Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹುರುಳಿಕಾಯಿ ಪಲ್ಯ ಮಾಡಿದ್ರೆ ಊಟದ ರುಚಿಯೇ ಬೇರೆ..! ಮಾಡೋದು ಹೇಗೆ?
ನೀವು ಊಟಕ್ಕೆ ಒಂದು ಪಲ್ಯ ಮಾಡಿ ಸವಿಯುವುದು ಸಾಮಾನ್ಯ. ಊಟದ ಜೊತೆಗೆ ಒಂದು ಪಲ್ಯ ಇದ್ದರೆ ಅದರ ರುಚಿ ಹೆಚ್ಚಾಗುತ್ತೆ. ಹಾಗೆ ಎಲ್ಲರಿಗೂ ಊಟದ ಜೊತೆಗೆ ಪಲ್ಯ ಇರಲೇಬೇಕು. ಹಗೆ ತಿಂಡಿಯ ಜೊತೆಗೂ ಪಲ್ಯ ಇದ್ದರೆ ಬಹಳ ರುಚಿ ನೀಡಲಿದೆ. ಹಾಗೆ ತರಕಾರಿ ಪಲ್ಯ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ಇಂತಹ ಸಂದರ್ದಲ್ಲಿ ನಾವು ಅತ್ಯಂತ ರುಚಿ ರುಚಿಯ ಹಾಗೆ ಬಾಯಿ ರುಚಿ ಹೆಚ್ಚಿಸುವ ಪಲ್ಯ ಮಾಡುವ ಕುರಿತು ತಿಳಿಯೋಣ.
ನಾವಿಂದು ಹುರುಳಿಕಾಯಿ ಪಲ್ಯ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ತಿಂಡಿಯ ಜೊತೆಗೆ ಅದರಲ್ಲೂ ಅನ್ನದ ಜೊತೆಗೆ ಈ ಹುರುಳಿಕಾಯಿ ಪಲ್ಯ ಇದ್ದರೆ ಆ ರುಚಿಗೆ ನೀವು ನಿತ್ಯ ಇದನ್ನು ಮಾಡಿ ಸವಿಯಲು ಮುಂದಾಗಬಹುದು. ಇದು ಆರೋಗ್ಯಕ್ಕೆ ಬಹಳ ಉತ್ತಮ ತರಕಾರಿಯಾಗಿದೆ. ಹುರುಳಿಕಾಯಿಯಲ್ಲಿ ವಿಟಮಿನ್ ' ಕೆ ' ಅಂಶ ಹೆಚ್ಚಾಗಿದೆ. ಇದು ನಿಮ್ಮ ಮೂಳೆಗಳ ಆರೋಗ್ಯಕ್ಕೆ ಬಹಳ ಉತ್ತಮ. ಹೀಗಾಗಿ ಮಕ್ಕಳಿಗೆ ಈ ಹುರುಳಿಕಾಯಿ ಪಲ್ಯ ಹಾಗೂ ಚಟ್ನಿ ಸವಿಯಲು ನೀಡಬೇಕು.

ಹಾಗೆ ಕ್ಯಾಲಸಿಯಂ, ನಾರಿನ ಅಂಶವು ಹೆಚ್ಚಾಗಿದೆ. ಇದರಿಂದ ನಿಮ್ಮ ಮಲದ್ಧತೆ, ಜೀರ್ಣಕ್ರಿಯೆ ಸಮಸ್ಯೆಗಳು ದೂರಾಗಿಸುವ ಗುಣ ಹೊಂದಿದೆ. ಈ ಹುರುಳಿಕಾಯಿಯಲ್ಲಿ ಫ್ಲೇವನಾಯ್ಡ್ ಅಂಶಗಳಿದ್ದು, ಇದು ಇನ್ಫಾಮೇಟರಿ ಗುಣ ಲಕ್ಷಣಗಳನ್ನು ಹೊಂದಿರುವ ಕಾರಣ ನಮ್ಮ ಜೀವ ಕೋಶದ ಆರೋಗ್ಯ ಕಾಪಾಡಲು ಬಹಳ ಮುಖ್ಯ ಎನಿಸಿವೆ.
ಇಷ್ಟೊಂದು ಆರೋಗ್ಯಕರ ಲಾಭ ಹೊಂದಿರುವ ಈ ಹುರುಳಿಕಾಯಿ ಪಲ್ಯ ಮಾಡುವ ಕುರಿತಾಗಿ ನಾವು ತಿಳಿದುಕೊಳ್ಳೋಣ. ಈ ಹುರುಳಿಕಾಯಿ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹುರುಳಿಕಾಯಿ ಪಲ್ಯ ಮಾಡಲು ಬೇಕಾಗುವ ವಸ್ತುಗಳು
- ಹುರುಳಿಕಾಯಿ - ಅರ್ಧ ಕೆ.ಜಿ
- ಈರುಳ್ಳಿ 2
- ಮೊಸರು 4 ಟೇಬಲ್ ಸ್ಪೂನ್
- ಬ್ಯಾಡಗಿ ಮೆಣಸಿನಕಾಯಿ
- ಶುಂಠಿ
- ಬೆಳ್ಳುಳ್ಳಿ
- ಖಾರದ ಪುಡಿ
- ದನಿಯಾ ಪುಡಿ
- ಗರಂ ಮಸಾಲ
- ಅರಿಶಿಣ ಪುಡಿ
- ಜೀರಿಗೆ
- ಉಪ್ಪು
- ಎಣ್ಣೆ
ಹುರುಳಿಕಾಯಿ ಪಲ್ಯ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಬ್ಯಾಡಗಿ ಮೆಣಸು, ಬೆಳ್ಳುಳ್ಳಿ, ಈರುಳ್ಳಿ, ಶುಂಠಿ ಹಾಕಿ ಸ್ವಲ್ಪವೇ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಇದು ತರಿತರಿಯಾಗಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಇದಕ್ಕೆ ರುಬ್ಬಿಕೊಂಡಿರುವ ಮಸಾಲೆ ಪೇಸ್ಟ್ ಹಾಕಿ 3 ನಿಮಿಷ ಎಣ್ಣೆ ಯಲ್ಲಿ ಫ್ರೈ ಮಾಡಿ.
3 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಮಸಾಲೆಗಳ ಹಾಕಿ. ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲೆ, ಅರಶಿಣ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ 1 ನಿಮಿಷ ಚೆನ್ನಾಗಿ ಬೆರೆಯುವಂತೆ ಕಲಸಿಕೊಳ್ಳಿ. ಈಗ ಹುರುಳುಕಾಯಿ ಅಥವಾ ಬೀನ್ಸ್ ಅನ್ನು ಮೊದಲೇ ಕತ್ತರಿಸಿ ನೀರಿನಲ್ಲಿ ಹಾಕಿಟ್ಟುಕೊಂಡಿರಿ. ಈಗ ಹುರುಳಿಕಾಯಿಯನ್ನು ನೀರಿನಿಂದ ತೆಗೆದು ಈ ಮಸಾಲೆಗೆ ಹಾಕಿಕೊಳ್ಳಿ.
ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಸಾಲೆ ಹಿಡಿಯುವಂತೆ ಚೆನ್ನಾಗಿ ಮಿಕ್ಸ್ ಮಾಡಬೇಕು. ಎಲ್ಲಾ ಮಸಾಲೆಯು ಚೆನ್ನಾಗಿ ಹಿಡಿದ ಬಳಿಕ ಅರ್ಧ ಕಪ್ ನೀರು ಹಾಕಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 10 ನಿಮಿಷ ಬೇಯಲು ಬಿಡಬೇಕು. ಆಗಾಗ ತಳ ಹಿಡಿಯದಂತೆ ಎಚ್ಚರಿಕೆ ವಹಿಸಿ. ಒಟ್ಟು 10 ನಿಮಿಷ ಬೇಯಿಸಿದ ಬಳಿಕ ಕಾಲು ಕಪ್ ಮೊಸರು ಹಾಕಿಕೊಳ್ಳಿ. ಹಾಗೆ ಮತ್ತೆ 3 ನಿಮಿಷ ಬಿಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಈ ಹುರುಳಿ ಕಾಯಿ ಪಲ್ಯ ರೆಡಿಯಾಗುತ್ತೆ. ನೀವು ಸಹ ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications