Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅದ್ಭುತ ರುಚಿಯ ಬೆಳ್ಳುಳ್ಳಿ ಚಿತ್ರಾನ್ನ ಮಾಡಿ ನೋಡಿ..! ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ!!
ನೀವು ಬ್ರೇಕ್ ಫಾಸ್ಟ್‌ಗೆ ಚಿತ್ರಾನ್ನ ಮಾಡುವುದು ಸಾಮಾನ್ಯವಾಗಿ ನೋಡಿರುತ್ತೀರಿ, ಕೆಲವರಿಗೆ ಚಿತ್ರಾನ್ನ ಎಂದರೆ ಇಷ್ಟವಾದರೆ ಮತ್ತೆ ಕೆಲವರಿಗೆ ಚಿತ್ರಾನ್ನ ಅಂದ್ರೆ ಮೂಗು ಮುರಿಯುವುದು ನೋಡಬಹುದು. ಆದ್ರೆ ನಾವು ಚಿತ್ರಾನ್ನದಲ್ಲಿ ಹಲವು ಬಗೆಯ ರುಚಿ ಮಾಡಬಹುದು. ಒಂದೊಂದು ಚಿತ್ರಾನ್ನವು ಒಂದೊಂದು ರೀತಿಯ ವಿಶೇಷ ರುಚಿಯನ್ನು ನೀಡಲಿದೆ. ಹಾಗೆ ರುಚಿಯಲ್ಲೂ ಒಂದೊಂದು ಬಗೆ ಕೆಲವರ ಫೇವರಿಟ್ ಆಗಿರುತ್ತೆ.
ಸಾಮಾನ್ಯವಾಗಿ ನಿಂಬೆ ಹುಳಿ ಹಾಕಿ ಮಾಡುವಂತಹ ಚಿತ್ರಾನ್ನ ಎಲ್ಲರ ಮನೆಯ ಸಾಮಾನ್ಯ ಅಡುಗೆಯಾಗಿರುತ್ತೆ. ಹಿಂದಿನ ದಿನ ಅನ್ನ ಉಳಿದರೆ, ಇಲ್ಲವೆ ಬೆಳಗ್ಗೆ ಗಡಿಬಿಡಿಯಾದರೆ, ಸಮಯ ಕಡಿಮೆ ಇದ್ದಾಗ, ಮಧ್ಯಾಹ್ನದ ಬಾಕ್ಸ್‌ಗೂ ನೀವು ಏನಾದರು ಮಾಡಬೇಕಿರುವ ಸಂದರ್ಬ ಇದ್ದರೆ ನೀವು ಚಿತ್ರಾನ್ನ ಮಾಡಲು ಮುಂದಾಗುತ್ತೀರಿ.

ಆದ್ರೆ ನಾವಿಂದು ವಿಭಿನ್ನ ಚಿತ್ರಾನ್ನ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಅದರಲ್ಲೂ ಬೆಳ್ಳುಳ್ಳಿ ಚಿತ್ರಾನ್ನ ಕುರಿತು ತಿಳಿಯೋಣ. ಯಾವುದೇ ಅಡುಗೆಯಲ್ಲಿ ಬೆಳ್ಳುಳ್ಳಿ ಹೆಚ್ಚಿದ್ದರೆ ಆ ರುಚಿ ದುಪ್ಪಟ್ಟಾಗುತ್ತದೆ. ಹೀಗಾಗಿ ನಾವಿಂದು ಈ ಬೆಳ್ಳುಳ್ಳಿಯನ್ನು ಹಾಕಿ ಮಾಡುವಂತಹ ಈ ವಿಶೇಷ ಚಿತ್ರಾನ್ನವನ್ನು ಮಾಡವ ಕುರಿತು ತಿಳಿದುಕೊಳ್ಳೋಣ.
ಬೆಳ್ಳುಳ್ಳಿ ಚಿತ್ರಾನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಿದೆ, ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಳ್ಳುಳ್ಳಿ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳ
- ಎಣ್ಣೆ - 3 ಟೀಸ್ಪೂನ್
- ಅನ್ನ
- ಕಡಲೆಕಾಯಿ - 1 ಕಪ್
- ಸಾಸಿವೆ
- ಜೀರಿಗೆ
- ಕಡಲೆ ಬೇಳೆ
- ಉದ್ದಿನಬೇಳೆ - 1 tbs
- ಹಸಿರು ಮೆಣಸಿನಕಾಯಿ - 6
- ಶುಂಠಿ
- ಬೆಳ್ಳುಳ್ಳಿ
- ಕರಿಬೇವಿನ ಎಲೆಗಳು
- ಈರುಳ್ಳಿ - 2
- ಕ್ಯಾಪ್ಸಿಕಂ - 1
- ಅರಿಶಿನ ಪುಡಿ
- ರುಚಿಗೆ ಉಪ್ಪು
- ನಿಂಬೆ ರಸ
- ಕೊತ್ತಂಬರಿ ಸೊಪ್ಪು
ಬೆಳ್ಳುಳ್ಳಿ ಚಿತ್ರಾನ್ನ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಹಾಕಿ ಕಡಲೆ ಬೀಜ ಹುರಿದುಕೊಳ್ಳಿ. ಬಣ್ಣ ಬದಲಾದಾಗ ಕಡಲೆಯನ್ನು ತೆಗೆದಿಟ್ಟುಕೊಳ್ಳಿ. ಈಗ ಅದೇ ಎಣ್ಣೆಗೆ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿಕೊಂಡು ಫ್ರೈ ಮಾಡಿ. ಅನಂತರ ಇದಕ್ಕೆ ಹಸಿ ಮೆಣಸು, ಶುಂಠಿ, ಹಾಗೂ ಬೆಳ್ಳುಳ್ಳಿ ಹಾಕಿಕೊಳ್ಳಿ. ಬೆಳ್ಳುಳ್ಳಿ ಸಂಖ್ಯೆ ಹೆಚ್ಚಾಗಿರಲಿ. ಹಾಗೆ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ, ಕರಿಬೇವುವನ್ನು ಕೂಡ ಹಾಕಿಕೊಳ್ಳಿ.
2 ನಿಮಿಷ ಫ್ರೈ ಮಾಡಕೊಂಡ ಬಳಿಕ ಕ್ಯಾಪ್ಸಿಕಂ ಹಾಕಿ ಮಿಕ್ಸ್ ಮಾಡಿ. ಹಾಗೆ ಇದಕ್ಕೆ ಅರಶಿಣ, ಉಪ್ಪು ಹಾಕಿ ಮತ್ತೊಂದು ನಿಮಿಷ ಫ್ರೈ ಮಾಡಿ. ಈ ವೇಳೆ ಎಣ್ಣೆ ಕಡಿಮೆಯಾಗಿದೆ ಎನಿಸಿದರೆ ಮತ್ತೆ ಹಾಕಿ ಬಿಸಿ ಮಾಡಿ. ಈಗ ಒಲೆ ಆಫ್ ಮಾಡಿಕೊಂಡರೆ ಚಿತ್ರಾನ್ನ ಗೊಜ್ಜು ರೆಡಿಯಾಗಿರುತ್ತದೆ. ಈಗ ನೀವು ಒಂದು ಬೌಲ್‌ನಲ್ಲಿ ಅನ್ನ ತಗೆದುಕೊಳ್ಳಿ.
ಅನಂತರ ಅನ್ನಕ್ಕೆ ಸ್ವಲ್ಪ ಸ್ವಲ್ಪವೇ ಈ ಗೊಜ್ಜು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಅನ್ನ ಮಿಕ್ಸ್ ಆಗುವಂತೆ ನೋಡಿಕೊಳ್ಳಿ. ಅಂತಿಮವಾಗಿ ಇದಕ್ಕೆ ನಿಂಬೆ ಹುಳಿ, ಹುರಿದ ಕಡಲೆ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಚಿತ್ರಾನ್ನ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications