Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಾಗಲಕಾಯಿ ರೋಸ್ಟ್ ಮಾಡಿದ್ರೆ ಮಕ್ಕಳು ಕೂಡ ಸವಿಯೋದು ಖಚಿತ!!
ಹಾಗಲಕಾಯಿ ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದನ್ನು ನೀವು ಕೂಡ ತಿಳಿದಿರಬಹುದು. ಹಾಗಲಕಾಯಿ ಬಳಸಿ ಹಲವು ರೀತಿಯ ಖಾದ್ಯ ಮಾಡಿ ಸವಿಯುವುದು ಕೂಡ ಮಾಡಬಹುದು. ಆದ್ರೆ ಹಾಗಲಕಾಯಿ ಎಂದರೆ ಹಲವರು ಮೂಗು ಮುರಿಯುತ್ತಾರೆ. ಹಾಗಲಕಾಯಿ ತನ್ನ ಕಹಿಯಾದ ಗುಣದಿಂದ ಎಲ್ಲರು ಇಷ್ಟಪಡುವುದಿಲ್ಲ. ಆದ್ರೆ ಈ ಹಾಗಲಕಾಯಿಯ ಗುಣ ನೀವು ತಿಳಿದರೆ ಅಚ್ಚರಿ ಪಡುತ್ತೀರಿ.
ಹಾಗಲಕಾಯಿಯಲ್ಲಿರುವ ಆ್ಯಂಟಿ-ಆಕ್ಸಿಡೆಂಟ್‌ಗಳು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗೆ ರಕ್ತ ಶುದ್ಧೀಕರಣಕ್ಕೆ ಇದು ಸಹಕಾರಿಯಾಗಲಿದೆ. ಇದರಲ್ಲಿ ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಚರ್ಮದ ಆರೋಗ್ಯ ಕಾಪಾಡಲು ಇದು ನೆರವಾಗಲಿದೆ. ಹಾಗೆ ಇದರಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಲಿದೆ.

ಇದರಲ್ಲಿ ಫೈಬರ್, ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಪೊಟ್ಯಾಸಿಯಮ್ ನಂತಹ ಅಂಶಗಳಿವೆ. ಇದು ಮಧುಮೇಹಿಗಳಿಗೆ ಬಹಳ ಉಪಯೋಗಕಾರಿಯಾಗಿದ್ದು, ಹಾಗಲಕಾಯಿ ಪಲ್ಯ ಎಲ್ಲರ ಫೇವರಿಟ್ ಖಾದ್ಯ. ಆದ್ರೆ ಮಕ್ಕಳಿಗೂ ಇಷ್ಟವಾಗುವಂತಹ ರೀತಿಯಲ್ಲಿ ಹಾಗಲಕಾಯಿ ರೋಸ್ಟ್ ಒಮ್ಮೆ ಟ್ರೈ ಮಾಡಿ ನೋಡಿ. ಈ ರೋಸ್ಟ್ ಮಾಡಿದ್ರೆ ಮನೆ ಮಂದಿ ಎಲ್ಲ ಕುಳಿತು ಸವಿಯುವುದು ಖಚಿತ.
ಹಾಗಾದ್ರೆ ಈ ಹಾಗಲಕಾಯಿ ರೋಸ್ಟ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹಾಗಲಕಾಯಿ
- ಶುಂಠಿ
- ಬೆಳ್ಳುಳ್ಳಿ
- ಮೆಣಸು
- ಒಣ ಕೊಬ್ಬರಿ
- ಕರಿ ಮೆಣಸು
- ಜೀರಿಗೆ
- ಉಪ್ಪು
- ಎಣ್ಣೆ
- ಅರಶಿಣ
- ಲವಂಗ
- ಚಕ್ಕೆ
- ಕೊತ್ತಂಬರಿ ಸೊಪ್ಪು
ಈ ಹಾಗಲಕಾಯಿ ರೋಸ್ಟ್ ಮಾಡುವ ವಿಧಾನವೇನು?
ಹಾಗಲಕಾಯಿ ಮೇಲಿನ ಸಿಪ್ಪೆಯನ್ನು ಸ್ವಲ್ಪ ತೆಗೆದುಕೊಳ್ಳಬೇಕು. ನಂತರ ವೃತ್ತಾಕಾರವಾಗಿ ಹೆಚ್ಚಿಕೊಳ್ಳಬೇಕು. ಹಾಗೆ ಬೀಜವನ್ನು ತೆಗೆದುಕೊಳ್ಳಬೇಕು. ನಂತರ ಹೆಚ್ಚಿಕೊಂಡ ಈ ಹಾಗಲಕಾಯಿ ಬೌಲ್‌ಗೆ ಹಾಕಿಟ್ಟುಕೊಳ್ಳಿ. ನಂತರ ಒಂದು ಬಾಣಲೆ ಒಲೆ ಮೇಲೆ ಇಟ್ಟು ಚಕ್ಕೆ, ಲವಂಗ, ಬ್ಯಾಡಗಿ ಮೆಣಸು, ದನಿಯಾ ಕಾಳು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
2 ನಿಮಿಷದ ಬಳಿಕ ಇದಕ್ಕೆ ಬಿಳಿ ಎಳ್ಳು ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಹಾಗೆ ಜೀರಿಗೆ, ಕರಿಮೆಣಸು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿದ ಬಳಿಕ ಒಣ ಕೊಬ್ಬರಿ, ಶುಂಠಿ, ಬೆಳ್ಳುಳ್ಳಿ ಹಾಕಿ 2 ನಿಮಿಷ ಮತ್ತೆ ಫ್ರೈ ಮಾಡಿಕೊಂಡಿ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ.
ಇದೆಲ್ಲ ತಣ್ಣಗಾದ ಬಳಿಕ ಸಣ್ಣ ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ಸಣ್ಣದಾಗಿ ಪುಡಿ ಮಾಡಿಕೊಳ್ಳಬೇಕು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಎಣ್ಣೆ ತುಸು ಹೆಚ್ಚಾಗಿಯೇ ಮಾಡಿಕೊಳ್ಳಿ. ಈಗ ಹೆಚ್ಚಿಕೊಂಡಿರುವ ಈ ಹಾಗಲಕಾಯಿಯನ್ನು ಈ ಬಾಣಲೆಗೆ ಹಾಕಿಕೊಳ್ಳಿ. ಸಣ್ಣ ಉರಿಯಲ್ಲಿ ಕರಿದುಕೊಳ್ಳಬೇಕು. ಸುಮಾರು 15 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಬೇಕು.
15 ನಿಮಿಷದ ಬಳಿಕ ಹಾಗಲಕಾಯಿಗೆ ಉಪ್ಪು, ಅರಶಿಣ ಹಾಕಿ, ಹಾಗೆ ರುಬ್ಬಿಕೊಂಡಿರುವ ಮಸಾಲೆ ಪುಡಿಯನ್ನು ಇದರೊಳಗೆ ಹಾಕಿಕೊಂಡು ಮಿಕ್ಸ್ ಮಾಡುತ್ತಾ 4ರಿಂದ 5 ನಿಮಿಷ ಮತ್ತೆ ಫ್ರೈ ಮಾಡಿ. ಕೊನೆಯದಾಗಿ ಸಣ್ಣದಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪನ್ನು ಕೂಡ ಹಾಕಿಕೊಂಡು ಮಿಕ್ಸ್ ಮಾಡಿ ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರೋಸ್ಟೆಡ್ ಹಾಗಲಕಾಯಿ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಮಕ್ಕಳಿಗೆ ಇದನ್ನು ಮಾಡಿ ನೀಡಬಹುದು. ಊಟದ ಜೊತೆಗೆ ಅದ್ಭುತ ರುಚಿ ನೀಡಲಿದೆ.



Click it and Unblock the Notifications