Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಿ ರುಚಿ ಕೆಟ್ಟಿದ್ದರೆ ಖಾರ ಖಾರದ ಚಟ್ನಿ: ರೆಡಿ ಮಾಡೋದು ಹೇಗೆ?
ನೀವು ಒಂದೇ ರೀತಿಯ ಅಡುಗೆ ಸವಿದು ಹಾಗೆ ಒಂದೇ ರೀತಿ ಸಾಂಬಾರ್, ತಿಂಡಿ ಅಡುಗೆಗಳ ಸವಿದು ನಿಮ್ಮ ಬಾಯಿ ರುಚಿ ಕೆಟ್ಟಿರಬಹುದು. ಹೀಗಾಗಿ ನೀವು ಹೊಸ ರೀತಿ ಅಡುಗೆ ಮಾಡಿ ಸವಿಯುವ ಮನಸ್ಸು ಮಾಡಿರಬಹುದು. ಅದ್ರಲ್ಲೂ ನಾಲಗೆಗೆ ರುಚಿ ತರುಚ ಖಾರ ಖಾರವಾದ ಚಟ್ನಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.
ಅದ್ರಲ್ಲೂ ಬಾಯಿ ರುಚಿ ಕೆಟ್ಟಿದ್ದರೆ ಈ ರೀತಿ ಬೆಳ್ಳುಳ್ಳಿ ಚಟ್ನಿ ತಿನ್ನಲೇ ಬೇಕು. ಬೆಳ್ಳುಳ್ಳಿ ಹಾಗೂ ಮೆಣಸಿಕಾಯಿ ಹಾಕಿ ಮಾಡುವ ಈ ಚಟ್ನಿಯು ನಿಮ್ಮ ಹದಗೆಟ್ಟ ನಾಲಗೆಗೆ ರುಚಿ ನೀಡಲಿದೆ. ಹಾಗೆ ಎಲ್ಲಾ ಖಾದ್ಯದೊಂದಿದೆ ಅದ್ರಲ್ಲೂ ತಿಂಡಿಯೊಂದಿಗೆ ಇದನ್ನು ಸವಿಯಬಹುದು. ಊಟದೊಂದಿಗೂ ಕೂಟ ಅದ್ಭುತ ರುಚಿ ನೀಡಲಿದೆ.

ಈ ಬೆಳ್ಳುಳ್ಳಿ ಹಸಿ ಮೆಣಸಿನಕಾಯಿ ಚಟ್ನಿ ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಹಳ ಉತ್ತಮವಾಗಿರಲಿದೆ. ತಿಂಡಿಯೊಂದಿಗೆ ಹಾಗೆ ಊಟದೊಂದಿಗೆ ಸವಿಯಲು ಬಹಳ ರುಚಿ ನೀಡಲಿದೆ. ಆದ್ರೆ ಇದನ್ನು ಸರಿಯಾದ ವಿಧಾನದಲ್ಲಿ ಮಾಡಿದ್ರೆ ಮಾತ್ರ ಅದರ ರುಚಿ ದುಪ್ಪಟ್ಟಾಗುತ್ತೆ. ಹಾಗಾದ್ರೆ ನಾವಿಂದು ಮನೆಯಲ್ಲೇ ರುಚಿ ರುಚಿಯಾಗಿ ಚಟ್ನಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಇನ್ನು ಬೆಳ್ಳು, ಹಸಿ ಮೆಣಸಿನ ಚಟ್ನಿಯು ನಾಲಗೆ ರುಚಿ ಹೆಚ್ಚಿಸಲಿದೆ. ಹಾಗಾದ್ರೆ ಈ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿಯೋಣ.
ಬೆಳ್ಳುಳ್ಳಿ ಹಸಿ ಮೆಣಸಿನ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ಬೆಳ್ಳುಳ್ಳಿ
- ಹಸಿ ಮೆಣಸು
- ಉಪ್ಪು
- ಎಣ್ಣೆ
- ಖಾರದ ಪುಡಿ
- ಸಾಸಿವೆ
- ಜೀರಿಗೆ
- ಇಂಗು
- ಹುಣಸೆ ಹುಳಿ
- ಬೆಲ್ಲ
ಬೆಳ್ಳುಳ್ಳಿ ಹಸಿ ಮೆಣಸಿನ ಚಟ್ನಿ ಮಾಡುವುದು ಹೇಗೆ?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು 5 ಚಮಚ ಎಣ್ಣೆ ಹಾಕಿಕೊಳ್ಳಿ. ನಂತರ ಇದಕ್ಕೆ ಸಾಸಿವೆ, ಜೀರಿಗೆ ಹಾಕಿ ಬಳಿಕ ಕರಿಬೇವು, ಮೆಂತ್ಯ ಕಾಳು, 1 ಕಪ್ ಸಿಪ್ಪೆ ತೆಗೆದ ಬೆಳ್ಳಳ್ಳಿ ಹಾಕಿಕೊಂಡು ಫ್ರೈ ಮಾಡಿ. 1 ನಿಮಿಷದ ಬಳಿಕ ಕೊತ್ತಂಬರಿ ಕಾಳು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಚೆನ್ನಾಗಿ ಫ್ರೈ ಮಾಡಿಕೊಳ್ಳುತ್ತಾ ಇಂಗು ಸಹ ಹಾಕಿಕೊಳ್ಳಿ ಸಣ್ಣ ಉರಿಯಲ್ಲಿ ಮಾಡಿ. 5 ನಿಮಿಷ ಬಿಟ್ಟು ಕೊನೆಯಲ್ಲಿ ಸ್ವಲ್ಪ ಅರಶಿಣ ಪುಡಿ ಹಾಕಿಕೊಂಡು ಹಾಗೆ ಹುಣಸೆ ಹುಳಿ ಕೂಡ ಹಾಕಿಕೊಂಡು, ಖಾರದ ಪುಡಿ ಹಾಕಿ ಒಲೆ ಆಫ್ ಮಾಡಿಕೊಂಡು ಇಳಿಸಿಕೊಳ್ಳಿ. ನಂತರ ಕೊನೆಯಲ್ಲಿ ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಇಳಿಸಿ ತಣ್ಣಗಾಗಲು ಬಿಡಿ.
ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಫ್ರೈ ಮಾಡಿಕೊಂಡ ಎಲ್ಲಾ ವಸ್ತುಗಳ ಹಾಕಿಕೊಂಡು ಬೆಲ್ಲ ಸಹ ಹಾಕಿಕೊಂಡು ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನೀರು ಹಾಕಿಕೊಳ್ಳಬೇಡಿ. ಹಾಗೆ ಕೊನೆಯಲ್ಲಿ 2 ಹಸಿ ಮೆಣಸು ಹಾಕಿ ರುಬ್ಬಿಕೊಳ್ಳಿ. ಇದು ಚೆನ್ನಾಗಿ ಪುಡಿ ಪುಡಿಯಾಗಬೇಕು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿ ಚಟ್ನಿ ಸಿದ್ದವಾಗುತ್ತೆ. ಹಾಗೆ ಇದನ್ನು ನೀವು ಕೆಂಪು ಮೆಣಸು ಕೂಡ ಹಾಕಿಕೊಂಡು ಮಾಡಬಹುದು. ಆದ್ರೆ ಹಸಿ ಮೆಣಸಿನಲ್ಲಿ ಖಾರ ಹೆಚ್ಚಾಗಿ ಇರುವುದರಿಂದ ರುಚಿ ಕೂಡ ಅದ್ಭುತವಾಗುತ್ತದೆ. ತಿಂಡಿಯೊಂದಿಗೆ ಸವಿಯುತ್ತಿದ್ದರೆ ಬಾಯಲ್ಲಿ ನೀರು ಬರುತ್ತೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ



Click it and Unblock the Notifications