Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲೇ ಶುಂಠಿ ಬೆಳ್ಳುಳ್ಳಿ ಪೇಸ್ಟ್ ರೆಡಿ ಮಾಡಿ..! ಈ 3 ವಸ್ತು ಇದ್ರೆ ಸಾಕು..!
ಅಡುಗೆ ಮಾಡಲು ಹತ್ತಾರು ಪದಾರ್ಥಗಳು ಬೇಕಾಗುತ್ತೆ, ಯಾವುದಾದ್ರು ಒಂದು ವಸ್ತು ಇಲ್ಲ ಅಂದ್ರು ಅಡುಗೆ ರುಚಿಯಾಗಲ್ಲ. ಇಲ್ಲವೆ ಅಡುಗೆಯೇ ಮಾಡಲು ಆಗುವುದಿಲ್ಲ. ಇಂತಹ ಹಲವು ಪದಾರ್ಥಗಳನ್ನು ಹೆಚ್ಚಾಗಿಯೇ ಇಟ್ಟುಕೊಂಡಿರುತ್ತೇವೆ. ಹಾಗೆ ಈ ವಸ್ತುಗಳು ಖಾಲಿಯಾಗುತ್ತಾ ಬಂದಂತೆ ನಾವು ಅಂಗಡಿಯಿಂದ ತಂದು ಮತ್ತೆ ಶೇಖರಿಸಿಡುತ್ತೇವೆ.
ಇನ್ನು ಕೆಲವೊಂದು ವಸ್ತುಗಳನ್ನು ನಾವು ಮನೆಯಲ್ಲೇ ಮಾಡಿಕೊಳ್ಳುತ್ತೇವೆ. ಖಾರದ ಪುಡಿ, ಪುಳಿಯೋಗರೆ ಪುಡಿ, ರಸಂ ಪುಡಿ, ಸಾಂಬಾರ್ ಪುಡಿ ಸೇರಿ ಕೆಲವು ಮಸಾಲೆಯನ್ನು ನಾವು ಮನೆಯಲ್ಲೇ ಮಾಡಿಕೊಳ್ಳುತ್ತೇವೆ. ಇಂತಹ ಮಸಾಲೆಗಳ ಪೈಕಿ ನಾವಿಂದು ಮನೆಯಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮಾಡುವುದನ್ನು ತಿಳಿದುಕೊಳ್ಳೋಣ.

ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಲವು ರೀತಿಯ ಖಾದ್ಯ ಮಾಡಲು ನಾವು ಬಳಸುತ್ತೇವೆ. ಯಾವಾಗಲು ಅಡುಗೆಗೆ ಶುಂಠಿ, ಬೆಳ್ಳುಳ್ಳಿಯ ಜೊತೆಗೆ ಇದರ ಪೇಸ್ಟ್ ಅನ್ನು ಕೂಡ ನಾವು ಬಳಸುತ್ತೇವೆ. ಆದ್ರೆ ಯಾವಾಗಲು ಅಂಗಡಿಯಿಂದ ತಂದಿರುವ ಪೇಸ್ಟ್ ಬಳಸುತ್ತೇವೆ. ಆದ್ರೆ ಒಂದೊಂದು ಕಂಪನಿಯ ಪೇಸ್ಟ್ ಒಂದೊಂದು ರೀತಿಯ ರುಚಿ ಹೊಂದಿರುತ್ತದೆ. ಹಾಗೆ ಈ ವಸ್ತು ದುಬಾರಿಯೂ ಹೌದು.
ಹಾಗಾದ್ರೆ ನಾವಿಂದು ಮನೆಯಲ್ಲೇ ಈ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮಾಡುವುದನ್ನು ತಿಳಿದುಕೊಳ್ಳೋಣ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಬೇಕು? ಎಷ್ಟು ದಿನ ಇಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮಾಡಲು ಬೇಕಾಗುವ ಪದಾರ್ಥಗಳು
- ಬೆಳ್ಳುಳ್ಳಿ -1 ಕಪ್
- ಶುಂಠಿ - ಅರ್ಧ ಕಪ್
- ನಿಂಬೆ ಹಣ್ಣು - 5
- ಉಪ್ಪು
ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮಾಡುವುದು ಹೇಗೆ?
ಮೊದಲು ಶುಂಠಿಯ ಪೀಸ್ ಅನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆಯನ್ನು ನಿಧಾನಕ್ಕೆ ತೆಗೆದುಕೊಳ್ಳಿ. ಹಾಗೆ ಬೆಳ್ಳುಳ್ಳಿಯನ್ನು ತೆಗದುಕೊಂಡು ಬೆಳ್ಳುಳ್ಳಿಯ ಸಿಪ್ಪೆಯನ್ನು ಕೂಡ ಬಿಸಿಕೊಂಡು ಸಿದ್ಧ ಮಾಡಿಕೊಳ್ಳಿ.
ಸಿಪ್ಪೆ ಬಿಡಿಸಿದ ಬೆಳ್ಳುಳ್ಳಿಯನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ನೀರು ಹಾಕಿ ತೊಳೆದುಕೊಳ್ಳಿ. ಅನಂತರ ಒಂದು ಕಾಟನ್ ಬಟ್ಟೆ ತೆಗೆದುಕೊಂಡು ಬೆಳ್ಳುಳ್ಳಿಯನ್ನು ಹಾಕಿ ನೀರಿನ ಅಂಶ ಇರದಂತೆ ಒರೆಸಿಕೊಳ್ಳಬೇಕು. ಈಗ ತೊಳೆದುಕೊಂಡಿರುವ ಶುಂಠಿಯನ್ನು ಹೆಚ್ಚಿಕೊಳ್ಳಬೇಕು, ಸಣ್ಣದಾಗಿ ಹೆಚ್ಚಿಕೊಂಡಷ್ಟು ಒಳ್ಳೆಯದು. ನಂತರ ಇದನ್ನು ಒಂದು ಬೌಲ್‌ಗೆ ಹಾನಿ ನೀರು ಹಾಕಿ ತೊಳೆದುಕೊಳ್ಳಬೇಕು. ಅನಂತರ ಬೆಳ್ಳುಳ್ಳಿಯಂತೆ ಕಾಟನ್ ಬಟ್ಟೆಯಲ್ಲಿ ಒರೆಸಿ ಇಟ್ಟುಕೊಳ್ಳಿ.
ಈಗ 5 ನಿಂಬೆ ಹಣ್ಣನ್ನು ತೆಗೆದುಕೊಂಡು ಕತ್ತರಿಸಿಕೊಂಡು ಅದರ ರಸವನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ಹಾಕಿಕೊಳ್ಳಿ, ಹಾಗೆ ಬೆಳ್ಳುಳ್ಳಿ, ನಿಂಬೆ ಹಣ್ಣಿನ ರಸ, ಸ್ವಲ್ಪ ಉಪ್ಪು, ಹಾಕಿಕೊಂಡು ರುಬ್ಬಿಕೊಳ್ಳಬೇಕು. ಎಷ್ಟು ನುಣ್ಣಗೆ ಸಾಧ್ಯವೋ ಅಷ್ಟು ನುಣ್ಣಗೆ ರುಬ್ಬಬೇಕು.
ನೀರು ಬಳಸದೆ ರುಬ್ಬಬೇಕು. ನಂತರ ಮಿಕ್ಸಿಯಿಂದ ತೆಗೆದು ಅದನ್ನು ಒಂದು ಬೌಲ್‌ಗೆ ಹಾಕಿಕೊಳ್ಳಿ. ನಂತರ ಗಾಜಿನ ಡಬ್ಬಿ ಅಥವಾ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿ ಗಾಳಿ ಆಡದಂತೆ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ ಇಟ್ಟುಕೊಳ್ಳಿ. ಫ್ರಿಡ್ಜ್‌ನಲ್ಲಿ ಇಟ್ಟರೆ 1 ವರ್ಷ ಇಟ್ಟು ಸವಿಯಬಹುದು. ಎಲ್ಲಾ ಅಡುಗೆಗೂ ಇದನ್ನು ಬಳಸಬಹುದು. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications