Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಾಂಬಾರ್ ಪುಡಿ ಬಳಸಿ ಈ ಬೆಳ್ಳುಳ್ಳಿ ಗೊಜ್ಜು ಮಾಡಿ.! ಅನ್ನ, ತಿಂಡಿಯ ಜೊತೆಗೆ ಅದ್ಭುತ ರುಚಿ!
ಊಟ ಹಾಗೆ ತಿಂಡಿಯ ಜೊತೆಗೆ ಮಸಾಲೆ ಭರಿತ ಯಾವುದಾದರು ಗೊಜ್ಜು ಅಥವಾ ಪಲ್ಯ ಇದ್ದರೆ ಅದರ ರುಚಿಗೆ ನೀವು ಮತ್ತಷ್ಟು ಊಟ, ತಿಂಡಿ ಸವಿಯುತ್ತೀರಿ. ಮಸಾಲೆ ಪದಾರ್ಥಗಳು ಸರಿಯಾಗಿ ಹಾಕಿ ಮಾಡುವ ಚಟ್ನಿ, ಗೊಜ್ಜು ಅಂದರೆ ಎಲ್ಲರಿಗೂ ಪ್ರಿಯವಾಗಿರುತ್ತೆ. ನೀವು ಕೂಡ ಹಲವು ಬಗೆಯ ಗೊಜ್ಜುಗಳ ಸವಿದಿರುತ್ತೀರಿ, ಅದರಲ್ಲೂ ಟಮೆಟೋ ಗೊಜ್ಜು, ಈರುಳ್ಳಿ ಗೊಜ್ಜಿನಂತಹ ಬಾಯಲ್ಲಿ ನೀರು ತರಿಸುವ ಅಡುಗೆ ಮಾಡಿ ಸವಿದಿರುತ್ತೀರಿ.
ಆದ್ರೆ ಇಂದು ನಾವು ಬೆಳ್ಳುಳ್ಳಿ ಬಳಸಿ ಖಾರ ಖಾರವಾಗಿ ಮಾಡುವಂತಹ ರುಚಿಕರವಾದ ಗೊಜ್ಜಿನ ಕುರಿತಂತೆ ತಿಳಿದುಕೊಳ್ಳೋಣ. ಈ ಬೆಳ್ಳುಳ್ಳಿಯ ಹಾಕಿ ಮಾಡುವಂತಹ ಅದ್ಭುತ ರುಚಿ ನೀಡುವ ಗೊಜ್ಜನ್ನು ನೀವು ಊಟ, ತಿಂಡಿಯ ಜೊತೆಗೆ ಸವಿಯಲು ನೀಡಬಹುದು. ಹಾಗೆ ಒಂದಿಷ್ಟು ದಿನಗಳ ಕಾಲ ಇದನ್ನು ಇಟ್ಟು ಕೂಡ ನಿಮಗೆ ಬೇಕಾದಾಗ ಸವಿಯಬಹುದು.

ಬೆಳ್ಳುಳ್ಳಿಯಲ್ಲಿನ ಆರೋಗ್ಯಕರ ಅಂಶ ಹಾಗೆ ಇದನ್ನು ಸುಲಭವಾಗಿ ಮಾಡಬಹುದಾಗಿರೋದ್ರಿಂದ ನಿಮ್ಮ ಕೆಲಸವು ಕಡಿಮೆಯಾಗುತ್ತೆ, ಬಾಯಿಗೆ ರುಚಿಯೂ ಸಿಗುತ್ತೆ. ಹಾಗಾದ್ರೆ ಈ ಬೆಳ್ಳುಳ್ಳಿ ಗೊಜ್ಜು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ರೆಸಿಪಿ ಮೂಲಕ ತಿಳಿದುಕೊಳ್ಳೋಣ.
ಬೆಳ್ಳುಳ್ಳಿ ಗೊಜ್ಜು ಮಾಡಲು ಬೇಕಾಗುವ ವಸ್ತುಗಳು
- ಬೆಳ್ಳುಳ್ಳಿ- 3 ಗಡ್ಡೆ
- ಈರುಳ್ಳಿ
- ಟೊಮೆಟೋ
- ಸಾಸಿವೆ
- ಇಂಗು
- ಜೀರಿಗೆ
- ಮೆಂತ್ಯ
- ಖಾರದ ಪುಡಿ
- ಅರಶಿಣ ಪುಡಿ
- ಸಾಂಬಾರ್ ಪುಡಿ
- ಧನಿಯಾ ಪುಡಿ
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಕರಿಬೇವು
- ಹುಣಸೆ ಹುಳಿ
- ಉಪ್ಪು
- ಎಣ್ಣೆ
ಬೆಳ್ಳುಳ್ಳಿ ಗೊಜ್ಜು ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಳ್ಳಿ. ಈ ಗೊಜ್ಜು ಮಾಡಲು ಎಣ್ಣೆ ಸ್ವಲ್ಪ ಹೆಚ್ಚಾಗಿಯೇ ಬಳಸಿಕೊಳ್ಳಿ. 5 ಸ್ಪೂನ್ ಎಣ್ಣೆ ಹಾಕಿ ಬಳಿಕ ಬಿಸಿಯಾದಾಗ ಇದಕ್ಕೆ ಸಾಸಿವೆ, ಇಂಗು, ಜೀರಿಗೆ, ಮೆಂತ್ಯ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ನಂತರ ಹಸಿ ಮೆಣಸು, ಕರಿಬೇವು, ಬೆಳ್ಳುಳ್ಳಿ ಮೂರು ಗಡ್ಡೆಯನ್ನು ಜಜ್ಜಿಕೊಂಡು 2 ನಿಮಿಷ ಫ್ರೈ ಮಾಡಿ.
ಈಗ ಎರಡು ಈರುಳ್ಳಿ, ಟೊಮೆಟೋ ಹಾಕಿಕೊಂಡು ಮತ್ತೆ 2 ನಿಮಿಷ ಫ್ರೈ ಮಾಡಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈಗ ಖಾರದ ಪುಡಿ, ಸಾಂಬಾರ್ ಪುಡಿ ಒಂದೊಂದು ಸ್ಪೂನ್ ಹಾಕಿಕೊಳ್ಳಿ, ಹಾಗೆ ಧನಿಯಾ ಪುಡಿ, ಅರಶಿಣ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಒಂದು ನಿಂಬೆ ಗಾತ್ರದ ಹುಣಸೆ ಹುಳಿಯನ್ನು ನೆನೆಸಿಟ್ಟು ಅದರ ರಸವನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಮುಚ್ಚಳ ಮುಚ್ಚಿ 15 ನಿಮಿಷ ಕಾಯಲು ಬಿಡಬೇಕು. ಆಗಾಗ ಮಿಕ್ಸ್ ಮಾಡಿಕೊಂಡು ಒಟ್ಟು 15 ನಿಮಿಷ ಬಿಡಿ. ಇದು ಸ್ವಲ್ಪ ಗಟ್ಟಿಯಾಗಿ ಗೊಜ್ಜು ಆಗಿರುತ್ತದೆ. ನಂತರ ಮುಚ್ಚಳ ತೆಗೆದು ತಿರುಗಿಸಿಕೊಂಡು, ಕೊತ್ತಂಬರಿ ಸೊಪ್ಪು ಬೇಕಾದರೆ ಸ್ವಲ್ಪ ಬೆಲ್ಲ ಹಾಕಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಬೆಳ್ಳುಳ್ಳಿ ಗೊಜ್ಜು ರೆಡಿಯಾಗುತ್ತೆ. ಇದು ಅನ್ನದ ಜೊತೆಗಂತು ಅದ್ಭುತ ರುಚಿ ನೀಡಲಿದೆ. ನೀವು ಕೂಡ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications