Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇವಸ್ಥಾನದ ಪ್ರಸಾದ ಗೊಜ್ಜವಲಕ್ಕಿ ಮನೆಯಲ್ಲೇ ಮಾಡಿ..! ರುಚಿಗೆ ಸರಿಸಾಟಿ ಇಲ್ಲ!
ಮನೆತಿಂಡಿ, ಬೇಕರಿ ತಿಂಡಿ ಎಲ್ಲದಕ್ಕಿಂತಲೂ ರುಚಿ ಅನಿಸೋದು ದೇವಾಲಯದಲ್ಲಿ ನೀಡುವ ಪ್ರಸಾದ. ಹುಟ್ಟೆ ತುಂಬುವಷ್ಟು ನೀಡದಿದ್ದರು ಅಲ್ಲಿ ನೀಡುವ ಪ್ರಸಾದದ ಒಂದು ಕಾಳು ಸಹ ವ್ಯರ್ಥ ಮಾಡದೆ ಸವಿಯುತ್ತೇವೆ. ಏಕೆಂದರೆ ದೇವಾಲಯದಲ್ಲಿ ನೀಡುವ ಪ್ರಸಾದ ಅಷ್ಟೊಂದು ರುಚಿಕರವಾಗಿರುತ್ತೆ.
ಹೀಗಾಗಿ ದೇವಸ್ಥಾನದ ಪ್ರಸಾದವನ್ನ ಎಲ್ಲರು ಬಾಯಿ ಚಪ್ಪರಿಸಿ ಸವಿಯುತ್ತಾರೆ. ಅಲ್ಲದೆ ದೇವಾಲಯದಲ್ಲಿ ಪ್ರಸಾದದ ರೂಪಸಲ್ಲಿ ನೀಡುವ ಖಾದ್ಯವನ್ನ ಮನೆಯಲ್ಲಿಯೇ ಮಾಡಿ ಸವಿಯಲು ಇಷ್ಟಪಡುತ್ತಾರೆ. ದೇವಾಲಯದಲ್ಲಿ ನೀಡುವಂತಹ ಪುಳಿಯೋಗರೆ, ಚಿತ್ರಾನ್ನ, ಮೊಸರನ್ನ, ಅವಲಕ್ಕಿ, ಗೊಜ್ಜವಲಕ್ಕಿ, ಕಾಳು ಸೇರಿ ಹಲವು ರೀತಿಯ ತಿಂಡಿಯನ್ನ ಮನೆಯಲ್ಲೇ ಮಾಡುತ್ತಾರೆ.

ಅದ್ರಲ್ಲೂ ದೇವಸ್ಥಾನದಲ್ಲಿ ನೀಡುವ ಗೊಜ್ಜವಲಕ್ಕಿ ಎಲ್ಲಿಗೂ ಬಹಳ ಪ್ರಿಯವಾದ ಪ್ರಸಾದ, ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಗೊಜ್ಜವಲಕ್ಕಿಯನ್ನು ಸವಿಯಲು ಇಷ್ಟಪಡುತ್ತಾರೆ. ಹಾಗಾದ್ರೆ ನಾವಿಂದು ದೇವಾಲಯದಲ್ಲಿ ಪ್ರಸಾದವಾಗಿ ನೀಡುವ ಗೊಜ್ಜವಲಕ್ಕಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಗೊಜ್ಜವಲಕ್ಕಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು, ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೊಜ್ಜವಲಕ್ಕಿ ಮಾಡಲು ಬೇಕಾಗುವ ವಸ್ತುಗಳು
ಅವಲಕ್ಕಿ- 1 ಕಪ್
ಉದ್ದಿನ ಬೇಳೆ - 2 ಸ್ಪೂನ್
ಕಡಲೆ ಬೇಳೆ- 2 ಸ್ಪೂನ್
ಒಣ ಮೆಣಸು- 4
ಸಾಸಿವೆ
ಸಾಂಬಾರ್ ಪುಡಿ
ಅರಶಿನ
ಬೆಲ್ಲ
ಹುಣಸೆ ಹುಳಿ
ಕರಿಬೇವು
ಉಪ್ಪು
ಗೊಜ್ಜವಲಕ್ಕಿ ಮಾಡುವ ವಿಧಾನ
ಮೊದಲು ಅವಲಕ್ಕಿ ತೆಗೆದುಕೊಂಡು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಒಂದು ಸುತ್ತು ಬರುವಂತೆ ರುಬ್ಬಬೇಕು. ಅಂದರೆ ಅದು ಪುಡಿಯಾದರೆ ಸಾಕು. ನುಣ್ಣಗಾಗಬಾರದು. ರವೆ ರವೆಯಾಗಿ ಅವಲಕ್ಕಿ ಆಗಬೇಕು. ಬಳಿಕ ಇದನ್ನು ತೆಗದುಕೊಂಡು ಒಂದು ಬೌಲ್‌ಗೆ ಹಾಕಿಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಇದನ್ನು ಇನ್ನೊಂದು ಪಾತ್ರೆಗೆ ಹಾಕಿಕೊಳ್ಳಿ.
ನೀರಿಲ್ಲದಂತೆ ಚೆನ್ನಾಗಿ ಹಿಂಡಿಕೊಂಡು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ. ಬಳಿಕ ಸ್ವಲ್ಪ ನೀರು ಹಾಕಿ ಅಂದರೆ ಎರಡು ಸ್ಪೂನ್ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಬದಿಗಿಡಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಹುರಿದುಕೊಳ್ಳಬೇಕು. ಇದಕ್ಕೆ ಎಳ್ಳು ಸಹ ಹಾಕಿಕೊಂಡು ಹುರಿದುಕೊಳ್ಳಿ. ಆದರೆ ಇದಕ್ಕೆ ಎಣ್ಣೆ ಹಾಕಿಕೊಳ್ಳದೆ ಹುರಿದುಕೊಳ್ಳಿ.
ಈ ರೀತಿ ಹುರಿದುಕೊಂಡ ವಸ್ತುಗಳನ್ನು ಇಂದು ಸಣ್ಣ ಮಿಕ್ಸಿ ಜಾರ್‌ಗೆ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಬಳಿಕ ಒಂದು ಸಣ್ಣ ಬೌಲ್‌ಗೆ ಹುಣಸೆ ಹಣ್ಣಿನ ಹುಳಿ ಹಿಂಡುಕೊಳ್ಳಿ. ಅದಕ್ಕೆ ಸಾಂಬಾರ್ ಪುಡಿ, ಅರಶಿನ ಪುಡಿ, ಬೆಲ್ಲ, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದನ್ನು ಒಂದು ಪಾತ್ರೆಗೆ ಹಾಕಿ ಕಾಯಿಸಿಕೊಳ್ಳಿ. ಸ್ವಲ್ಪ ನೀರು ಸಹ ಹಾಕಿಕೊಂಡು ಕುದಿಯಲು ಬಿಡಿ. 3 ರಿಂದ 4 ನಿಮಿಷ ಕುದಿಯಲು ಬಿಡಿ.
ಬಳಿಕ ತೊಳೆದಿಟ್ಟಿರುವ ಅವಲಕ್ಕಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಒಲೆ ಆಫ್ ಮಾಡಿ ಬದಿಗೆ ಇಟ್ಟುಕೊಳ್ಳಿ. ಈಗ ಅದಕ್ಕೆ ಒಗ್ಗರಣೆ ರೆಡಿ ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕಡಲೆ ಬೀಜ, ಕಡಲೆ ಬೇಳೆ, ಉದ್ದಿನ ಬೇಳೆ, ಮೆಣಸಿನ ಕಾಯಿ, ಕರಿವೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈಗ ಈ ಫ್ರೈಗೆ ನಾವು ಮೊದಲು ರುಬ್ಬಿಕೊಂಡು ಪೌಡರ್ ಮಾಡಿಕೊಂಡ ಮಸಾಲೆಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಕೊನೆಯದಾಗಿ ಅವಲಕ್ಕಿಯನ್ನು ಈ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಆಫ್ ಮಾಡಿಕೊಳ್ಳಿ. ಒಂದು ನಿಮಿಷ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ದೇವಸ್ಥಾನದಲ್ಲಿ ನೀಡುವ ಗೊಜ್ಜವಲಕ್ಕಿ ರೆಡಿಯಾಗಿರುತ್ತದೆ.



Click it and Unblock the Notifications