Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗ್ರೀನ್ ಪೀಸ್ ಪಲಾವ್ ಮಾಡಿದ್ರೆ ಬಾಯಿ ಚಪ್ಪರಿಸಿ ತಿಂತೀರಿ..!
ನೀವು ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಎಷ್ಟೆಲ್ಲಾ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ರೈಸ್‌ನಿಂದ ನೀವು ಹಲವು ರೀತಿ ಖಾದ್ಯ ಮಾಡಿ ಸವಿಯುವುದು ಸಾಮಾನ್ಯ. ರೈಸ್‌ಬಾತ್, ಬಿಸಿ ಬೇಳೆ ಬಾತ್, ಚಿತ್ರಾನ್ನ, ಪಲಾವ್ ಹೀಗೆ ಎಷ್ಟೆಲ್ಲಾ ವೆರೈಟಿ ಖಾದ್ಯ ನೀವು ಸವಿದಿರುತ್ತೀರಿ. ಬೆಳಗ್ಗೆ ಗಡಿಬಿಡಿಯಲ್ಲಿ ನೀವು ರುಚಿಕರವಾಗಿ ಮಾಡಬಹುದಾದದಂತಹ ಖಾದ್ಯವನ್ನೇ ಮಾಡಲು ಮುಂದಾಗುವುದು ಕಾಮನ್.
ಇನ್ನು ಹಲವರು ಬೆಳಗ್ಎಗ ಪಲಾವ್ ಮಾಡಲು ಇಷ್ಟಪಡುತ್ತಾರೆ. ಅವರು ಪಲಾವ್ ಬ್ರೇಕ್‌ಫಾಸ್ಟ್‌ಗೆ ಹಾಗೂ ಮಧ್ಯಾಹ್ನದ ಬಾಕ್ಸ್‌ಗೂ ಕೂಡ ಹಾಕಿಕೊಂಡು ಸವಿಯಬಹುದು. ಹೀಗಾಗಿ ಬಹುತೇಕರು ಪಲಾವ್ ಮಾಡಿ ಸವಿಯಲು ಮುಂದಾಗುವುದು ನೋಡಬಹುದು. ಇನ್ನು ಪಲಾವ್ ಅಲ್ಲಿ ಹಲವು ಬಗೆಯಲ್ಲಿ ಮಾಡುವುದು ಕೂಡ ಇದೆ.

ಪಲಾವ್ ಅನ್ನು ರುಚಿ ರುಚಿಯಾಗಿ ಮಾಡುವ ಒಂದು ವಿಧಾನದಲ್ಲಿ ಗ್ರೀನ್ ಪೀಸ್ ಪಲಾವ್ ಕೂಡ ಒಂದು. ಗ್ರೀನ್ ಪೀಸ್ ಪಲಾವ್ ರುಚಿಯಲ್ಲಿ ಅದ್ಭುತವಾಗಿರುತ್ತೆ, ಮಧ್ಯಾಹ್ನದ ಊಟಕ್ಕೂ ಇದು ಒಳ್ಳೆಯ ರುಚಿ ನೀಡಲಿದೆ. ಗ್ರೀನ್ ಪೀಸ್ ಪಲಾವ್ ಎಲ್ಲರಿಗೂ ಇಷ್ಟವಾಗುವಂತಹ ಒಂದು ಪಲಾವ್ ಆಗಿದೆ. ಹೀಗಾಗಿ ನಾವಿಂದು ಈ ಗ್ರೀನ್ ಪೀಸ್ ಪಲಾವ್ ಮಾಡುವ ಕುರಿತು ತಿಳಿದುಕೊಳ್ಳೋಣ.
ಗ್ರೀನ್ ಪೀಸ್ ಪಲಾವ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಗ್ರೀನ್ ಪೀಸ್ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ
- ಚಕ್ಕೆ
- ಲವಂಗ
- ಶುಂಠಿ
- ಬೆಳ್ಳುಳ್ಳಿ
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಮರಾಠಿ ಮೊಗ್ಗು
- ಪಲಾವ್ ಎಲೆ
- ಸೋಂಪು
- ಕರಿಬೇವು
- ಉಪ್ಪು
- ಎಣ್ಣೆ ಅಥವಾ ತುಪ್ಪ
ಗ್ರೀನ್ ಪೀಸ್ ಪಲಾವ್ ಮಾಡುವ ವಿಧಾನವೇನು?
ಮೊದಲು ಅಕ್ಕಿಯನ್ನು ಅಳತೆ ಗ್ಲಾಸ್‌ನಲ್ಲಿ ತೆಗೆದು ಕೊಂಡು ತೊಳೆದು ಅದನ್ನು ನೆನೆಸಿಡಬೇಕು. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು, ಸ್ವಲ್ಪ ನೀರು ಹಾಕಿ ತರಿ ತರಿಯಾಗಿ ರುಬ್ಬಿಕೊಂಡು ಬದಿಗಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಇದಕ್ಕೆ ಕರಿಬೇವು, ಮರಾಠಿ ಮೊಗ್ಗು, ಪಲಾಲ್ ಎಲೆ, ಸೋಂಪು ಕಾಳು ಹಾಕಿ ಪ್ರೈ ಮಾಡಿ. ನಂತರ ಎರಡು ಈರುಳ್ಳಿಯನ್ನು ಉದ್ದವಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿಕೊಳ್ಳಿ. ಅನಂತರ ಮಿಕ್ಸಿ ಜಾರ್‌ನಲ್ಲಿ ರುಬ್ಬಿಕೊಂಡಿದ್ದ ಮಸಾಲೆಗಳನ್ನು ಇದಕ್ಕೆ ಹಾಕಿಕೊಳ್ಳಿ.
ಈಗ ಬಿಡಿಸಿಟ್ಟುಕೊಂಡಿರುವ ಹಸಿ ಬಟಾಣಿಯನ್ನು ಹಾಕಿಕೊಳ್ಳಿ. ಹಾಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಚೆನ್ನಾಗಿ ಕುದಿಯಲು ಬಿಟ್ಟ ಬಳಿಕ ನೀವು ಅನ್ನ ತೆಗೆದುಕೊಂಡ ಗ್ಲಾಸ್‌ನಲ್ಲಿ ಅಳತೆ ಪ್ರಕಾರವಾಗಿ ನೀರು ಹಾಕಿಕೊಂಡು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕುದಿಬರಲು ಬಿಡಿ.
ಕುದಿಯಲು ಆರಂಭಿಸಿದಾಗ ನೆನೆಸಿಟ್ಟಿದ್ದ ಅಕ್ಕಿಯನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ. 1 ಸೀಟಿ ಹೊಡೆಯಲು ಬಿಟ್ಟರೆ ಸಾಕು, ಸೋನಾ ಮಸೂರಿ ಅಕ್ಕಿ ಆಗಿರುವುದರಿಂದ 1 ಸೀಟಿ ಹೊಡೆಸಿದರೆ ಸಾಕಾಗುತ್ತದೆ. ನಂತರ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಹುಡಿ ಹುಡಿಯಾದ ಗ್ರೀನ್ ಪೀಸ್ ಪಲಾವ್ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಬೆಳಗ್ಗೆ ಇದನ್ನು ಮಾಡಿ ನೋಡಿ.



Click it and Unblock the Notifications