Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಳಿಗಾಲದ ಕೆಮ್ಮು, ನೆಗಡಿ, ನೋವು ನಿವಾರಣೆಗೆ ಇಲ್ಲಿದೆ ಕಷಾಯ; 2 ನಿಮಿಷದಲ್ಲಿ ಮಾಡಿ ಕುಡಿದು ನೋಡಿ!
ಚಳಿಗಾಲದ ದಿನದಲ್ಲಿ ಕೆಮ್ಮು, ನೆಗಡಿ, ಗಂಟಲು ನೋವು, ಆಯಾಸದಂತಹ ಸಾಮಾನ್ಯ ಕಾಲೋಚಿತ ಸಮಸ್ಯೆಗಳ ಎದುರಿಸಬಹುದು. ಅದ್ರಲ್ಲೂ ಕೆಮ್ಮು, ಶೀತ ಚಳಿಗಾಲದ ಆರಂಭದಲ್ಲಿ ಬಹುತೇಕರಿಗೆ ಕಾಡುವಂತಹ ಸಮಸ್ಯೆ ಎನ್ನಬಹುದು. ಆದ್ರೆ ಈ ರೀತಿ ಶೀತ, ಕೆಮ್ಮು ಉಂಟಾದಾಗ ನೀವು ಔಷಧಿ ಮಾಡುವ ಬದಲಾಗಿ ಮನೆಯಲ್ಲೇ ಪರಿಹಾರ ಮಾಡಿಕೊಳ್ಳುವುದು ಉತ್ತಮ.
ಅದ್ರಲ್ಲೂ ನೀವು ಚಳಿಗಾಲದ ಈ ಕಾಲೋಚಿತ ಸಮಸ್ಯೆಗಳು ನಿಮಗೆ ಕಿರಿ ಕಿರಿ ಉಂಟು ಮಾಡಬಹುದು. ಈ ಸಮಸ್ಯೆಗಳಿಂದ ನಿಮಗೂ ಹಾಗೆ ಮನೆಯ ಇತರೆ ಸದಸ್ಯರಿಗೂ ಸಮಸ್ಯೆ ತರಬಹುದು. ಅದ್ರಲ್ಲೂ ಮಕ್ಕಳ ಮೇಲೆ ಇದು ದೊಡ್ಡ ಪರಿಣಾಮ ಉಂಟು ಮಾಡಲಿದೆ. ಮನೆಯಲ್ಲಿ ಈ ಶೀತ, ಕೆಮ್ಮು, ಜ್ವರ ಹರಡಲು ಆರಂಭಿಸಲಿದೆ.

ಹಾಗೆ ನೀವು ಜ್ವರ, ಕೆಮ್ಮು, ಶೀತದಂತಹ ಸಮಸ್ಯೆಗೆ ತುತ್ತಾದಾಗ ಮೆಡಿಕಲ್‌ನಿಂದ ಮಾತ್ರೆಗಳ ತಂದು ಸವಿಯಲು ಮುಂದಾಗುತ್ತೀರಿ. ಇದರಿಂದ ಪರಿಹಾರ ಪಡೆಯಬಹುದಾದರು ಇದು ಮುಂದುವರೆಯುವುದು ನಿಮಗೂ ಸಮಸ್ಯೆಯಾಗಬಹುದು. ಆದ್ರೆ ಮನೆಯಲ್ಲಿಯೇ ನೀವು ಕಷಾಯ ಮಾಡಿ ಸವಿಯುವ ಕುರಿತು ನಾವಿಂದು ತಿಳಿದುಕೊಳ್ಳೋಣ.
ನೀವು ಕೂಡ ಮನೆಯಲ್ಲಿ ಹಲವು ರೀತಿ ಕಷಾಯ ಮಾಡಿ ಸವಿಯುವುದು ನೋಡಬಹುದು. ಕಷಾಯಗಳು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಬಹಳ ಉತ್ತಮ ಅಂಶವಾಗಿದೆ. ಹಾಗೆ ಚಳಿಗಾಲದ ಕೆಮ್ಮು, ಜ್ವರ, ಶೀತದಂತಹ ಸಮಸ್ಯೆಗೆ ನಾವಿಂದು ಸುಲಭದ ಕಷಾಯ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಶುಂಠಿ ಕಷಾಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಶುಂಠಿ ಕಷಾಯ ಮಾಡಲು ಬೇಕಾಗುವ ಪದಾರ್ಥಗಳು
- ಶುಂಠಿ
- ಹಾಲು
- ಸಕ್ಕರೆ ಅಥವಾ ಬೆಲ್ಲ
- ಧನಿಯಾ
- ಕರಿಮೆಣಸು
- ಅರಿಶಿನ ಪುಡಿ
ಶುಂಠಿ ಕಷಾಯ ಮಾಡುವ ಸುಲಭದ ವಿಧಾನ ಇದು
ಮೊದಲು ಶುಂಠಿಯನ್ನು ತೊಳೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳು. ಹಾಗೆ ಮೊದಲು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಒಲೆ ಮೇಲೆ ಇಟ್ಟು ಕುದಿಬರಲು ಬಿಡಿ. ಸಣ್ಣದಾಗಿ ಬಿಸಿಯಾದಾಗ ಇದಕ್ಕೆ ಹಾಲು ಹಾಕಿಕೊಳ್ಳಿ. ಹಾಲು ಕುದಿಯಲು ಆರಂಭಿಸಿದಾಗ ಇದಕ್ಕೆ ಶುಂಠಿ, ಧನಿಯಾ ಬೀಜ, ಕರಿಮೆಣಸು, ಅರಶಿಣ ಹಾಕಿ.
ಇದೆಲ್ಲಾ ವಸ್ತುಗಳ ಹಾಕಿ ಸಣ್ಣ ಉರಿಯಲ್ಲಿ 2 ನಿಮಿಷ ಕುದಿಬರಲು ಬಿಡಿ. ನೀವು ಈ ಎಲ್ಲಾ ವಸ್ತುಗಳನ್ನು ಜಜ್ಜಿ ಪುಡಿ ಮಾಡಿಕೊಂಡು ಸಹ ಹಾಕಬಹುದು. ನೀವು ಹೀಟ್ ಬಾಡಿ ಆಗಿದ್ದರೆ ಜಜ್ಜಿಕೊಳ್ಳದೆ ಹಾಗೆಯೇ ಬಳಸಬಹುದು.
2 ನಿಮಿಷ ಕುದಿಸಿದ ಬಳಿಕ ಇದಕ್ಕೆ ಸಕ್ಕರೆ ಅಥವಾ ಬೆಲ್ಲ ಹಾಕಿಕೊಳ್ಳಿ. ಸಕ್ಕರೆಗಿಂತ ಬೆಲ್ಲ ಬಳಸುವುದು ಉತ್ತಮ. ಈಗ ಒಲೆ ಆಫ್ ಮಾಡಿಕೊಂಡು ಜರಡಿ ಹಿಡಿದು ಈ ಶುಂಠಿ ಕಷಾಯವನ್ನು ಬಸಿದುಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಶುಂಠಿ ಕಷಾಯ ಸಿದ್ದವಾಗುತ್ತದೆ. ಚಳಿಗಾಲದಲ್ಲಿ ಈ ಶುಂಠಿ ಕಷಾಯ ನಿಮ್ಮ ಆರೋಗ್ಯಕ್ಕೆ ಪುಷ್ಟಿ ನೀಡಲಿದೆ. ಹಾಗೆ ನಿಮ್ಮ ಹಲವು ಸಮಸ್ಯೆಗಳನ್ನು ಬಗೆಹರಿಸಲಿದೆ. ನೀವು ಸಹ ಮನೆಯಲ್ಲಿ ಈ ರೀತಿ ಮಾಡಿ ಸವಿದು ನೋಡಿ. ಇದನ್ನು ಮನೆಯ ಎಲ್ಲಾ ಸದಸ್ಯರು ಸಹ ಸವಿಯಬಹುದು. ಇದು ನಿಮ್ಮಲ್ಲಿನ ಕಾಲೋಚಿತ ಕೆಮ್ಮು, ನೆಗಡಿ, ಜ್ವರದಂತಹ ಸಮಸ್ಯೆಗಳ ನಿವಾರಣೆಗೆ ಉಪಕಾರಿಯಾಗಲಿದೆ.
ಇದನ್ನು ಮನೆಯಲ್ಲಿ ಸುಲಭವಾಗಿ ಮಾಡಿ ಸವಿಯಬಹುದು. ಮಕ್ಕಳಿಗೂ ಕೂಡ ನೀಡಬಹುದು. ಆದ್ರೆ ಕಾಳು ಮೆಣಸು ಕಡಿಮೆ ಹಾಕಿ ಮಕ್ಕಳಿಗೆ ಮಾಡಿ ನೀಡಿ. ಚಳಿಗಾಲದಲ್ಲಿ ಇದು ನಿಮ್ಮ ಆರೋಗ್ಯ ಸಂಜೀವಿನಿ ಆಗಿರಲಿದೆ.



Click it and Unblock the Notifications