Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಪಾತಿ, ದೋಸೆ, ಊಟಕ್ಕೆ ಈ ಸ್ಪೆಷಲ್ ತೊಂಡೆಕಾಯಿ ಚಟ್ನಿ; ಈ ರೀತಿ ರುಚಿ ನೀವೆಂದು ಸವಿದಿರಲ್ಲ!
ಬೆಳಗ್ಗೆ ತಿಂಡಿಗೆ ಚಪಾತಿ, ದೋಸೆ, ಇಡ್ಲಿ, ಸೇರಿದಂತೆ ಹಲವು ರೀತಿಯ ಖಾದ್ಯಗಳು ನೀವು ಸವಿಯುತ್ತೀರಿ. ಈ ಎಲ್ಲಾ ತಿಂಡಿಗಳ ಜೊತೆಗೆ ಚಟ್ನಿ, ಪಲ್ಯ, ಸಾಂಬಾರ್ ರೀತಿಯ ಹೊಸ ರೀತಿ ರುಚಿ ರುಚಿ ಖಾದ್ಯಗಳನ್ನು ಮಾಡಿಯೇ ಮಾಡುತ್ತೀರಿ. ಈ ಎಲ್ಲಾ ಖಾದ್ಯಗಳನ್ನು ತಿಂಡಿಯೊಂದಿಗೆ ಸವಿಯೋದು ಕಾಮನ್, ಹಾಗೆ ಊಟದೊಂದಿಗೆ ಕೂಡ ಈ ಪಲ್ಯ, ಚಟ್ನಿಯನ್ನು ಬಳಸುವುದು ನೋಡಿರಬಹುದು.
ಇಂತಹ ತಿಂಡಿ ಸವಿಯಲು ಹಲವು ಚಟ್ನಿ ಪಲ್ಯದ ರುಚಿಯಲ್ಲಿ ತರಕಾರಿಯಾಗಿ ತೊಂಡೆಕಾಯಿಯ ಚಟ್ನಿ ಕುರಿತಾಗಿ ತಿಳಿದುಕೊಳ್ಳೋಣ. ತೊಂಡೆಕಾಯಿಯ ಬಳಸಿ ಹಲವು ರೀತಿಯ ಖಾದ್ಯ ಮಾಡುವುದು ನೋಡಬಹುದು. ತೊಂಡೆಕಾಯಿ ಪಲ್ಯ, ತೊಂಡೆಕಾಯಿ ಸಾಂಬಾರ್, ತೊಂಡೆಕಾಯಿ ಹುಳಿ, ಹೀಗೆ ಹಲವು ರೀತಿಯ ಖಾದ್ಯಗಳ ಮಾಡುವುದು ಸಾಮಾನ್ಯ.

ಆದ್ರೆ ನಾವಿಂದು ದೋಸೆ, ಚಪಾತಿ, ಇಡ್ಲಿ ಸೇರಿ ಊಟಕ್ಕೂ ಕೂಡ ರುಚಿ ನೀಡಲಿದೆ. ಹಾಗೆ ಈ ತೊಂಡೆಕಾಯಿ ಚಟ್ನಿ ರುಚಿ ರುಚಿಯಾಗಿರುತ್ತೆ. ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಲು ಮುಂದಾಗುತ್ತೀರಿ. ಹಾಗಾದ್ರೆ ಮನೆಯಲ್ಲಿ ತಿಂಡಿ ಹಾಗೂ ಊಟಕ್ಕೆ ಎರಡಕ್ಕೂ ಸೇರಿ ಈ ತೊಂಡೆಕಾಯಿ ಪಲ್ಯ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ತೊಂಡೆಕಾಯಿ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ತೊಂಡೆಕಾಯಿ
- ಟೊಮೊಟೊ
- ಹಸಿ ಮೆಣಸಿನ ಕಾಯಿ
- ಎಣ್ಣೆ
- ಕಡಲೆಕಾಯಿ ಬೀಜ
- ದನಿಯಾ ಕಾಳು
- ಜೀರಿಗೆ
- ಅರಿಶಿನದ ಪುಡಿ
- ಹುಣಸೆಹಣ್ಣು
- ಕೊತ್ತಂಬರಿ ಸೊಪ್ಪು
- ಸಾಸಿವೆ
- ಇಂಗು
- ಕಡಲೆಬೇಳೆ
- ಉದ್ದಿನ ಬೇಳೆ
- ಕರಿಬೇವಿನ ಸೊಪ್ಪು
- ಒಣ ಮೆಣಸಿನಕಾಯಿ
- ಬೆಳ್ಳುಳ್ಳಿ
- ಉಪ್ಪು ರುಚಿಗೆ ತಕ್ಕಷ್ಟು
ತೊಂಡೆಕಾಯಿ ಚಟ್ನಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಕಡಲೆ ಬೀಜ, ಧನಿಯಾ ಕಾಳು, ಜೀರಿಗೆ ಹಾಕಿ ಫ್ರೈ ಮಾಡಿ. 2 ನಿಮಿಷ ಹುರಿದುಕೊಂಡ ಬಳಿಕ ಹಸಿ ಮೆಣಸು ಹಾಕಿ 2 ನಿಮಿಷ ಫ್ರೈ ಮಾಡಿ. ಈಗ ಅರಶಿಣ, ಟೊಮೆಟೋ, ಹುಣಸೆ ಹುಳಿ ಹಾಕಿ 5 ನಿಮಿಷ ಫ್ರೈ ಮಾಡಿಕೊಳ್ಳಬೇಕು.
ಹಾಗೆ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಬೇಕು. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎಲ್ಲಾ ಪದಾರ್ಥ ಹಾಕಿಕೊಂಡು ನೀರು ಬಳಸದೆ ರುಬ್ಬಿಕೊಳ್ಳಬೇಕು. ಈಗ ಒಲೆ ಮೇಲಿನ ಬಾಣಲೆಗೆ ಮತ್ತೆ ಒಂದು ಸ್ಪೂನ್ ಎಣ್ಣೆ ಹಾಕಿ ಬಳಿಕ ಕತ್ತರಿಸಿಕೊಂಡಿರುವ ತೊಂಡೆಕಾಯಿ ಹಾಕಿ ಹುರಿದುಕೊಳ್ಳಬೇಕು.
ಹುರಿದುಕೊಂಡ ಈ ತೊಂಡೆಕಾಯಿ ತಣ್ಣಗಾಗಲು ಬಿಟ್ಟು ಬಳಿಕ ಅದೇ ಮಿಕ್ಸಿ ಜಾರ್‌ಗೆ ಹಾಕಿ ಮಸಾಲೆಯೊಂದಿಗೆ ರುಬ್ಬಿಕೊಳ್ಳಬೇಕು. ರುಬ್ಬುವಾಗ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಿ.
ಈಗ ಈ ಚಟ್ನಿಗೆ ಒಂದು ಒಗ್ಗರಣೆ ಹಾಕಬೇಕು. ಅದಕ್ಕೆ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಇಂಗು, ಬೆಳ್ಳುಳ್ಳಿ, ಒಣ ಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆ, ಕರಿಬೇವು ಹಾಕಿ ಈ ಒಗ್ಗರಣೆಯನ್ನು ಚಟ್ನಿಗೆ ಹಾಕಿಕೊಂಡರೆ ನಿಮ್ಮ ಮುಂದೆ ರುಚಿ ರುಚಿ ಚಟ್ನಿ ಸಿದ್ದವಾಗುತ್ತೆ.



Click it and Unblock the Notifications