Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2 ನಿಮಿಷದಲ್ಲಿ ಚಳಿಗಾಲಕ್ಕೆ ಅದ್ಭುತ ಖಾರ ಚಟ್ನಿ ಮಾಡಿ..! ಇಲ್ಲಿದೆ ಹೊಸ ಚಟ್ನಿ ರೆಸಿಪಿ
ಚಳಿಗಾದಲ್ಲಿ ಬಾಯಿ ರುಚಿ ಹೆಚ್ಚಿಸುವಂತಹ ಚಟ್ನಿ, ಖಾದ್ಯ, ಪಲ್ಯಗಳ ಮಾಡಿ ಸವಿಯಲು ಇಷ್ಟಪಡುತ್ತೀರಿ. ಚಳಿಯಲ್ಲಿ ಅದ್ಭುತ ರುಚಿ ನೀಡುವಂತಹ ಹಲವು ಬಗೆಯ ಚಟ್ನಿಗಳನ್ನು ನೀವು ಸವಿಯುವುದು ಪಕ್ಕ. ಹಾಗೆ ಚಳಿಯಲ್ಲಿ ಯಾವ ರೀತಿಯ ಚಟ್ನಿಗಳು ಬಾಯಿ ರುಚಿಯ ಹೆಚ್ಚಿಸುವ ಜೊತೆಗೆ ಚಳಿಗೂ ಹದವಾದ ಮುದ ನೀಡುತ್ತವೆ.
ಇಂತಹ ಕೆಲವು ಚಟ್ನಿಗಳಲ್ಲಿ ನಾವಿಂದು ಖಾರ ಖಾರವಾದ ಹಸಿ ಮೆಣಸಿನ ಚಟ್ನಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಈ ಹಸಿ ಮೆಣಸಿನ ಚಡ್ನಿಯನ್ನು ನೀವು ಅದ್ಭುತ ರುಚಿಯಲ್ಲಿ ಅದರಲ್ಲೂ ಚಳಿಗಾಲದಲ್ಲಿ ಸವಿಯಲು ಹೇಳಿ ಮಾಡಿಸಿದ ಚಟ್ನಿ ಇದು. ಇದನ್ನು ಎಲ್ಲಾ ರೀತಿಯ ತಿಂಡಿಯ ಜೊತೆಗೂ ಹಾಗೆ ಊಟದ ಜೊತೆಗೆ ಸವಿಯಬಹುದು.

ಇಷ್ಟು ಅದ್ಭುತ ರುಚಿಯ ಹಸಿ ಮೆಣಸಿನ ಚಟ್ನಿ ಮಾಡುವುದು ಕೂಡ ತುಂಬಾನೆ ಸುಲಭ. ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದು, ಹೀಗಾಗಿ ಎಲ್ಲರು ಕೂಡ ಸಮಯ ಇಲ್ಲದಾಗಲು ಇದನ್ನು ಮಾಡಬಹುದು, ಹಾಗಾದ್ರೆ ನಾವಿಂದು ಈ ಹಸಿ ಮೆಣಸಿನ ಖಾರ ಚಟ್ನಿಯನ್ನು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಹಸಿ ಮೆಣಸಿನ ಖಾರ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಹಸಿ ಮೆಣಸಿನ ಖಾರ ಚಟ್ನಿ ಮಾಡುವ ವಿಧಾನವೇನು?, ಹಸಿ ಮೆಣಸಿನ ಚಟ್ನಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಹಸಿ ಮೆಣಸಿನ ಖಾರ ಚಟ್ನಿ ಮಾಡಲು ಯಾವೆಲ್ಲಾ ಪಾದರ್ಥಗಳು ಬೇಕು?
- ಹಸಿಮೆಣಸಿನ ಕಾಯಿ
- ಹುಣಸೆ ಹಣ್ಣು
- ಬೆಳ್ಳುಳ್ಳಿ - 2
- ಜೀರಿಗೆ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಹಸಿ ಮೆಣಸಿನ ಖಾರ ಚಟ್ನಿ ಮಾಡುವ ವಿಧಾನವೇನು?
ಮೊದಲು ಹಸಿ ಮೆಣಸಿನ ತೊಟ್ಟು ತೆಗೆದು ಚೆನ್ನಾಗಿ ತೊಳೆದು ಅನಂತರ ಮಧ್ಯದಲ್ಲಿ ಸಿಗಿಯಬೇಕು, ಆದರೆ ಕತ್ತರಿಸಿಕೊಳ್ಳಬೇಡಿ, ಇಡಿಯಾಗಿರಲಿದೆ. ನಂತರ ಒಲೆ ಮೇಳೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಸ್ಪೂನ್ ಎಣ್ಣೆ ಹಾಕಿ ಈಗ ಈ ಹಸಿಮಣಸುಗಳ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ. ಈ ಮೆಣಸು ಸಿಡಿಯಬಾರದು ಎಂಬ ಕಾರಣಕ್ಕೆ ಮಧ್ಯದಲ್ಲಿ ಸೀಳಿಕಕೊಳ್ಳಬೇಕು.
ಹಸಿ ಮೆಣಸಿನಕಾಯಿಯನ್ನು ಸುಮಾರು 1 ನಿಮಿಷ ಫ್ರೈ ಮಾಡಿದ ಬಳಿಕ, ಬೆಳ್ಳುಳ್ಳಿ, ಜೀರಿಗೆ ಹಾಕಿ ಮತ್ತೆ 1 ನಿಮಿಷ ಫ್ರೈ ಮಾಡಿ. ಅನಂತರ ಹುಣಸೆ ಹಣ್ಣು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಹಾಕಿ 1 ನಿಮಿಷ ಫ್ರೈ ಮಾಡಿಕೊಂಡು ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ.
ಈ ಪದಾರ್ಥಗಳು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಎಲ್ಲಾ ಪದಾರ್ಥಗಳ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ. ಹಾಗೆ ಈ ಚಟ್ನಿ ರುಬ್ಬುವ ಬದಲು ಕೆಲವರು ಕುಟ್ಟಿಕೊಳ್ಳುತ್ತಾರೆ, ಹಾಗೆ ರುಬ್ಬುವಾಗ ನೀರು ಬಳಸಬಾರದು. ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಹಸಿ ಮೆಣಸಿನ ಖಾರ ಚಟ್ನಿ ರೆಡಿಯಾಗುತ್ತದೆ.
ಈ ಚಟ್ನಿಯನ್ನು ನೀವು ಎಲ್ಲಾ ತಿಂಡಿಯ ಜೊತೆಗೂ ಸವಿಯಬಹುದು. ನಿಮಗೆ ಎಷ್ಟು ಖಾರ ಬೇಕೋ ಅಷ್ಟು ಮೆಣಸು ಬಳಸಿಕೊಳ್ಳಬಹುದು. ಹಾಗೆ ಇದನ್ನು ಕಡಿಮೆ ಸಮಯದಲ್ಲಿ ಮಾಡಬಹುದು. ನೀವು ಫ್ರಿಡ್ಜ್‌ನಲ್ಲಿ ಇಟ್ಟರೆ 15 ದಿನ ಇಟ್ಟು ಇದನ್ನು ಸವಿಯಬಹುದು.



Click it and Unblock the Notifications