Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸಡನ್ ತಿಂಡಿಗೆ ತುಪ್ಪದ ಪೊಡಿ ಇಡ್ಲಿ ಮಾಡಿ! ಬಾಯಲ್ಲಿಟರೆ ಕರಗುವ ರುಚಿ.. ಎಷ್ಟು ಸುಲಭ ಗೊತ್ತಾ?
ಅನೇಕ ಮಹಿಳೆಯರಿಗೆ ಪ್ರತಿದಿನ ಬೆಳಗ್ಗೆ ತಿಂಡಿಗೆ ಬೇರೆ ಬೇರೆ ಬಗೆಯ ಅಡುಗೆ ಮಾಡಬೇಕು ಎಂಬ ಹಂಬಲ. ಅದರಂತೆ, ಯಾವಾಗಲೂ ಹೊಸ ರೆಸಿಪಿಗಳನ್ನು ಹುಡುಕುವುದು ಸಾಮಾನ್ಯ. ಅಂತಹವರು ಈ ಸಿಂಪಲ್ ರೆಸಿಪಿ ಮನೆಯಲ್ಲಿ ಟ್ರೈ ಮಾಡಿ ನೋಡಿ. ಹೌದು, ಮನೆಮನೆಗೆ ಗೊತ್ತಿರುವ ರವೆ ಇಡ್ಲಿಗೆ ಹೋಲಿಕೆಯಾಗದ ಒಂದು ಅದ್ಭುತ ಡಿಶ್ ಎಂದರೆ ತುಪ್ಪದ ಪೋಡಿ ಇಡ್ಲಿ (Ghee Podi Idli). ಇಡ್ಲಿಗೆ ಮಸಾಲೆಯ ಸ್ಪರ್ಶ ಬಂದಾಗ, ಅದರ ರುಚಿ ಒಂದಿಷ್ಟು ಹೆಚ್ಚು ಜಾಸ್ತಿ ಆಗುತ್ತೆ. ಮಸಾಲೆ ಜೊತೆ ತುಪ್ಪದಲ್ಲಿ ಕರಿಯಲ್ಪಟ್ಟ ಇಡ್ಲಿಯ ರುಚಿ, ಹತ್ತಿರದ ಹೋಟೆಲ್‌ನಲ್ಲೂ ಸಿಗೋದು ಅಸಾಧ್ಯ.
ತುಪ್ಪದ ಪೊಡಿ ಇಡ್ಲಿ ದಕ್ಷಿಣ ಭಾರತದ ವಿಶೇಷ ಖಾದ್ಯವಾಗಿದೆ. ಇದನ್ನು ಆರೋಗ್ಯಕರ ಬೆಳಗಿನ ಉಪಹಾರ ಅಥವಾ ಸಂಜೆಯ ತಿಂಡಿಯಾಗಿ ಸವಿಯಬಹುದು. ಈ ರುಚಿಕರವಾದ ತಿಂಡಿಯನ್ನು 15 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ತಯಾರಿಸಬಹುದು. ಇಡ್ಲಿಯನ್ನು ಪೊಡಿ ಮಸಾಲೆ ಜೊತೆಗೆ ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಕಡಿಮೆ ಸಮಯದಲ್ಲಿ, ಚುಟುಕು ಪದಾರ್ಥಗಳಲ್ಲಿಯೇ ಬಾಯಲ್ಲಿಟರೆ ಕರಗುವ ಈ ತುಪ್ಪದ ಇಡ್ಲಿ ರೆಡಿ ಆಗುತ್ತೆ. ಇದನ್ನು ಮನೆಯಲ್ಲೇ ಸುಲಭವಾಗಿ ಮಾಡೋದು (Ghee Podi Idli Recipe) ಹೇಗೆ ಅಂತ ಗೊತ್ತಾ? ಇಲ್ಲಿದೆ ವಿಧಾನ.

ತುಪ್ಪದ ಪೊಡಿ ಇಡ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಇಡ್ಲಿಗಳು - 10 (ಹಬೆಯಲ್ಲಿ ಬೇಯಿಸಿದ್ದು)
• ತುಪ್ಪ - 2 ಅಥವಾ 3 ಚಮಚ
• ಕಡಲೆಕಾಯಿ - 2 ಚಮಚ
• ಕಡಲೆಬೇಳೆ - 1 ಚಮಚ
• ಉದ್ದಿನಬೇಳೆ - 1 ಚಮಚ
• ಒಣ ಕೆಂಪು ಮೆಣಸಿನಕಾಯಿ - 3
• ಎಳ್ಳು - 1 ಚಮಚ
• ಜೀರಿಗೆ - 1/2 ಚಮಚ
• ಹುಣಸೆಹಣ್ಣು - 1/4 ಚಮಚ
• ಬೆಲ್ಲ - 2 ಚಿಟಿಕೆ
• ಉಪ್ಪು - 1/4 ಚಮಚ
• ಕರಿಬೇವಿನ ಎಲೆಗಳು - ಸ್ವಲ್ಪ
• ಸಾಸಿವೆ ಕಾಳು - 1 ಚಿಟಿಕೆ

ತುಪ್ಪದ ಪೊಡಿ ಇಡ್ಲಿ ತಯಾರಿಸುವ ವಿಧಾನ
ಮೊದಲನೆಯದಾಗಿ, ಕಡಲೆಕಾಯಿ, ಬೇಳೆಕಾಳುಗಳು ಮತ್ತು ಮಸಾಲೆಗಳನ್ನು ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಬಳಿಕ ಹುರಿದ ಪದಾರ್ಥಗಳನ್ನು ನಯವಾದ ಪುಡಿಯಾಗಿ ರುಬ್ಬಿಕೊಳ್ಳಿ. ಇದಾದ ನಂತರ, ಈಗಾಗಲೇ ಬೇಯಿಸಿದ ಇಡ್ಲಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
ಇದಾದ ಬಳಿಕ ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಇದಕ್ಕೆ ಸಾಸಿವೆ ಕಾಳುಗಳನ್ನು ಹಾಕಿ. ನಂತರ, ಇಡ್ಲಿ ತುಂಡುಗಳನ್ನು ಸೇರಿಸಿ, ಗರಿಗರಿಯಾಗುವವರೆಗೆ ಹುರಿಯಿರಿ. ಕೊನೆಯದಾಗಿ, ಇಡ್ಲಿ ತುಂಡುಗಳಿಗೆ ಪೊಡಿ ಮಿಶ್ರಣವನ್ನು ಬೆರೆಸಿ. ಕರಿಬೇವಿನ ಎಲೆಗಳಿಂದ ಅಲಂಕರಿಸಿ, ಬಿಸಿಯಾಗಿ ಸವಿಯಿರಿ.

ಈ ರೀತಿಯೂ ಮಾಡಬಹುದು
ಮೊದಲು ಇಡ್ಲಿಗಳನ್ನು ಮಧ್ಯದಲ್ಲಿ ಕತ್ತರಿಸಿ. ಒಂದು ಇಡ್ಲಿಯಿಂದ 4 ತುಂಡುಗಳು ಆಗುವಂತೆ. ನಂತರ ಒಂದು ಜಾಡಿಯಲ್ಲಿ ತುಪ್ಪ ಮತ್ತು ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಜೀರಿಗೆ, ಕಾಳು ಮೆಣಸು ಹಾಕಿ. ಈಗ ಸ್ವಲ್ಪ ಉಪ್ಪು ಮತ್ತು ಪೋಡಿ ಮಸಾಲೆ ಹಾಕಿ. ತುಪ್ಪದಲ್ಲಿ ಚೆನ್ನಾಗಿ ಮಿಕ್ಸ್ ಆಗುವಂತೆ ನೋಡಿಕೊಳ್ಳಿ. ಈಗ ಕತ್ತರಿಸಿದ ಇಡ್ಲಿ ತುಂಡುಗಳನ್ನು ಹಾಕಿ. ಮಸಾಲೆ ಇಡ್ಲಿಗೆ ಚೆನ್ನಾಗಿ ಬೆರೆಯುವಂತೆ ಮಿಕ್ಸ್ ಮಾಡಿ. 5 ನಿಮಿಷ ಆಂಚಿನಲ್ಲಿ ಬಿಟ್ಟು ಬೇಯಿಸಿ, ಎಲ್ಲಾ ಇಡ್ಲಿಗೆ ಪುಡಿ ತೇವ ಬಂದರೆ ಗ್ಯಾಸ ಆಫ್ ಮಾಡಿ. ಮೇಲಿಂದ ಮತ್ತೊಂದು ಚಿಟಿಕೆ ತುಪ್ಪ ಹಾಕಿದ್ರೆ, ಸ್ವಾದ ಎರಡರಷ್ಟು.
ಈ ತುಪ್ಪದ ಪೋಡಿ ಇಡ್ಲಿ ಟಿಫನ್ ಬಾಕ್ಸಿಗೆ ಪರ್ಫೆಕ್ಟ್, ಟೀ ಟೈಂ ಸ್ನ್ಯಾಕ್ ಆಗಿರಬಹುದು, ಇಲ್ಲವೆ ಸಂಜೆಗೂ ಬಾಯಲ್ಲಿ ನೀರೂರಿಸುವ ರೆಸಿಪಿ. ಎಷ್ಟೋ ಮಂದಿ ಹೋಟೆಲ್‌ನಲ್ಲಿ ಮಾತ್ರ ತಿಂದಿದ್ದೀರಿ. ಈಗ ಮನೆಯಲ್ಲೇ ಮಾಡಿ ನೋಡಿ. ಬಾಯಲ್ಲಿ ಕರಗುವ ಈ ಇಡ್ಲಿ ನಿಮಗಿಷ್ಟವಾದರೆ, ಬೇರೆಯವರಿಗೂ ತಿಳಿಸಿ. ಈ ಇಡ್ಲಿ ಯಾವುದೇ ಸಮಯದಲ್ಲಿ ಹಸಿವನ್ನು ನೀಗಿಸಲು ಉತ್ತಮ ಆಯ್ಕೆಯಾಗಿದೆ.



Click it and Unblock the Notifications