Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಿ ರುಚಿ ಕೆಟ್ಟಿದ್ದರೆ 5 ನಿಮಿಷದಲ್ಲಿ ಈ ಶುಂಠಿ ರಸಂ ಮಾಡಿ..!! ಬಾಯಲ್ಲಿ ನೀರು ಬರುತ್ತೆ!
ನೀವು ದಿನದಲ್ಲಿ ಕನಿಷ್ಠ ಎರಡು ಬಾರಿಯಾದರು ಮನೆ ಊಟ ಮಾಡುತ್ತೀರಿ, ಮತ್ತೆ ಬಹುತೇಕರು ಇಡೀ ದಿನ ಮನೆಯ ಊಟ, ತಿಂಡಿಯನ್ನೇ ಮಾಡುತ್ತಾರೆ. ಹಾಗೆ ನಿತ್ಯವು ಮನೆ ಊಟ ಮಾಡೋದು ಅಂದರೆ ಬೇಸರ ತರಿಸಲಿದೆ. ಹಾಗೆ ಎಲ್ಲಾ ಸಮಯದಲ್ಲು ಮನೆಯ ಊಟ ಮಾಡೋದು ಅಂದರೆ ಬಹಳ ಬೇಸರದ ವಿಚಾರವಾಗುತ್ತೆ, ಹೀಗಾಗಿಯೇ ಹಲವರು ಆಗಾಗ ಹೋಟೆಲ್ ರೆಸ್ಟೋರೆಂಟ್ ಊಟಕ್ಕೆ ಮುಂದಾಗುವುದು ನೋಡಬಹುದು.
ಹಾಗೆ ಮನೆ ಊಟ ಸವಿದು ಅಥವಾ ಬಹಳ ಕಾಲದಿಂದ ನಿಮ್ಮ ನಾಲಗೆ ರುಚಿ ಕೆಟ್ಟಿದ್ದರೆ ಇಲ್ಲವೆ ಬಾಯಿ ರುಚಿ ಹಾಳಾಗಿದ್ದರೆ ಅದಕ್ಕಾಗಿ ಹೊಸದಾಗಿ ಏನಾದರು ಪ್ರಯತ್ನಿಸಲು ಮುಂದಾಗುತ್ತೀರಿ. ನಿತ್ಯವು ಒಂದೇ ರೀತಿಯ ಸಾಂಬಾರ್, ಸಾರು, ಚಟ್ನಿ, ಹುಳಿ, ಗ್ರೇವಿ ಸವಿಯುತ್ತಿದ್ದರೆ ನಾಲಿಗೆ ರುಚಿ ಕೆಡುವುದು ಸರ್ವೇ ಸಾಮಾನ್ಯ. ಆದ್ರೆ ಬಾಯಿ ರುಚಿ ಕೆಟ್ಟಿದ್ದರೆ ಯಾವ ಖಾದ್ಯ ಮಾಡಿ ಸವಿಯಬೇಕು?

ನೀವು ಸಹ ಇಂತಹ ಗೊಂದಲದಲ್ಲಿದ್ದರೆ ನಾವಿಂದು ನಿಮ್ಮ ಬಾಯಿ ರುಚಿ ಹೆಚ್ಚಿಸುವಂತಹ ಶುಂಠಿ ರಸಂ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಶುಂಠಿ ನಿಮ್ಮ ಟೇಸ್ಟಿಂಗ್ ಬಡ್ಸ್ ಮತ್ತೆ ಮೊದಲಿನಂತೆ ಕೆಲಸ ಮಾಡುವಂತೆ ಮಾಡಲಿದೆ. ಹೀಗಾಗಿ ಸುಲಭವಾಗಿ ಮಾಡುವಂತಹ ಹಾಗೆ ನಾಲಗೆ ರುಚಿ ಕೆಟ್ಟಿದ್ದರೆ ಈ ರೀತಿ ಶುಂಠಿ ರಸಂ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.
ಹಾಗಾದ್ರೆ ಈ ಶುಂಠಿ ರಸಂ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಾಯಿ ರುಚಿ ಹೆಚ್ಚಿಸುವಂತಹ ಶುಂಠಿ ರಸಂ ಮಾಡಲು ಬೇಕಾಗುವ ವಸ್ತುಗಳು
- ತೊಗರಿ ಬೇಳೆ
- ಶುಂಠಿ - 4 ಇಂಚು
- ಟೊಮೆಟೊ - 1
- ಕೊತ್ತಂಬರಿ ಸೊಪ್ಪು
- ಜೀರಿಗೆ
- ಮೆಣಸು
- ಹಸಿ ಮೆಣಸಿನಕಾಯಿ
- ಹುಣಸೆ ಹುಳಿ
- ಬೆಳ್ಳುಳ್ಳಿ
- ಸಾಸಿವೆ
- ಇಂಗು
- ಅರಿಶಿನ ಪುಡಿ
- ಕರಿಬೇವು
- ಉಪ್ಪು
- ಎಣ್ಣೆ
ಬಾಯಿ ರುಚಿ ಹೆಚ್ಚಿಸುವಂತಹ ಶುಂಠಿ ರಸಂ ಮಾಡುವುದು ಹೇಗೆ?
ಮೊದಲು ತೊಗರಿ ಬೇಳೆಯನ್ನು ಕುಕ್ಕರ್‌ಗೆ ಹಾಕಿ ನೀರು, ಎಣ್ಣೆ, ಅರಶಿಣ ಪುಡಿ ಹಾಕಿ 3 ಸೀಟಿ ಹಾಕಿಸಿಕೊಂಡು ಪುಡಿ ಮಾಡಿ ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಜೀರಿಗೆ, ಕಾಳು ಮೆಣಸು ಹಾಕಿ 1 ನಿಮಿಷ ಹುರಿದುಕೊಳ್ಳಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಜೀರಿಗೆ ಕಾಳು ಮೆಣಸನ್ನು ಹಾಕಿ ಪುಡಿ ಮಾಡಿ ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಅದೇ ಮಿಕ್ಸಿ ಜಾರ್‌ಗೆ ಶುಂಠಿ, ಕೊತ್ತಂಬರಿ ಸೊಪ್ಪು ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಇದಕ್ಕೆ ಸಾಸಿವೆ, ಇಂಗು, ಬೆಳ್ಳುಳ್ಳಿ, ಹಸಿ ಮೆಣಸು, ಕರಿಬೇವು ಹಾಕಿ ಅರ್ಧ ನಿಮಿಷ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡ ಟೊಮೆಟೋ ಹಾಕಿ ಮತ್ತೆ 1 ನಿಮಿಷ ಫ್ರೈ ಮಾಡಿ.
ಈಗ ಕುಕ್ಕರ್‌ನಲ್ಲಿ ಬೇಯಿಸಿಕೊಂಡಿರುವ ಬೇಳೆಯನ್ನು ಸಹ ಇದಕ್ಕೆ ಹಾಕಿ ಹಾಗೆ ಮಿಕ್ಸಿಯಲ್ಲಿ ರುಬ್ಬಿದ್ದ ಶುಂಠಿ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿಕೊಳ್ಳಿ. ನಂತರ ಹುಣಸೆ ಹುಳಿಯ ನೀರು, ಹುರಿದುಕೊಂಡಿದ್ದ ಜೀರಿಗೆ ಮೆಣಸಿನ ಪುಡಿ ಸಹ ಹಾಕಿಕೊಳ್ಳಿ. ಹಾಗೆ ಉಪ್ಪು ಮತ್ತು ಅರಶಿಣ ಪುಡಿ ಹಾಕಿ ಅರ್ಧ ಲೀಟರ್ ನೀರು ಸಹ ಸೇರಿಸಿ ಮಿಕ್ಸ್ ಮಾಡಿಕೊಂಡು ಕುದಿಯಲು ಬಿಡಿ.
5 ರಿಂದ 6 ನಿಮಿಷಗಳ ಕಾಲ ಚೆನ್ನಾಗಿ ಕುದಿಬಂದರೆ ಸಾಕಾಗುತ್ತದೆ. ನಿಮ್ಮ ಮುಂದೆ ರುಚಿ ರುಚಿಯ ಶುಂಠಿ ರಸಂ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಈ ರೀತಿ ರಸಂ ಮಾಡಿ. ಬಾಯಿ ರುಚಿ ಕೆಟ್ಟಿದ್ದರೆ ಇದು ಅದ್ಭುತ ರುಚಿ ನೀಡಲಿದೆ. ಮಾಡೋದು ಕೂಡ ತುಂಬಾನೆ ಸುಲಭ.



Click it and Unblock the Notifications