Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
1 ವರ್ಷ ಇಟ್ಟು ಸವಿಯಬಹುದು ಶುಂಠಿ ತೊಕ್ಕು: ಮಾಡೋದು ಹೇಗೆ?
ನೀವು ಊಟದೊಂದಿಗೆ ಸವಿಯಲು ಹಲವು ಖಾದ್ಯಗಳ ಮಾಡಲು ಮುಂದಾಗುತ್ತೀರಿ. ಇಂತಹ ಹಲವು ಖಾದ್ಯಗಳು ಅಂದಾಗ ಥಟ್ ಅಂತ ನಿಮಗೆ ಹಲವು ರೆಸಿಪಿಗಳು ನೆನಪಾಗಬಹುದು. ಅದ್ರಲ್ಲೂ ಊಟ ತಿಂಡಿಯೊಂದಿಗೆ ಸವಿಯಲು ನೀವು ಸೈಡ್ ಡಿಶ್ ಆಗಿ ಒಂದಿಷ್ಟು ರೆಸಿಪಿಗಳ ಮಾಡಿ ಸವಿಯುವುದು ನೋಡಬಹುದು. ಹಾಗೆ ಊಟದೊಂದಿಗೆ ತೊಕ್ಕು ಮಾಡಿ ಸವಿಯುವುದು ನೋಡಬಹುದು.
ಹಲವು ಬಗೆಯಲ್ಲಿ ತೊಕ್ಕು ಮಾಡಿ ಸವಿಯೋದು ಕಾಮನ್, ಊಟದೊಂದಿಗೆ ಹಾಗೆ ದೋಸೆ, ಇಡ್ಲಿಯೊಂದಿಗೆ ಸವಿಯಲು ಈ ತೊಕ್ಕುಗಳು ಬಹಳ ರುಚಿ ನೀಡಲಿವೆ. ಹಾಗೆ ಒಮ್ಮೆ ಮಾಡಿಕೊಂಡರೆ ಬಹು ದಿನಗಳ ಕಾಳ ಇಟ್ಟು ಸವಿಯಬಹುದಾದ ರುಚಿಕರ ತೊಕ್ಕುಗಳು ಕೂಡ ನಮ್ಮ ನಡುವೆ ಇವೆ. ಇಂತಹ ತೊಕ್ಕುಗಳ ಪೈಕಿ ನಾವಿಂದು ಶುಂಠಿಯಿಂದ ಮಾಡುವ ತೊಕ್ಕು ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.

ಶುಂಠಿಯಿಂದ ಮಾಡುವ ಹಲವು ರೆಸಿಪಿಗಳಲ್ಲಿ ತೊಕ್ಕು ಕೂಡ ಒಂದು. ನೀವು ಒಂದು ವರ್ಷದ ವರೆಗೂ ಸಹ ಇಟ್ಟು ಇದನ್ನು ಸವಿಯಬಹುದು. ಬಹಳ ಸುಲಭವಾಗಿ ಮಾಡಬಹುದು, ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಈ ತೊಕ್ಕು ಮಾಡಬಹುದು. ಇದನ್ನು ಊಟದೊಂದಿಗೆ ಹಾಗೆ ದೋಸೆ, ಇಡ್ಲಿಯೊಂದಿಗೆ ಸವಿಯಬಹುದು.
ಹಾಗಾದ್ರೆ ಈ ಶುಂಠಿ ತೊಕ್ಕು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು ? ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಶುಂಠಿ ತೊಕ್ಕು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಶುಂಠಿ
- ಹುಣಸೆ ಹುಳಿ
- ಜೀರಿಗೆ
- ಕೊತ್ತಂಬರಿ ಕಾಳು
- ಮೆಂತ್ಯ
- ಬೆಳ್ಳುಳ್ಳಿ
- ಬೆಲ್ಲ
- ಕೆಂಪು ಮೆಣಸಿನ ಪುಡಿ
- ಉಪ್ಪು
- ಉದ್ದಿನ ಬೇಳೆ
- ಕಡಲೆ ಬೇಳೆ
- ಒಣ ಮೆಣಸು
- ಕರಿಬೇವು
- ಇಂಗು
- ಎಣ್ಣೆ
ಶುಂಠಿ ತೊಕ್ಕು ಮಾಡುವ ವಿಧಾನವೇನು?
ಮೊದಲು ಹುಣಸೆ ಹುಳಿಯನ್ನು ಒಂದು ಬೌಲ್‌ಗೆ ಹಾಕಿ ಬಿಸಿ ನೀರು ಹಾಕಿ ನೆನೆಸಿಡಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ, ಜೀರಿಗೆ, ಧನಿಯಾ ಕಾಳು, ಮೆಂತ್ಯ ಹಾಕಿ ಫ್ರೈ ಮಾಡಿಕೊಳ್ಳಿ. ಹಾಗೆ ಬೆಳ್ಳುಳ್ಳಿ ಸಹ ಹಾಕಿ ಬಿಸಿ ಮಾಡಿಕೊಳ್ಳಿ.
ನಂತರ ಎಲ್ಲಾ ವಸ್ತು ತೆಗೆದಿಟ್ಟು ತಣ್ಣಗಾಗಲು ಬಿಡಿ. ಈಗ ಒಲೆ ಮೇಲಿನ ಬಾಣಲೆಗೆ ಮತ್ತೆ ಎಣ್ಣೆ ಹಾಕಿ ಹೆಚ್ಚಿಕೊಂಡಿರುವ ಶುಂಠಿ ಹಾಕಿ ಫ್ರೈ ಮಾಡಿ. ಮತ್ತೆ ತೆಗೆದಿಟ್ಟು ಅದನ್ನು ತಣ್ಣಗಾಗಲು ಬಿಡಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಮೊದಲು ಫ್ರೈ ಮಾಡಿಕೊಂಡಿದ್ದ ಎಲ್ಲಾ ವಸ್ತುಗಳು, ಹಾಗೆ ಶುಂಠಿ ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈಗ ಬಾಣಲೆಗೆ ನೆನೆಸಿಟ್ಟ ಹುಣಸೆ ಹಣ್ಣನ್ನು ನೀರಿನ ಸಮೇತ ಹಾಕಿಕೊಂಡು ಕುದಿಬರಲು ಬಿಡಿ. 2 ನಿಮಿಷ ಬಿಟ್ಟು ಒಲ್ ಆಫ್ ಮಾಡಿ ತಣ್ಣಗಾಗಲು ಬಿಡಿ.
ತಣ್ಣಗಾದ ಈ ಹುಳಿಯನ್ನು ಈಗ ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ರುಬ್ಬಬೇಕು. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ 2 ಕಪ್ ಬೆಲ್ಲದ ಪುಡಿ ಹಾಕಿಕೊಳ್ಳಿ. ಅದಕ್ಕೆ ಸ್ಚಲ್ಪ ನೀರು ಹಾಕಿ ಕರಗಲು ಬಿಡಿ. ಬೆಲ್ಲ ಕರಗಿದ ಬಳಿಕ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. 5 ನಿಮಿಷ ಬಿಟ್ಟು ಅದಕ್ಕೆ ಪುಡಿ ಮಾಡಿಕೊಂಡಿದ್ದ ವಸ್ತುಗಳು, ಹುಣಸೆ ಹುಳಿ ಸಹ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ.
ಈಗ ಖಾರದ ಪುಡಿ, ಉಪ್ಪು, ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಬೇಕು. ಖಾರದ ಪುಡಿ ಹಾಗೂ ಉಪ್ಪು ಹೆಚ್ಚಾಗಿ ಬಳಸಬೇಕು. ಈಗ ಒಲೆ ಮೇಲೆ ಮತ್ತೊಂದು ಬಾಣಲೆ ಇಟ್ಟು ಅದಕ್ಕೆ ಒಂದು ಬೌಲ್ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಜೀರಿಗೆ, ಬೆಳ್ಳುಳ್ಳಿ, ಒಣ ಮೆಣಸು, ಕಡಲೆ ಬೇಳೆ. ಉದ್ದಿನ ಬೇಳೆ, ಇಂಗು, ಕರಿಬೇವು ಹಾಕಿ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಶುಂಠಿ ತೊಕ್ಕಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ಶುಂಠಿ ತೊಕ್ಕು ಸಿದ್ದವಾಗುತ್ತೆ. ನೀವಿದನ್ನು ಸ್ಟೀಲ್ ಡಬ್ಬಿಯಲ್ಲಿ ಹಾಕಿಟ್ಟರೆ 1 ವರ್ಷ ಇಟ್ಟು ಸವಿಯಬಹುದು.



Click it and Unblock the Notifications