Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಸಿ ಬಟಾಣಿ ಗ್ರೇವಿ ರುಚಿ ಹಿಡಿದರೆ ಮತ್ತೆ ಮತ್ತೆ ಸವಿಯುತ್ತೀರಿ..! ಮಾಡೋದು ಬಹಳ ಸುಲಭ
ನೀವು ಚಪಾತಿ, ಊಟ, ಇಡ್ಲಿ ದೋಸೆಯಂತಹ ಯಾವುದಾದರು ಖಾದ್ಯ ಮಾಡಿದ್ರೆ ಅದರ ಜೊತೆಗೆ ಸವಿಯಲು ಯಾವುದಾದರು ಗ್ರೇವಿ, ಚಟ್ನಿ, ಸಾಂಬಾರ್ ಹೀಗೆ ಹಲವು ಬಗೆಯ ಖಾದ್ಯ ಮಾಡಿ ಸವಿಯುವುದು ನೋಡಿದ್ದೇವೆ. ಅದರಲ್ಲೂ ಚಪಾತಿ, ರೊಟ್ಟಿ ಮಾಡಿದರೆ ಅದರ ಒಟ್ಟಿಗೆ ಸವಿಯಲು ಗ್ರೇವಿ ಮಾಡಿ ಸವಿಯುವುದು ಸಾಮಾನ್ಯ. ಅದರಲ್ಲೂ ಹಸಿ ಬಟಾಣಿಯ ಗ್ರೇವಿಯಂತು ಅದ್ಭುತ ರುಚಿ ನೀಡಲಿದೆ.
ಅದರಲ್ಲೂ ಹಸಿ ಬಟಾಣಿ ಗ್ರೇವಿ ಸವಿಯೋಕೆ ಎಲ್ಲರಿಗೂ ಇಷ್ಟವಾಗುತ್ತೆ, ಏಕೆಂದರೆ ಇದಕ್ಕೆ ಬಳಸುವ ಮಸಾಲೆಗಳು ಎಲ್ಲರ ಬಾಯಲ್ಲೂ ನೀರು ತರಿಸುತ್ತವೆ. ಹಾಗೆ ಆರೋಗ್ಯದ ದೃಷ್ಟಿಯಲ್ಲಿ ಕೂಡ ಬಟಾಣಿಗಳು ಬಹಳ ಉತ್ತಮ ಖಾದ್ಯ, ನಿಮ್ಮ ದೈನಂದಿನ ಆಹಾರದಲ್ಲಿ ಹಸಿ ಬಟಾಣಿ ಸವಿಯುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ.

ಹಸಿ ಬಟಾಣಿ ಮಕ್ಕಳ ಬೆಳವಣಿಗೆಗೆ ಪೂರಕವಾದ ಅಂಶವನ್ನು ಹೊಂದಿದೆ. ಇದು ಜೀರ್ಣಕ್ರಿಯೆ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹಾಗೆ ಈ ಹಸಿ ಬಟಾಣಿಯಿಂದ ಸೂಪ್, ಸಾಂಬಾರ್, ಪಲಾವ್‌ಗೂ ಬಳಸುವುದು ನೋಡಬಹುದು. ಹಸಿ ಬಟಾಣಿಗಳಲ್ಲಿ ಹೆಚ್ಚಿನ ನಾರಿನ ಅಂಶ ಇರುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಬಹಳ ಸಹಕಾರಿಯಾಗಿದೆ.
ಹಾಗಾದ್ರೆ ಇಷ್ಟೊಂದು ಆರೋಗ್ಯಕರವಾದ ಬಟಾಣಿಯ ಗ್ರೇವಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಅದರಲ್ಲೂ ಈ ಹಸಿ ಬಟಾಣಿ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಸಿ ಬಟಾಣಿ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹಸಿ ಬಟಾಣಿ
- ಚಕ್ಕೆ
- ಲವಂಗ
- ಜೀರಿಗೆ
- ಹಸಿ ಮೆಣಸು
- ಈರುಳ್ಳಿ
- ಟೊಮೆಟೋ
- ಗೋಡಂಬಿ
- ಧನಿಯಾ ಪುಡಿ
- ಖಾರದ ಪುಡಿ
- ಅರಶಿಣ
- ಗರಂ ಮಸಾಲೆ
- ಉಪ್ಪು
- ಎಣ್ಣೆ/ ಬೆಣ್ಣೆ
ಹಸಿ ಬಟಾಣಿ ಗ್ರೇವಿ ಮಾಡುವುದು ಹೇಗೆ?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಬೆಣ್ಣೆ ಅಥವಾ ಎಣ್ಣೆ ಹಾಕಿಕೊಳ್ಳಿ, ನಂತರ ಲವಂಗ, ಚಕ್ಕೆ, ಸೋಂಪು ಕಾಳು, ಜೀರಿಗೆ, ಹಸಿ ಮೆಣಸು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಟೊಮೆಟೋ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಖಾರದ ಪುಡಿ, ಗರಂ ಮಸಾಲೆ, ಚಿಟಿಕೆಯಷ್ಟು ಅರಶಿಣ, ಧನಿಯಾ ಪುಡಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದೆಲ್ಲಾ ಮಸಾಲೆಯನ್ನು ಫ್ರೈ ಮಾಡಿದ ಬಳಿಕ ಸಣ್ಣ ಉರಿಯಲ್ಲಿ ಒಲೆ ಮೇಲೆ ಇಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್‌ಗೆ ಕಾಯಿ ಪುಡಿ, ಬೇಬಿ ಗೋಡಂಬಿ, ಅಥವಾ ಇಡಿ ಗೋಡಂಬಿ ಹಾಕಿ ಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
ನಂತರ ಈ ರುಬ್ಬಿದ ಪೇಸ್ಟ್ ಅನ್ನು ಒಲೆ ಮೇಲಿನ ಬಾಣಲೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಕೈ ಬಿಡದೆ ಮಿಕ್ಸ್ ಮಾಡಿಕೊಳ್ಳಿ, ಇಲ್ಲದಿದ್ದರೆ ತಳ ಹಿಡಿಯಲಿದೆ. ಇದಕ್ಕೆ ಸ್ವಲ್ಪ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ ಹಸಿ ಬಟಾಣಿಯನ್ನು ಸೇರಿಸಿಕೊಳ್ಳಿ. ಹಸಿ ಇಲ್ಲದಿದ್ದರೆ ಹಿಂದಿನ ದಿನವೇ ನೆನೆಸಿಟ್ಟು ಹಾಕಿಕೊಳ್ಳಬೇಕು.
ಹಸಿ ಬಟಾಣಿ ಹಾಕಿದ ಬಳಿಕ ಉಪ್ಪು ಹಾಕಿಕೊಂಡು ಮುಚ್ಚಳ ಮುಚ್ಚಿ 5 ನಿಮಿಷ ಬೇಯಲು ಬಿಡಿ. ಆಗಾಗ ಮುಚ್ಚಳ ತೆಗೆದು ಮಿಕ್ಸ್ ಮಾಡುತ್ತಾ ಇರಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಂಡರೆ ರುಚಿ ರುಚಿಯ ಹಸಿ ಬಟಾಣಿ ಗ್ರೇವಿ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications