Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗೋರಿಕಾಯಿ ಪಲ್ಯ: ಸೂಪರ್ ಟೇಸ್ಟ್‌ನ ಸುಲಭದ ರೆಸಿಪಿ
ಊಟದೊಂದಿಗೆ ಹಾಗೆ ಯಾವುದೇ ತಿಂಡಿಯೊಂದಿಗೆ ಪಲ್ಯ ಅಥವಾ ಗ್ರೇವಿ ಇದ್ದರೆ ಬಹಳ ರುಚಿಯಿಂದ ಖಾದ್ಯಗಳ ಸವಿಯಬಹುದು. ಅದ್ರಲ್ಲೂ ವಿಶೇಷ ರುಚಿಯಲ್ಲಿ ಮಾಡುವಂತಹ ತರಕಾರಿ ತಿನಿಸುಗಳು ರುಚಿಕರವಾಗಿರಲಿದೆ. ನಾವಿಂದು ಸುಲಭವಾಗಿ ತಿಂಡಿಯೊಂದಿಗೆ ಹಾಗೆ ಊಟದ ರುಚಿ ಹೆಚ್ಚಿಸುವ ಗೋರಿಕಾಯಿಯ ವಿಭಿನ್ನ ಗ್ರೇವಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ಈ ಗೋರಿಕಾಯಿಯ ಪಲ್ಯ ಹಾಗೆ ಸಾಂಬಾರ್ ಮಾಡಿ ಸವಿಯುವ ಹಲವು ಖಾದ್ಯಗಳ ನೀವು ಸವಿದಿರುತ್ತೀರಿ. ಹಾಗೆ ಆರೋಗ್ಯದ ದೃಷ್ಟಿಯಿಂದ ಈ ಗೋರಿಕಾಯಿ ಬಹಳ ಉತ್ತಮ ಹಸಿರು ತರಕಾರಿಯಾಗಿದೆ. ಗೋರಿಕಾಯಿಯಲ್ಲಿನ ನಾರಿನ ಅಂಶ, ವಿಟಮಿನ್, ಕಬ್ಬಿಣಾಂಶವು ನಿಮ್ಮ ದೇಹಕ್ಕೆ ಉತ್ತಮವಾಗಿರಲಿದೆ. ಇದು ಮಧುಮೇಹ ನಿಯಂತ್ರಣ ಹೃದಯದ ಆರೋಗ್ಯ ಸುಧಾರಣೆ ಜೀರ್ಣಕ್ರಿಯೆ ಸುಗಮಗೊಳಿಸುವುದು ತೂಕ ಇಳಿಕೆ ಮತ್ತು ಗರ್ಭಿಣಿಯರಿಗೆ ಅಗತ್ಯವಾದ ಫೋಲಿಕ್ ಆಮ್ಲವನ್ನು ಒದಗಿಸುವ ಅತ್ಯುತ್ತಮ ತರಕಾರಿಯಾಗಿದೆ.

ಹಾಗೆ ಈ ಗೋರಿಕಾಯಿಯ ಪಲ್ಯವಂತು ಚಪಾತಿ, ದೋಸೆಯ ರುಚಿ ದುಪ್ಪಟ್ಟಾಗಿಸುತ್ತೆ. ಆದ್ತೆ ನಾವಿಂದು ಊಟಕ್ಕೆ ಹಾಗೆ ತಿಂಡಿಗೂ ಸೇರಿದಂತೆ ಮಾಡುವ ಈ ಗೋರಿಕಾಯಿಯ ವಿಶೇಷ ಗ್ರೇವಿ ರೆಸಿಪಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಗೋರಿಕಾಯಿ ಗ್ರೇವಿ ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ? ಯಾವೆಲ್ಲಾ ವಸ್ತುಗಳ ಬಳಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಗೋರಿಕಾಯಿ ಪಲ್ಯ ಮಾಡಲು ಬೇಕಾಗುವ ವಸ್ತುಗಳು
- ಗೋರಿಕಾಯಿ
- ಅರಶಿಣ
- ಗೋಡಂಬಿ
- ಟೊಮೆಟೋ
- ತೆಂಗಿನಕಾಯಿ ತುರಿ
- ಈರುಳ್ಳಿ
- ಕರಿಬೇವು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಉಪ್ಪು
- ಎಣ್ಣೆ
- ಕೊತ್ತಂಬರಿ ಸೊಪ್ಪು
ಗೋರಿಕಾಯಿ ಪಲ್ಯ ಮಾಡುವ ವಿಧಾನವೇನು?
ಮೊದಲು ಅರ್ಧ ಕೆ.ಜಿ ಗೋರಿಕಾಯಿಯನ್ನು ತೊಳೆದು ಹೆಚ್ಚಿಕೊಂಡು ಇಟ್ಟುಕೊಳ್ಳಿ, ಬೀನ್ಸ್ ಗಾತ್ರಕ್ಕೆ ಹೆಚ್ಚಿಟ್ಟುಕೊಳ್ಳಿ. ಈಗ ಮಿಕ್ಸಿ ಜಾರ್‌ಗೆ ತೆಂಗಿನಕಾಯಿ, ಟೊಮೆಟೋ, ಗೋಡಂಬಿ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಈ ಫೇಸ್ಟ್ ಅನ್ನು ಬದಿಗಿಟ್ಟುಕೊಳ್ಳಿ.
ಈಗ ಕುಕ್ಕರ್ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಅನಂತರ ಚಕ್ಕೆ ಹಾಕಿಕೊಂಡು ಈರುಳ್ಳಿ ಸಹ ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿಣ, ಕರಿಬೇವು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಸಾಂಬಾರ್ ಪುಡಿ, ಹಾಗೆ ಮೊದಲು ರುಬ್ಬಿದ್ದ ಟೊಮೆಟೋ ಪೇಸ್ಟ್ ಅನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಂಡು ಫ್ರೈ ಆಗಲು ಬಿಡಿ.
ಇದು ಸ್ವಲ್ಪ ಗಟ್ಟಿಯಾಗಿ ಮಸಾಲೆಯಾಗಿ ಬದಲಾಗಬೇಕು. ಈಗ ಹೆಚ್ಚಿಕೊಂಡಿರುವ ಗೋರಿಕಾಯಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಸ್ವಲ್ಪ ನೀರು ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಉಪ್ಪು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ಗ್ಯಾಸ್ ಹೋಗಿ ಕುಕ್ಕರ್ ತಣ್ಣಗಾದ ಬಳಿಕ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಂಡು ಇದಕ್ಕೆ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಮತ್ತೆ 2 ನಿಮಿಷ ಬೇಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಈ ಗೋರಿಕಾಯಿ ಗ್ರೇವಿ ಸಿದ್ದವಾಗುತ್ತೆ.



Click it and Unblock the Notifications