕಾಯಿ
• ಈರುಳ್ಳಿ
• ಕ್ಯಾರೆಟ್
• ಕ್ಯಾಪ್ಸಿಕಂ
• ಬೀನ್ಸ್
• ಹಸಿರು ಬಟಾಣಿ
• ಕರಿಬೇವು
• ಸಾಸಿವೆ
• ಜೀರಿಗೆ
• ಕೊತ್ತಂಬರಿ ಪುಡಿ
• ಕೆಂಪು ಮೆಣಸಿನ ಪುಡಿ
• ಅರಿಶಿನ ಪುಡಿ
• ಅಡುಗೆ ಎಣ್ಣೆ (ಸಾಸಿವೆ ಎಣ್ಣೆ)
• ರುಚಿಗೆ ತಕ್ಕಷ್ಟು ಉಪ್ಪು
ಓಟ್ಸ್ ಪೋಹಾ ಪಾಕವಿಧಾನ
ಮೊದಲು ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ (ಸಾಸಿವೆ ಎಣ್ಣೆ) ಹಾಕಿ. ಎಣ್ಣೆ ಬಿಸಿಯಾದಾಗ, ಒಂದು ಚಮಚ ಸಾಸಿವೆ ಮತ್ತು ಸ್ವಲ್ಪ ಜೀರಿಗೆ ಹಾಕಿ ಸಿಡಿಯಲು ಬಿಡಿ. 8 ರಿಂದ 10 ಕರಿಬೇವು ಹಾಕಿ ಮತ್ತು ಒಂದು ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ. ಈಗ 1/4 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ. ಗ್ಯಾಸ್ ಅನ್ನು ಮಧ್ಯಮ ಉರಿಯನ್ನು ಇಡಿ. ಈರುಳ್ಳಿಯ ಬಣ್ಣ ಸ್ವಲ್ಪ ಬದಲಾದಾಗ, ಸಣ್ಣಗೆ ಹೆಚ್ಚಿದ ಬೀನ್ಸ್, ಕ್ಯಾಪ್ಸಿಕಂ, ಕ್ಯಾರೆಟ್ ಮತ್ತು ಹಸಿರು ಬಟಾಣಿ ಮುಂತಾದ ತರಕಾರಿಗಳನ್ನು ಹಾಕಿ. ತರಕಾರಿಗಳನ್ನು ಚೆನ್ನಾಗಿ ಬೇಯಿಸಿ. ತರಕಾರಿಗಳು ಸ್ವಲ್ಪ ಬೆಂದ ಬಳಿಕ, ಅರ್ಧ ಚಮಚ ಅರಿಶಿನ ಹಾಕಿ.
ನೀವು ತರಕಾರಿಗಳೊಂದಿಗೆ ಬೀಟ್ರೂಟ್ ಅಥವಾ ಟೊಮೆಟೊ ಸೇರಿದಂತೆ ಇತರೆ ತರಕಾರಿಗಳನ್ನು ಸಹ ಬಳಸಬಹುದು. ಇಲ್ಲಿ ನಾವು ಟೊಮೆಟೊ ಇಲ್ಲದೆ ಓಟ್ಸ್ ಪೋಹಾ ತಯಾರಿಸುತ್ತಿದ್ದೇವೆ. ಎಲ್ಲಾ ತರಕಾರಿಗಳು ಬೇಯಿಸಿದಾಗ, ಅದಕ್ಕೆ ಓಟ್ಸ್ ಸೇರಿಸಿ. ತರಕಾರಿಗಳಿಗೆ ಒಂದು ಕಪ್ ಸಾದಾ ಓಟ್ಸ್ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಂತೆ ಉಪ್ಪು ಹಾಕಿ. ನೀವು ತೂಕ ಇಳಿಸಿಕೊಳ್ಳಲು ಓಟ್ಸ್ ಪೋಹಾ ಮಾಡುತ್ತಿದ್ದರೆ, ಅದರಲ್ಲಿ ಓಟ್ಸ್ ಪ್ರಮಾಣವನ್ನು ಸ್ವಲ್ಪ ಕಡಿಮೆ ಇರಲಿ. ಈಗ ಅಂಗೈಗೆ 2 ರಿಂದ 3 ಬಾರಿ ನೀರನ್ನು ತೆಗೆದುಕೊಂಡು ಓಟ್ಸ್ ಮೇಲೆ ಹಾಕಿ.
ಈಗ ಓಟ್ಸ್ ಪೋಹಾವನ್ನು ಮುಚ್ಚಿ 3 ರಿಂದ 4 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. ಬಳಿಕ ಓಟ್ಸ್ ಅನ್ನು ಒಮ್ಮೆ ತೆರೆದು ಮಿಕ್ಸ್ ಮಾಡಿ. ಓಟ್ಸ್ ತುಂಬಾ ಒಣಗಿದಂತೆ ಕಂಡರೆ, ಸ್ವಲ್ಪ ನೀರು ಹಾಕಿ ಮುಚ್ಚಿ. ಸ್ವಲ್ಪ ಸಮಯ ಬೇಯಿಸಿ. ಓಟ್ಸ್ ಮೃದುವಾಗಿದ್ದರೆ, ಗ್ಯಾಸ್ ಆಫ್ ಮಾಡಿ. ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನಿಂಬೆ ರಸವನ್ನು ಹಿಂಡಿ ಮುಚ್ಚಿ. ಸ್ವಲ್ಪ ಬೇಯಿಸಿದ ಬಳಿಕ ಕೆಳಗಡೆ ಇಳಿಸಿ. ಇಷ್ಟು ಮಾಡಿದರೆ, ಬಿಸಿಬಿಸಿ ಓಟ್ಸ್ ಪೋಹಾ ಸವಿಯಲು ಸಿದ್ಧವಾಗುತ್ತದೆ. ಓಟ್ಸ್ ಬಳಸಿ ಆರೋಗ್ಯಕರ ಮತ್ತು ರುಚಿಕರವಾದ ಪೋಹಾ ತಯಾರಿಸಬಹುದು ಅಂದರೆ ನೀವು ನಂಬಲ್ಲ. ನೀವು ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಉಪಹಾರವಾಗಿದೆ.



Click it and Unblock the Notifications