Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ಊಟದೊಂದಿಗೆ ಹಾಗೆ ಚಪಾತಿ, ದೋಸೆ, ಪರೋಟ, ಇಡ್ಲಿ, ರೊಟ್ಟಿಯಂತಹ ಯಾವುದೇ ತಿನಿಸು ಮಾಡಿದಾಗಲು ಅದಕ್ಕೊಂದು ಪಲ್ಯ, ಗ್ರೇವಿ, ಚಟ್ನಿ, ಸಾಂಬಾರ್ ಮಾಡಿಯೇ ಮಾಡುತ್ತೀರಿ. ಹಾಗೆ ನಾವಿಂದು ಊಟದೊಂದಿಗೆ ಸವಿಯಲು ಹಾಗೆ ತಿಂಡಿಯೊಂದಿಗೆ ಸವಿಯಲು ಮೊಟ್ಟೆ ಬಳಸಿ ಮಾಡುವ ಪಲ್ಯ ಕುರಿತಾಗಿ ತಿಳಿಯೋಣ. ಅದ್ರಲ್ಲೂ ಮೆಂತ್ಯ ಸೊಪ್ಪು ಬಳಸಿಕೊಂಡು ಈ ಮೊಟ್ಟೆ ಪಲ್ಯ ಮಾಡಬಹುದು.
ಆರೋಗ್ಯಕ್ಕೆ ಈ ಮೆಂತ್ಯ ಸೊಪ್ಪು ಬಹಳ ಉತ್ತಮ. ಹಾಗೆ ಮೊಟ್ಟೆ ಪಲ್ಯ ರುಚಿಯಲ್ಲಿ ಬೆಸ್ಟ್. ಈ ಎರಡು ವಸ್ತುಗಳನ್ನು ಬಳಸಿಕೊಂಡು ರುಚಿ ರುಚಿಯಾದ ಮೊಟ್ಟೆ ಪಲ್ಯ ಮಾಡಬಹುದು. ಈ ಪಲ್ಯ ಊಟಕ್ಕೆ ಮಾತ್ರವಲ್ಲದೆ ರುಚಿ ರುಚಿಯಾದ ತಿಂಡಿಯೊಂದಿಗೆ ಸವಿಯಬಹುದು. ಹಾಗೆ ನಿಮ್ಮ ಆರೋಗ್ಯದ ದೃಷ್ಟಿಯಲ್ಲೂ ಇದು ಬಹಳ ಉತ್ತಮ ಖಾದ್ಯ ಆಗಿರಲಿದೆ.

ಮೆಂತ್ಯೆ ಸೊಪ್ಪಿನಲ್ಲಿ ವಿಟಮಿನ್ ಎ, ಸಿ ಮತ್ತು ಪ್ರೊಟೀನ್ನಿಂದ ಸಮೃದ್ಧವಾದ ಪೌಷ್ಟಿಕ ಆಹಾರ ಎನ್ನಬಹುದು. ಇದು ತೂಕ ನಿರ್ವಹಣೆಯಿಂದ ಹಿಡಿದು, ಜೀರ್ಣಕ್ರಿಯೆ, ರಕ್ತ ಹೀನತೆಗೆ ಬಹಳ ಉತ್ತಮ. ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಮೆಂತ್ಯ ಸೊಪ್ಪು ಬಹಳ ಸಹಕಾರಿಯಾಗಲಿದೆ. ಇತ್ತ ಮೊಟ್ಟೆಯು ಕೂಡ ನಿಮಗೆ ಅಧಿಕ ಪ್ರೋಟಿನ್ ನೀಡುವ ಆಹಾರವಾಗಿರಲಿದೆ.
