Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
5 ನಿಮಿಷದಲ್ಲಿ ಗ್ಲಾಸ್ ಹಲ್ವಾ ಮಾಡಿ..! ಇಲ್ಲಿದೆ ಸರಳ ತಿಂಡಿ ರೆಸಿಪಿ
ಮನೆಯಲ್ಲಿ ನೀವು ಎಷ್ಟು ರೀತಿಯ ಸಿಹಿ ತಿಂಡಿಗಳ ಮಾಡಿ ಸವಿದಿರುತ್ತೀರಿ. ಹಲ್ವಾ ಅಂದ್ರೆ ಎಲ್ಲರಿಗೂ ಬಹಳ ಇಷ್ಟವಾಗುವ ಸಿಹಿ ತಿಂಡಿಯಾಗಿದೆ. ಹಲವು ಬಗೆಯಲ್ಲಿ ಹಲ್ವಾ ಮಾಡಬಹುದಾಗಿದೆ. ಅದರಲ್ಲೂ ಕೆಲವೊಂದು ಬಗೆಯು ಬಹಳ ರುಚಿಕರ ಹಾಗೂ ಫೇಮಸ್ ಆಗಿವೆ. ಕುಂಬಳಕಾಯಿ ಹಲ್ವಾ, ಕ್ಯಾರೆಟ್ ಹಲ್ವಾ ಸೇರಿ ಹಲ್ವಾದಲ್ಲಿ ಹತ್ತಾರು ವಿಧಗಳಿವೆ.
ನಾವು ಹಲ್ವಾ ಸಿಹಿಯನ್ನು ಹಬ್ಬದ ಸಮಯದಲ್ಲಿ ಇಲ್ಲವೆ ಶುಭ ಸಂದರ್ಭದಲ್ಲಿ ಮನೆಗೆ ಅತಿಥಿಗಳು ಬಂದಾಗ ಮಾಡಿರುತ್ತೇವೆ. ಇಲ್ಲವೆ ಅಂಗಡಿಯಿಂದ ಖರೀದಿಸಿ ತಂದು ಸವಿಯುತ್ತೇವೆ. ಇನ್ನು ಮನೆಯಲ್ಲೇ ನಾವು ಈ ಹಲ್ವಾ ಮಾಡಿ ಸವಿಯಬಹುದಾಗಿದೆ. ಅದರಲ್ಲೂ ವಿಶೇಷ ಬಗೆಯಲ್ಲಿ ಒಂದು ಹಲ್ವಾ ಇದೆ. ಗ್ಲಾಸ್ ಹಲ್ವಾ, ನೀವು ಕೂಡ ಇದನ್ನು ಸವಿದಿರಬಹುದು. ಯಾವುದೇ ಬಣ್ಣವಿಲ್ಲದೆ ಪಾರದರ್ಶಕವಾದ ಹಲ್ವಾ ಇದಾಗಿದೆ.

ಗ್ಲಾಸ್ ರೀತಿ ಕಾಣುವ ಈ ಹಲ್ವಾ ಮಾಡಬಹುದು. ಇದರ ರುಚಿಗೆ ನೀವು ಮಾರು ಹೋಗುತ್ತೀರಿ, ಮಾಡುವುದು ಕೂಡ ತುಂಬಾನೆ ಸುಲಭ. ನೋಡಲಿ ಬಹಳ ಆಕರ್ಷಕವಾಗಿ, ರಿಚ್ ಆಗಿ ಕಾಣುವ ಕಾರಣದಿಂದಾಗಿ ಎಲ್ಲರಿಗೂ ಒಮ್ಮೆಯಾದರು ಇದನ್ನು ಸವಿಯಬೇಕು ಎನಿಸುತ್ತೆ. ಹೀಗಾಗಿ ನಾವಿಂದು ಈ ಗ್ಲಾಸ್ ಹಲ್ವಾ ಮಾಡುವ ಕುರಿತು ತಿಳಿದುಕೊಳ್ಳೋಣ.
ಗ್ಲಾಸ್ ಹಲ್ವಾ ಮಾಸಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಗ್ಲಾಸ್ ಹಲ್ವಾ ಮಾಡಲು ಎಷ್ಟು ಸಮಯ ಹಿಡಿಯುತ್ತದೆ? ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗ್ಲಾಸ್ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು
- ಅಗರ್ ಅಗರ್ - 30 ಗ್ರಾಮ್
- ಸಕ್ಕರೆ - 1 ಬೌಲ್
- ನೀರು
ಗ್ಲಾಸ್ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು
ಮೊದಲು ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಅಗರ್ ಅಗರ್ ಅನ್ನು ಕತ್ತಿಸಿಕೊಂಡು ಹಾಕಿಕೊಳ್ಳಿ. ಅಗರ್ ಅಗರ್ ಅಂಗಡಿಯಲ್ಲಿ ದೊರೆಯುತ್ತದೆ. ಅಗರ್-ಅಗರ್ ಅನ್ನು ಚಕ್ಕೆಗಳು, ಕಡಲಿನ ಪಾಚಿಯನ್ನು ಪುಡಿ, ಜೆಲ್ ಆಗಿ ಕುದಿಸಲಾಗುತ್ತದೆ ಇದು ಬಿಳಿ ಬಣ್ಣದ ಪೌಡರ್ ಮಾಡಿ ನಂತರ ಹೊಳೆಯುವಂತೆ ಮಾಡಲಾಗಿರುತ್ತದೆ.
ಅಗರ್ ಅನ್ನು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ನೆನೆಯಲು ಬಿಡಿ. ಈಗ ಒಲೆ ಮೇಲೆ ಒಂದು ಪಾತ್ರೆ ಒಟ್ಟು ಒಂದು ಲೀಟರ್ ನೀರು ಹಾಕಿಕೊಂಡು ಅದಕ್ಕೆ 1 ಬೌಲ್ ಸಕ್ಕರೆ ಹಾಗೂ ನೆನೆಸಿರುವ ಅಗರ್ ಅನ್ನು ಹಾಕಿಕೊಂಡು ಮಧ್ಯಮ ಉರಿಯಲ್ಲಿ 10 ನಿಮಿಷ ಕುದಿಸಿದರೆ ಎಲ್ಲಾ ಪದಾರ್ಥಗಳು ಕರಗುತ್ತವೆ. ಆಗಾಗ ನಿಧಾನವಾಗಿ ತಿರುಗಿಸುತ್ತಾ ಇರಿ.
ನಂತರ ಒಲೆಯಿಂದ ಇಳಿಸಿಕೊಂಡು ಜರಡಿ ಹಿಡಿದುಕೊಳ್ಳಿ. ಈಗ ದೊಡ್ಡ ತಟ್ಟೆಗೆ ಈ ಮಿಶ್ರಣವನ್ನು ಹಾಕಿಕೊಂಡು ತಣ್ಣಗಾಗಲು ಬಿಡಿ. ಫ್ರಿಡ್ಜ್‌ನಲ್ಲಿ 3 ಗಂಟೆಗಳ ಕಾಲ ಇಟ್ಟರೆ ಇದು ಗಟ್ಟಿಯಾಗುತ್ತದೆ. ಫ್ರಿಡ್ಜ್ ಇಲ್ಲ ಎಂದರೆ ಒಂದು ಪಾತ್ರೆಗೆ ತಣ್ಣಿರು ಹಾಕಿ ಅದರ ಒಳಗೆ ಈ ತಟ್ಟೆ ಇಡಿ, ನೀರು ಒಳಗೆ ಬಾರದಂತೆ ಇಟ್ಟುಕೊಳ್ಳಿ. ಒಟ್ಟಿನಲ್ಲಿ ಇದು ತಣ್ಣಗಾಗಿ ಗಟ್ಟಿಯಾಗಬೇಕು.
ಗಟ್ಟಿಯಾದ ಬಳಿಕ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ನಂತರ ಈ ಗ್ಲಾಸ್ ಹಲ್ವಾ ಸವಿಯಲು ಸಿದ್ದವಾಗುತ್ತದೆ. ನೀವು ಬೇಕಾದರೆ ಯಾವುದಾದರು ಕಲರ್ ಹಾಕಿದರೆ ಆ ಬಣ್ಣಗೆ ಬರುತ್ತದೆ. ತಟ್ಟೆಗೆ ಈ ಮಿಶ್ರಣ ಹಾಕುವ ಮುನ್ನ ಬಣ್ಣ ಹಾಕಿಕೊಳ್ಳಬಹುದು. ಇಲ್ಲದಿದ್ದರೆ ಈ ಗ್ಲಾಸ್‌ನಂತೆಯೇ ಬರುತ್ತದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications