Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮೂರು ವಸ್ತು ಇದ್ದರೆ 5 ನಿಮಿಷದಲ್ಲಿ ಬೆಳ್ಳುಳ್ಳಿ ರೈಸ್ ರೆಡಿ..!
ಬೆಳಗ್ಗೆ ಎದ್ದು ಇವತ್ತಿನ ತಿಂಡಿಗೆ ಏನು ಮಾಡಬೇಕು ಎಂದು ಯೋಚಿಸುವ ಒಳಗೆ ಸಮಯ ಕಳೆಯುತ್ತದೆ. ಹೀಗಾಗಿ ನಿತ್ಯ ಮಹಿಳೆಯರು ಹಿಂದಿನ ದಿನ ರಾತ್ರಿಯೇ ನಾಳೆ ಯಾವ ತಿಂಡಿ ಮಾಡಬೇಕು ಎಂಬುದನ್ನು ನಿರ್ಧರಿಸಿರುತ್ತಾರೆ. ಅದಕ್ಕೆ ಬೇಕಾದ ಸಿದ್ಧತೆಯೂ ನಡೆದಿರುತ್ತದೆ. ಆದ್ರೆ ಬೆಳಗ್ಗೆ ಎದ್ದಾಗ ನೀವು ಅಂದುಕೊಂಡಿರುವ ತಿಂಡಿ ಮಾಡಲು ಆಗದಿದ್ದರೆ ನೀವು ಏನು ಮಾಡುತ್ತೀರಿ.
ಹೌದು ರೀತಿ ಹಲವು ಬಾರಿ ನಿಮಗೂ ಆಗಿರಬಹುದು. ಕೆಲವೊಮ್ಮೆ ನಿಮ್ಮ ತಯಾರಿಯಲ್ಲ ಹಾಳಾಗಬಹುದು. ಆದ್ರೆ ತಿಂಡಿ ಮಾಡುವುದನ್ನು ನಿಲ್ಲಿಸಲು ಆಗಲ್ಲ. ಹಾಗಾದ್ರೆ ಗಡಿಬಿಡಿಯಲ್ಲಿ ಯಾವ ತಿಂಡಿ ಮಾಡುವುದು. ಯಾವ ತಿಂಡಿ ಮಾಡಬಹುದು? ಹೆಚ್ಚೆಂದರೆ ಗಡಿಬಿಡಿಯಲ್ಲಿ ನೀವು ಚಿತ್ರಾನ್ನ ಮಾಡಬಹುದು. ಆದ್ರೆ ನಾವಿಂದು ಗಡಿಬಿಡಿಗೆ ಚಿತ್ರಾನ್ನಕ್ಕಿಂತ ಅದ್ಭುತ ರುಚಿಯ ಸುಲಭ ರೆಸಿಪಿ ಹೇಳುತ್ತೇವೆ ನೋಡಿ.

ಹೌದು ಬೆಳಗ್ಗೆಯ ತಿಂಡಿಗೆ ನೀವು ಬೆಳ್ಳುಳ್ಳಿ ರೈಸ್ ಮಾಡಿ. ಕೆಲವು ದಿನಗಳ ಹಿಂದೆ ಬೆಳ್ಳುಳ್ಳಿ ಕಬಾಬ್ ರಾಜ್ಯದಲ್ಲಿ ಫೇಮಸ್ ಆಗಿತ್ತು, ಆದ್ರೆ ಇದು ಬೆಳ್ಳುಳ್ಳಿ ರೈಸ್. ಇದನ್ನು ಮಾಡೋದು ಚಿತ್ರಾನ್ನಕ್ಕಿಂತಲೂ ಸುಲಭ, ಹಾಗೆ ಚಿತ್ರಾನ್ನಕ್ಕಿಂತಲೂ ರುಚಿ ಹೆಚ್ಚು.
ಹಾಗಾದ್ರೆ ಈ ಬೆಳ್ಳುಳ್ಳಿ ರೈಸ್ ಮಾಡುವುದು ಹೇಗೆ? ಬೆಳ್ಳುಳ್ಳಿ ರೈಸ್ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ಸರಿಯಾದ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಈ ಲೇಖನದ ಮೂಲಕ ನಾವು ತಿಳಿದುಕೊಳ್ಳೋಣ.
ಬೆಳ್ಳುಳ್ಳಿ ರೈಸ್ ಮಾಡಲು ಬೇಕಾಗುವ ವಸ್ತುಗಳು
- ಅನ್ನ - ಅರ್ಧ ಬೌಲ್
- ಮೆಣಸಿನಕಾಯಿ -3
- ಸಾಸಿವೆ- 1 ಚಮಚ
- ಜೀರಿಗೆ- 1 ಚಮಚ
- ಬೆಳ್ಳುಳ್ಳಿ- 1 ದೊಡ್ಡದು
- ಅರಶಿಣ ಪುಡಿ- 1 ಚಮಚ
- ಕರಿಬೇವು
- ಎಣ್ಣೆ
- ತುಪ್ಪ
- ಉಪ್ಪು
ಬೆಳ್ಳುಳ್ಳಿ ರೈಸ್ ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಇಲ್ಲವೆ ತುಪ್ಪ ಹಾಕಿ. ಅದಕ್ಕೆ ಸಾಸಿವೆ ಹಾಕಿ, ಬಳಿಕ ಬೆಳ್ಳಿಯನ್ನು ಗುದ್ದಿಕೊಂಡು ಹಾಕಿ. ಜೊತೆಗೆ ಒಣ ಮೆಣಸು ಹಾಕಿ ಇದೆಲ್ಲಾ ಹಾಕಿ ಸ್ವಲ್ಪ ಸಮಯ ಫ್ರೈ ಮಾಡಿ.
ಬಳಿಕ ಇದಕ್ಕೆ ಖಾರ ಜಾಸ್ತಿ ಬೇಕಿದ್ದರೆ ಮೆಣಸಿನ ಪುಡಿ ಬೇಕಾದರೆ ಸ್ವಲ್ಪ ಹಾಕಿ. ಇದಕ್ಕೆ ಅರಶಿಣ ಪುಡಿ ಸಹ ಹಾಕಿಕೊಳ್ಳಿ. ಬಳಿಕ ಹುಡಿ ಹುಡಿಯಾದ ಅನ್ನವನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಅನ್ನ ಹಾಕಿದ ಮೇಲೆ ಸಣ್ಣ ಉರಿಯಲ್ಲಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಬೆಳ್ಳುಳ್ಳಿ ರೈಸ್ ರೆಡಿಯಾಗುತ್ತದೆ. ಮೂರ್ನಾಲ್ಕು ವಸ್ತು ಬಳಸಿ ಈ ರೈಸ್ ಮಾಡಬಹುದು.
ಇದನ್ನು ಬೆಳಗ್ಗೆ ತಿಂಡಿಗೆ ಸಂಜೆ ಊಟಕ್ಕೂ ಮಾಡಬಹುದು ಅಷ್ಟೇ ಏಕೆ ಮಧ್ಯಾಹ್ನದ ಬಾಕ್ಸ್ಗೂ ಈ ರೈಸ್ ಸವಿಯಬಹುದು. ಬೆಳಗ್ಗೆ ಗಡಿಬಿಡಿಯಲ್ಲಿ ತಿಂಡಿ ಮಾಡಲು ಮುಂದಾಗುವುದಾದರೆ ಇದು ಒಳ್ಳೆಯ ಆಯ್ಕೆ, ಚಿತ್ರಾನ್ನ, ಪುಳಿಯೋಗರೆಗಿಂತಲೂ ರುಚಿ ಹೆಚ್ಚು ಜೊತೆಗೆ ಮಾಡೋದು ಸಹ ತುಂಬಾನೆ ಸುಲಭ.
ಈ ಬೆಳ್ಳುಳ್ಳಿ ರೈಸ್ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಅದರಲ್ಲು ಜ್ವರ, ಶೀತ, ಕೆಮ್ಮು ಇದಕ್ಕೆಲ್ಲ ಬೆಳ್ಳುಳ್ಳಿ ಒಂತರ ಮನೆ ಮದ್ದು, ಹೀಗಾಗಿ ಆರೋಗ್ಯದ ದೃಷ್ಟಿಯಿಂದಲೂ ಈ ತಿಂಡಿ ಬಹಳ ಒಳ್ಳೆಯದು. ಮನೆ ಮಂದಿಯಲ್ಲ ಕುಳಿತು ಈ ರೈಸ್ ಸವಿಯಬಹುದು. ಮಕ್ಕಳಿಗೂ ಇದರ ರುಚಿ ಇಷ್ಟವಾಗಲಿದೆ.
ಹಾಗಾದ್ರೆ ನೀವು ಸಹ ಈ ರೈಸ್ ಮಾಡಿ ನೋಡಿ. ಜೊತೆಗೆ ಅಡುಗೆ ಮನೆಯಲ್ಲಿ ಕಳೆಯುವ ಒಂದಿಷ್ಟು ಸಮಯ ಉಳಿಸಿ.



Click it and Unblock the Notifications