ಹೀಗಾಗಿ ನಾವಿಂದು ಈ ರುಚಿ ರುಚಿಯ ಮೆಂತ್ಯ ಸೊಪ್ಪು ಬಳಸಿ ಮಾಡುವ ಮೊಟ್ಟೆ ಪಲ್ಯದ ಕುರಿತಾಗಿ ತಿಳಿದುಕೊಳ್ಳೋಣ. ಈ ಮೊಟ್ಟೆ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ ಮಾಡಲು ಬೇಕಾಗುವ ವಸ್ತುಗಳು
- ಮೆಂತ್ಯ ಸೊಪ್ಪು
- ಮೊಟ್ಟೆ
- ಉಪ್ಪು
- ಎಣ್ಣೆ
- ಕರಿಮೆಣಸಿನ ಪುಡಿ
- ಅರಿಶಿನ ಪುಡಿ
- ಈರುಳ್ಳಿ
- ಹಸಿ ಮೆಣಸಿನಕಾಯಿ
- ಸಾಸಿವೆ
- ಕೊತ್ತಂಬರಿ ಸೊಪ್ಪು
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ ಮಾಡುವ ವಿಧಾನವೇನು?
ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಸಾಸಿವೆ ಹಾಕಿ, ಹಾಗೆ ಇದಕ್ಕೆ ಹಸಿ ಮೆಣಸು, ಈರುಳ್ಳಿ ಸಹ ಹಾಕಿಕೊಂಡು ಫ್ರೈ ಮಾಡಿ. 1 ನಿಮಿಷ ಬಿಟ್ಟು ಇದಕ್ಕೆ ಅರಶಿಣ ಹಾಕಿ ಮಿಕ್ಸ್ ಮಾಡಿ. ಈಗ ತೊಳೆದು ಹೆಚ್ಚಿಕೊಂಡು ಇಟ್ಟುಕೊಂಡಿರುವ ಮೆಂತ್ಯ ಸೊಪ್ಪು ಹಾಕಿ. ಇದರಲ್ಲಿ ನೀರು ಇರಬಾರದು. ಈಗ 2 ನಿಮಿಷ ಫ್ರೈ ಮಾಡಿಕೊಂಡು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಈಗ ಇದಕ್ಕೆ ಮೊಟ್ಟೆ ಒಡೆದು ಹಾಕಿಕೊಳ್ಳಿ 3ರಿಂದ 4 ಮೊಟ್ಟೆಗಳನ್ನು ಇದಕ್ಕೆ ಒಡೆದು ಹಾಕಿ ಅದರ ಮೇಲೆ ಕಾಳು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಿಧಾನವಾಗಿ ಮಿಕ್ಸ್ ಮಾಡುತ್ತಾ ಇರಿ. 2 ನಿಮಿಷ ಬಿಟ್ಟು ಚೆನ್ನಾಗಿ ಮಿಕ್ಸ್ ಮಾಡುತ್ತಾ ಈಗ ಸಣ್ಣದಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪನ್ನು ಸಹ ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
ಇಷ್ಟಾದರೆ ರುಚಿ ರುಚಿಯ ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ ಸಿದ್ದವಾಗುತ್ತೆ. ನೀವು ಸಹ ಚಪಾತಿ, ಊಟದೊಂದಿಗೆ ಸವಿಯೋಕೆ ಮನೆಯಲ್ಲಿ ಈ ಪಲ್ಯ ಮಾಡಬಹುದು. ಎಲ್ಲರಿಗೂ ಇಷ್ಟವಾಗುವ ಜೊತೆಗೆ ಇದು ಆರೋಗ್ಯಕ್ಕೂ ಕೂಡ ಉತ್ತಮವಾಗಿರಲಿದೆ. ಹಾಗೆ ಇದನ್ನು ಮಾಡುವುದು ಕೂಡ ಬಹಳ ಸುಲಭವಾಗಿದೆ. ಯಾರು ಬೇಕಾದರು ಮಾಡಿ ಸವಿಯಬಹುದು. ಯಾವುದೇ ತಿಂಡಿಯೊಂದಿಗೂ ಇದು ರುಚಿ ಹೆಚ್ಚಾಗಿಸಲಿದೆ. ನೀವು ಕೂಡ ಇದನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications