ಸಕ್ಕರೆ ಇಲ್ಲದ ರಾಗಿ ಕೇಕ್! ಬೇಕರಿಗಿಂತ ರುಚಿಯಾಗಿ ಮಾಡೋದು ಹೇಗೆ? ಎಷ್ಟು ಈಸಿ ಗೊತ್ತಾ?

Posted By:

ಆರೋಗ್ಯಕರ ರಾಗಿ ಕೇಕ್! ಕೇವಲ 15 ನಿಮಿಷದಲ್ಲಿ ಮನೆಯಲ್ಲಿಯೇ ಮಾಡಿ. ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಸರಳ ವಿಧಾನ ಇಲ್ಲಿದೆ, ಒಮ್ಮೆ ಟ್ರೈ ಮಾಡಿ ನೋಡಿ. ಕ್ಯಾಲ್ಸಿಯಂ, ಪ್ರೊಟೀನ್, ಫೈಬರ್ ಮತ್ತು ಕಬ್ಬಿಣಾಂಶ ಹೇರಳವಾಗಿರುವ ರಾಗಿ (Ragi) , ಆರೋಗ್ಯಕ್ಕೆ ಅತ್ಯುತ್ತಮ ಧಾನ್ಯ. ಗೋಧಿ ಹಿಟ್ಟಿಗೆ ಪರ್ಯಾಯವಾಗಿ ರಾಗಿ ಬಳಸಿ ಗ್ಲುಟನ್-ಮುಕ್ತ ಕೇಕ್ (Gluten Free Ragi Cake) ತಯಾರಿಸಬಹುದು. ಹಬ್ಬಗಳು, ಹುಟ್ಟುಹಬ್ಬಗಳು ಅಥವಾ ಯಾವುದೇ ವಿಶೇಷ ಸಂದರ್ಭಗಳಿಗೆ ಇದು ಉತ್ತಮ ಆಯ್ಕೆಯಾಗಿದೆ.

ಸಾಮಾನ್ಯವಾಗಿ ಕೇಕ್‌ಗಳಲ್ಲಿ ಗೋಧಿ ಹಿಟ್ಟು ಮತ್ತು ಅತಿಯಾದ ಸಕ್ಕರೆ ಬಳಸಲಾಗುತ್ತದೆ. ಆದರೆ, ರಾಗಿ ಕೇಕ್‌ನಲ್ಲಿ ಪೌಷ್ಟಿಕ ರಾಗಿ ಹಿಟ್ಟು ಉಪಯೋಗಿಸಲಾಗುತ್ತದೆ. ಸಕ್ಕರೆ ಬದಲಿಗೆ ಬೆಲ್ಲದ ಪುಡಿ ಅಥವಾ ಖರ್ಜೂರದ ಪೇಸ್ಟ್ ಸೇರಿಸುವ ಮೂಲಕ ಇದನ್ನು ಇನ್ನಷ್ಟು ಆರೋಗ್ಯಕರವಾಗಿಸಬಹುದು. ತೂಕ ನಿರ್ವಹಣೆ ಮತ್ತು ಮಧುಮೇಹಿಗಳಿಗೂ ಇದು ಸೂಕ್ತವಾಗಿದೆ. ರಾಗಿ ಕೇಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಸುವ ವಿಧಾನ (Gluten Free Ragi Cake) ಇಲ್ಲಿದೆ.

How to Make Gluten Free Ragi Cake Recipe

ರಾಗಿ ಕೇಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು

• ರಾಗಿ ಹಿಟ್ಟು
• ಸಕ್ಕರೆ ಅಥವಾ ಬೆಲ್ಲದ ಪುಡಿ
• ತೆಂಗಿನೆಣ್ಣೆ ಅಥವಾ ಆಲಿವ್ ಆಯಿಲ್
• ಹಾಲು ಅಥವಾ ಬಾದಾಮಿ ಹಾಲು
• ಮೊಟ್ಟೆ ಅಥವಾ ಸಸ್ಯಾಹಾರಿಗಳು ಬಾಳೆಹಣ್ಣು ಪೇಸ್ಟ್ ಬಳಸಬಹುದು
• ಅಡಿಗೆ ಸೋಡಾ
• ಬೇಕಿಂಗ್ ಪೌಡರ್
• ಏಲಕ್ಕಿ ಪುಡಿ
• ರುಚಿಗೆ ತಕ್ಕಷ್ಟು ಉಪ್ಪು
• ಒಣಹಣ್ಣುಗಳು (ಡ್ರೈ ಫ್ರೂಟ್ಸ್)

Gluten Free Ragi Cake Recipe

ರಾಗಿ ಕೇಕ್ ತಯಾರಿಸುವ ವಿಧಾನ

ಮೊದಲಿಗೆ ಒಂದು ದೊಡ್ಡ ಬಟ್ಟಲಿನಲ್ಲಿ 1 ಕಪ್ ರಾಗಿ ಹಿಟ್ಟು ಹಾಕಿ. ಇದಕ್ಕೆ ½ ಕಪ್ ಸಕ್ಕರೆ ಅಥವಾ ಬೆಲ್ಲದ ಪುಡಿ, ¼ ಚಮಚ ಅಡಿಗೆ ಸೋಡಾ, ¼ ಚಮಚ ಬೇಕಿಂಗ್ ಪೌಡರ್, ¼ ಚಮಚ ಏಲಕ್ಕಿ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಚೆನ್ನಾಗಿ ಮಿಕ್ಸ್ ಮಾಡಿ. ಮತ್ತೊಂದು ಬಟ್ಟಲಿನಲ್ಲಿ ¼ ಕಪ್ ತೆಂಗಿನೆಣ್ಣೆ ಅಥವಾ ಆಲಿವ್ ಆಯಿಲ್, ¼ ಕಪ್ ಹಾಲು ಅಥವಾ ಬಾದಾಮಿ ಹಾಲು ಮತ್ತು 1 ಮೊಟ್ಟೆಯನ್ನು ಹಾಕಿ, ನಯವಾಗಿ ಬ್ಲೆಂಡ್ ಮಾಡಿ. ಈ ದ್ರವ ಮಿಶ್ರಣವನ್ನು ನಿಧಾನವಾಗಿ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಗಟ್ಟಿಯಾದ ಪೇಸ್ಟ್‌ನಂತೆ ಕಲಸಿ.

ನಂತರ ¼ ಕಪ್ ಒಣಹಣ್ಣುಗಳನ್ನು (ಡ್ರೈ ಫ್ರೂಟ್ಸ್) ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಿಂಗ್ ಡಿಶ್‌ಗೆ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಚ್ಚಿ, ಸಿದ್ಧಪಡಿಸಿದ ಮಿಶ್ರಣವನ್ನು ಅದರಲ್ಲಿ ಸುರಿಯಿರಿ. ಓವನ್ ಅನ್ನು ಮೊದಲೇ ಬಿಸಿ ಮಾಡಿ. ನಂತರ ಕೇಕ್ ಮಿಶ್ರಣವನ್ನು ಸುಮಾರು 30 ನಿಮಿಷಗಳ ಕಾಲ ಬೇಯಿಸಿ. ಕೇಕ್ ಬೆಂದಿದೆಯೇ ಎಂದು ಪರೀಕ್ಷಿಸಲು ಟೂತ್‌ಪಿಕ್ ಅಥವಾ ಚಾಕು ಹಾಕಿ ನೋಡಿ. ಸ್ವಚ್ಛವಾಗಿ ಹೊರಬಂದರೆ ಕೇಕ್ ಸಿದ್ಧವಾಗಿದೆ. ತಣ್ಣಗಾದ ನಂತರ ಕತ್ತರಿಸಿ. ಇಷ್ಟು ಮಾಡಿದರೆ, ಮನೆಯಲ್ಲೇ ಆರೋಗ್ಯಕರ ಸಿಹಿ ರಾಗಿ ಕೇಕ್‌ ಸಿದ್ಧ.

Ragi Cake Recipe

ನೀವು ರಾಗಿ ಕೇಕ್ ತಯಾರಿಸುವಾಗ ಸಕ್ಕರೆ ಬದಲು ಬೆಲ್ಲ ಅಥವಾ ಖರ್ಜೂರ ಪೇಸ್ಟ್ ಬಳಸಿ. ಹಾಲು ಬದಲಿಗೆ ಬಾದಾಮಿ ಹಾಲು ಅಥವಾ ಸೋಯಾ ಹಾಲು ಉಪಯೋಗಿಸಬಹುದು. ಮೊಟ್ಟೆ ಬದಲು ಬಾಳೆಹಣ್ಣು ಪೇಸ್ಟ್ ಅಥವಾ ಫ್ಲ್ಯಾಕ್ಸ್ ಸೀಡ್ ಪೇಸ್ಟ್ ಬಳಸಿ ಸಸ್ಯಾಹಾರಿ ಕೇಕ್ ತಯಾರಿಸಬಹುದು. ಸುವಾಸನೆಗೆ ಏಲಕ್ಕಿ ಬದಲು ವೆನಿಲ್ಲಾ ಎಸೆನ್ಸ್ ಸಹ ಬಳಸಬಹುದು. ಓವನ್ ಇಲ್ಲದಿದ್ದರೆ ಪ್ರೆಶರ್ ಕುಕ್ಕರ್ ಅಥವಾ ಕಡಾಯಿಯಲ್ಲೂ ಕೇಕ್ ತಯಾರಿಸಬಹುದು. ಸುಮಾರು 30 ನಿಮಿಷಗಳಲ್ಲಿ ತಯಾರಾಗುವ ಈ ರಾಗಿ ಕೇಕ್ ತಯಾರಿಸಿದರೆ, ರುಚಿಕರ ಮಾತ್ರವಲ್ಲದೆ ಆರೋಗ್ಯಕರವೂ ಆಗಿರುತ್ತದೆ. ಸಿಹಿ ತಿನ್ನಬೇಕೆಂಬ ಆಸೆ ತಣಿಸುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

[ of 5 - Users]
Story first published: Saturday, August 16, 2025, 16:30 [IST]
X
Desktop Bottom Promotion