Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೂದಲು ಉದುರುವಿಕೆ, ಚರ್ಮದ ಕಾಂತಿಗೆ ಈ ಅಗಸೆ ಬೀಜದ ಇದೊಂದು ಉಂಡೆ ಪರಿಹಾರ: ಮಾಡೋದು ಹೇಗೆ?
ನೀವು ಆರೋಗ್ಯದ ಕಡೆ ಹೆಚ್ಚು ಗಮನವಿಡುವ ಹಾಗೆ ಯಾವುದೇ ಆಹಾರ ಸೇವಿಸಿದರು ಅದರ ಪ್ರಯೋಜನಗಳ ಕುರಿತು ಅರಿತು ಸವಿಯುವುದು ಅಭ್ಯಾಸವಾಗಿರಬಹುದು. ಹಾಗೆ ಒಂದು ತಿಂಡಿ ನಿಮ್ಮ ಹಲವು ರೀತಿಯ ಆರೋಗ್ಯಕ್ಕೆ ಉತ್ತಮವಾಗಿದ್ದರಂತು ನೀವು ಅದನ್ನೇ ಮಾಡಿ ಸವಿಯಲು ಮುಂದಾಗೋದು ನೋಡಬಹುದು. ಸಾಮಾನ್ಯವಾಗಿ ಕೂದಲು ಸಮಸ್ಯೆ, ಚರ್ಮದ ಸಮಸ್ಯೆಗಳು ಸೇರಿ ಕೆಲವು ವಿಚಾರಗಳು ನಿಮಗೆ ಯಾವಾಗಲು ಕಾಡುತ್ತಲೇ ಇರುತ್ತವೆ.
ಆದರೆ ಈ ಕೂದಲು ಉದುರುವಿಕೆ, ತುಂಡಾಗುವುದು, ತೆಳುವಾಗುವುದು, ಬಿಳಿಯಾಗುವುದು ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕಿ ನೀವು ಸುಮ್ಮನಾಗಿರಬಹುದು. ಹಾಗೆ ಮುಖದಲ್ಲಿನ ಕೆಲಗಳು, ಚರ್ಮ ಸುಕ್ಕುಗಟ್ಟುವುದು ಸಹ ಈಗ ಹೆಚ್ಚಾಗುತ್ತಿರಬಹುದು. ಈ ಎರಡೂ ಸಮಸ್ಯೆಗೆ ಇಂದೇ ತಿಂಡಿಯಲ್ಲಿ ಪರಿಹಾರವಿದೆ.

ಅಗಸೆ ಬೀಜದಿಂದ ಮಾಡುವಂತಹ ಈ ಉಂಡೆಯು ನಿಮ್ಮ ಕೂದಲು ಉದುರುವಿಕೆ ಸಮಸ್ಯೆಯಿಂದ ಹಿಡಿದು ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುವ ಔಷಧಿ ಗುಣಗಳ ಹೊಂದಿರುವ ಖಾದ್ಯವಾಗಿದೆ. ಅಗಸೆ ಬೀಜದಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ನಾರಿನಾಂಶ, ಲಿಗ್ನಾನ್ಸ್‌ಗಳಿಂದ ಸಮೃದ್ಧವಾಗಿದೆ. ಹಾಗೆ ಇದರಲ್ಲಿ ತಾಮ್ರ ಮತ್ತು ಸತುವಿನ ಅಂಶ ಹೇರಳವಾಗಿದೆ. ಹೀಗಾಗಿ ಪ್ರತಿಯೊಂದು ಅಂಶವೂ ನಿಮಗೆ ಉಪಯೋಗಕಾರಿಯಾಗಲಿದೆ.
ಹೀಗಾಗಿ ಈ ಅಗಸೆ ಬೀಜದಿಂದ ತಯಾರಿಸುವ ತಿಂಡಿಯಲ್ಲಿ ನಾವಿಂದು ಸುಲಭವಾಗಿ ಮಾಡುವ ಲಡ್ಡು ಕುರಿತು ತಿಳಿಯೋಣ. ಈ ಅಗಸೆ ಉಂಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಅಗಸೆ ಬೀಜದ ರುಚಿಕರ ತಿಂಡಿ ಮಾಡುವುದು ಹೇಗೆ?
- ಅಗಸೆ ಬೀಜ
- ಕಮಲ ಬೀಜಗಳು - 1 ಕಪ್
- ಬಿಳಿ ಎಳ್ಳು - 1/4 ಕಪ್
- ಬಾದಾಮಿ - 1/2 ಕಪ್
- ವಾಲ್ನಟ್ - 1/4 ಕಪ್
- ತೆಂಗಿನಕಾಯಿ ತುರಿ-1/2 ಕಪ್
- ಒಣ ದ್ರಾಕ್ಷಿ - 1/4 ಕಪ್
- ಬೆಲ್ಲದ ಪುಡಿ - 3/4 ಕಪ್
- ಏಲಕ್ಕಿ ಪುಡಿ - 1/2 ಟೀಸ್ಪೂನ್
- ತುಪ್ಪ - 2 ಚಮಚ
ಅಗಸೆ ಬೀಜದ ರುಚಿಕರ ತಿಂಡಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತಾವರೆ ಬೀಜಗಳ ಹಾಕಿಕೊಂಡು ಹುರಿದುಕೊಳ್ಳಬೇಕು. ಇದು ಗಟ್ಟಿಯಾಗಬೇಕು. 3 ನಿಮಿಷ ಫ್ರೈ ಮಾಡಿ ತೆಗೆದು ಇಟ್ಟುಕೊಳ್ಳಿ. ಈಗ ಒಂದು ಕಪ್ ಅಗಸೆ ಬೀಜ ಇದಕ್ಕೆ ಹಾಕಿ ಫ್ರೈ ಮಾಡಿ, 2 ನಿಮಿಷದ ಬಳಿಕ ಇದಕ್ಕೆ ಕಾಲು ಕಪ್ ಬಿಳಿ ಎಳ್ಳು ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿ ಎರಡನ್ನು ತೆಗೆದು ಇಟ್ಟುಕೊಳ್ಳಿ.
ಈಗ ಬಾಣಲೆಗೆ ಬಾದಾಮಿ, ವಾಲ್ನಟ್ ಸಹ ಹಾಕಿಕೊಂಡು ಫ್ರೈ ಮಾಡಿಕೊಂಡು ತೆಗೆದಿಡಿ. ಹಾಗೆ ಈಗ ಕೊಬ್ಬರಿ ತುರಿ ಹಾಗೆ ದ್ರಾಕ್ಷಿ ಸಹ ಹಾಕಿ 1 ನಿಮಿಷ ಫ್ರೈ ಮಾಡಿದರೆ ಸಾಕಾಗುತ್ತದೆ. ಇದನ್ನು ಕೂಡ ತೆಗೆದಿಡಿ. ಈಗ ಅದೇ ಬಾಣಲೆಗೆ ಮುಕ್ಕಾಲು ಕಪ್ ಬೆಲ್ಲದ ಪುಡಿ ಹಾಕಿ, ಕಾಲು ಕಪ್ ನೀರು ಸಹ ಹಾಕಿ ಕರಗಲು ಬಿಡಿ.
ಈಗ ಮಿಕ್ಸಿ ಜಾರ್ ತೆಗೆದುಕೊಂಡು ಹುರಿದುಕೊಂಡಿದ್ದ ಅಗಸೆ ಬೀಜ ಹಾಗೆ ಬಿಳಿ ಎಳ್ಳು ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡು ತೆಗೆದಿಡಿ. ಹುರಿದುಕೊಂಡ ಎಲ್ಲಾ ಪದಾರ್ಥಗಳನ್ನು ಸಹ ನುಣ್ಣಗೆ ಪುಡಿ ಮಾಡಿ ಒಂದೇ ಪಾತ್ರೆಗೆ ಹಾಕಿಕೊಳ್ಳಿ. ಹಾಗೆ ಇದಕ್ಕೆ ಏಲಕ್ಕಿ ಪುಡಿ, 2 ಸ್ಪೂನ್ ತುಪ್ಪ ಇದಕ್ಕೆ ಸೇರಿಸಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ.
ಈಗ ಕರಗಿಸಿಕೊಂಡಿದ್ದ ಬೆಲ್ಲದ ನೀರನ್ನು ಇದಕ್ಕೆ ಹಾಕಿಕೊಂಡು ಮತ್ತೆ ಕೈಯಿಂದ ಮಿಕ್ಸ್ ಮಾಡಿ. ನಂತರ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಅಗಸೆ ಬೀಜದ ಉಂಡೆ ಸಿದ್ದವಾಗುತ್ತೆ.



Click it and Unblock the Notifications