Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಂಚಿನ ದೋಸೆ ಮಾಡೋದು ಹೇಗೆ? 4 ವಸ್ತು ಇದ್ದರೆ ಸಾಕು..!
ಮನೆಯಲ್ಲಿ ಎಲ್ಲರು ಇಷ್ಟಪಟ್ಟು ಸೇವಿಸುವ ಖಾದ್ಯ ಅಥವಾ ತಿಂಡಿ ಯಾವುದಾದರು ಇದ್ದರೆ ಅದು ದೋಸೆ. ನೀವು ಯಾವುದೇ ದೋಸೆ ಮಾಡಿದರೆ ಕ್ಷಣದಲ್ಲಿ ಖಾಲಿಯಾಗುತ್ತದೆ. ಏಕೆಂದರೆ ದೋಸೆಯ ರುಚಿಯೇ ಅಂತದ್ದು, ಹೀಗಿರುವಾಗ ಎಂತ ದೋಸೆ ಮಾಡಿದರು ಮನೆಯಲ್ಲಿ ಖಾಲಿ ಆಗುವುದು ಪಕ್ಕ.
ಆದರೆ ನೀವು ಯಾವಾಗಲು ಒಂದೇ ರೀತಿಯ ದೋಸೆ ಮಾಡುತ್ತಿದ್ದರೆ ಎಂತವರಿಗೂ ಬೇಸರವಾಗುತ್ತದೆ. ಏಕೆಂದರೆ ದೋಸೆಯಲ್ಲಿ ವೆರೈಟಿ ಖಾದ್ಯದ, ವಿಭಿನ್ನ ರುಚಿಯ ದೋಸೆ ಮಾಡಬಹುದು. ಕೇವಲ ಮಸಾಲೆ, ಈರುಳ್ಳಿ ದೋಸೆ, ರವೆ ದೋಸೆಯಂತಹ ಹೋಟೆಲ್ ರುಚಿಯ ದೋಸೆ ಮಾತ್ರವಲ್ಲ. ಟೊಮೆಟೋ ದೋಸೆ, ಆಲೂ ದೋಸೆ ಸೇರಿ ವಿವಿಧ ರುಚಿಯ ದೋಸೆಗಳು ಸವಿಯಲು ನೀಡಬಹುದು.

ಇಂತಹ ವೆರೈಟಿ ದೋಸೆಯಲ್ಲಿ ಇಂದು ನಾವು ಹಂಚಿನ ದೋಸೆ ಮಾಡುವುದ ಕುರಿತುನೋಡೋಣ. ಹೌದು ನೀರು ದೋಸೆ, ಉದ್ದಿನ ದೋಸೆಯಂತೆ. ಈ ಹಂಚಿನ ದೋಸೆ ಸಹ ಸಖತ್ ಫೇಮಸ್, ಅದರಲ್ಲೂ ಕರಾವಳಿ ಮಲೆನಾಡು ಭಾಗದಲ್ಲಿ ಈ ಹಂಚಿನ ದೋಸೆ ಹೆಚ್ಚಾಗಿ ಮಾಡುತ್ತಾರೆ.
ಹಾಗಾದ್ರೆ ಈ ಹಂಚಿನ ದೋಸೆ ಮಾಡುವುದು ಹೇಗೆ? ಹಂಚಿನ ದೋಸೆ ಮಾಡಲು ಬೇಕಾಗುವ ಪದಾರ್ಥಗಳೇನು? ದೋಸೆ ಮಾಡುವ ಸರಿಯಾದ ವಿಧಾನ ಹಾಗೂ ಈ ದೋಸೆಗೆ ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಂಚಿನ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ - 1 ಕಪ್
- ಮೆಂತ್ಯ- 1 ಚಮಚ
- ಉದ್ದು-1 ಚಮಚ
- ಎಣ್ಣೆ
- ಉಪ್ಪು
- ಅವಲಕ್ಕಿ
- ತೆಂಗಿನ ತುರಿ
- ಸಕ್ಕರೆ
ಹಂಚಿನ ದೋಸೆ ಮಾಡುವುದು ಹೇಗೆ?
ಮೊದಲು ಇದಕ್ಕೆ ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನೋಡೋಣ. ಒಂದು ಬೌಲ್‌ನಲ್ಲಿ ಅಕ್ಕಿ, ಉದ್ದು, ಮೆಂತ್ಯ ಹಾಕಿ ಚೆನ್ನಾಗಿ ತೊಳೆದು ನೀರು ಹಾಕಿ 5 ಗಂಟೆ ನೆನೆಸಿಟ್ಟುಕೊಳ್ಳಿ. ಇದಾದ ಬಳಿಕ ರುಬ್ಬಿಕೊಳ್ಳುವ ಮೊದಲು ಸ್ವಲ್ಪ ಅವಲಕ್ಕಿ ಹಾಕಿ ನೀರಿನಲ್ಲಿ ನೆನೆಸಿಡಿ.
ಬಳಿಕ ಮಿಕ್ಸಿ ಜಾರ್‌ಗೆ ಎಲ್ಲವನ್ನೂ ಹಾಕಿಕೊಂಡು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಇದಾದ ಬಳಿಕ ನೆನೆಸಿಟ್ಟ ಅವಲಕ್ಕಿ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ತೆಂಗಿನ ತುರಿ ಹಾಕಿಕೊಂಡು ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.
ಈ ರುಬ್ಬಿದ ಹಿಟ್ಟನ್ನು ಮೊದಲು ರುಬ್ಬಿಕೊಂಡ ಅಕ್ಕಿ ಹಿಟ್ಟಿಗೆ ಹಾಕಿಕೊಂಡು ಕೈಯಲ್ಲಿ ಚೆನ್ನಾಗಿ ಕಲಸಿಕೊಳ್ಳಿ.ಬಳಿಕ ಇದನ್ನು ಒಂದು ಪಾತ್ರೆಯ ಮುಚ್ಚಿ ಇಟ್ಟು ಹುಳಿ ಬಿಡಲು ಇಡಬೇಕು. ಒಂದು ರಾತ್ರಿ ಪೂರ್ಣವಾಗಿ ಇಡಬೇಕು.
ಮಾರನೇ ದಿನ ಹಿಟ್ಟು ತೆಗೆದು ನೋಡಿ. ಬಳಿಕ ಇದಕ್ಕೆ ಉಪ್ಪು ಹಾಗೂ ಸ್ವಲ್ಪ ಸಕ್ಕರೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದಾದ ಬಳಿಕ ದೋಸೆ ಮಾಡುವ ಹಂಚನ್ನು ಒಲೆ ಮೇಲೆ ಇಟ್ಟು ಎಣ್ಣೆ ಹಚ್ಚಿ ಹಂಚಿನ ಮಧ್ಯದಲ್ಲಿ ಚಪಾತಿ ಗಾತ್ರದಲ್ಲಿ ಹಿಟ್ಟು ಹಾಕಿ. ಎರಡೂ ಕಡೆಗಳಲ್ಲಿ ದೋಸೆಯನ್ನು ಕಾಯಿಸಿದರೆ ನಿಮ್ಮ ಮುಂದೆ ಹಂಚಿನ ದೋಸೆ ರೆಡಿಯಾಗಿರುತ್ತದೆ.
ಇದಕ್ಕೆ ಕಾಯಿ ಚಟ್ನಿ ಇಲ್ಲವೇ ಯಾವುದೇ ಚಟ್ನಿ ಇದ್ದರೂ ರುಚಿ ನೀಡಲಿದೆ. ಜೊತೆಗೆ ಯಾವುದಾದರು ಸಾಂಬಾರ್ ಇದ್ದರೂ ಇದರ ರುಚಿ ಹೇಳತೀರದು. ಉಳಿದೆಲ್ಲಾ ದೋಸೆಗಳಿಗಿಂತ ಇದು ಭಿನ್ನವಾಗಿ ಕಾಣಬಹುದು. ಏಕೆಂದರೆ ಇದು ಸ್ವಲ್ಪ ದಪ್ಪವಾಗಿ ಮಾಡಲಾಗುತ್ತದೆ. ಉಳಿದ ದೋಸೆಗಿಂತ ಇದು ವಿಭಿನ್ನ ರುಚಿ ನೀಡಲಿದೆ. ಹೆಚ್ಚು ದಪ್ಪವಿರುವ ಕಾರಣ ಒಬ್ಬರು ಎರಡು ದೋಸೆ ಸವಿಯಬಹುದು.



Click it and Unblock the Notifications