Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು
ಬೇಸಿಗೆಯ ಈ ಸಮಯದಲ್ಲಿ ಬಹುತೇಕ ಎಲ್ಲರಿಗೂ ಕಾಡುವ ಸಮಸ್ಯೆ ಅಂದ್ರೆ ಅದು ಸುಸ್ತಾಗುವುದು. ದಿನದ ಬಹುಪಾಲು ಸಮಯ ನೀವು ವಿಶ್ರಾಂತಿಗೆ ಮೊರೆ ಹೋಗಬೇಕಾಗುತ್ತದೆ. ಅದ್ರಲ್ಲೂ ಬಿಸಿಲಿನ ತಾಪಕ್ಕೆ ಕೆಲಸ ಮಾಡುವುದು ಕಷ್ಟವಾಗಬಹುದು. ಹಾಗೆ ನಿಮ್ಮ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ ಮೂಡಲು ಸಹ ಇದು ಕಾರಣವಾಗಬಹುದು. ಹಾಗೆ ಬೇಸಿಗೆಯಲ್ಲಿ ನಿಮ್ ದೇಹವು ಬಹಳ ದಣಿಯುವ ಕಾರಣದಿಂದಾಗಿ ಹಲವು ಬಾರಿ ನೀವು ಉತ್ತಮ ಪೋಷಕಾಂಶ ಭರಿತ ಆಹಾರ ಸೇವಿಸಬೇಕಾಗುತ್ತದೆ.
ಇನ್ನು ನೀವು ಇಡೀ ದಿನ ಚಟುವಟಿಕೆಯಿಂದ ಕೂಡಿರಬೇಕಾದರೆ ನಾವಿಂದು ಹೇಳುವ ಈ ಮುದ್ದೆಯನ್ನು ಸವಿದು ನೋಡಿ. ರಾಗಿ ಮುದ್ದೆ ಅಲ್ಲದೆ ಈ ರೀತಿಯಾಗಿ ಮಾಡುವ ಮುದ್ದೆ ಕೂಡ ನಿಮ್ಮ ಆರೋಗ್ಯಕ್ಕೆ ಬೆಸ್ಟ್ ಆಗಿರಲಿದೆ. ಉದ್ದಿನ ಹಿಟ್ಟು ಬಳಸಿ ಮಾಡುವ ಈ ಮುದ್ದೆ ನಿಮಗೆ ಎಲ್ಲಿಲ್ಲದ ಶಕ್ತಿ ನೀಡಲಿದೆ. ಹಾಗೆ ಬಹಳ ರುಚಿ ರುಚಿಯಾಗಿ ಸವಿಯಲು ಎಲ್ಲರಿಗೂ ಇಷ್ಟವಾಗುತ್ತೆ.

ನಿಮ್ಮಲ್ಲಿ ನಿಶಕ್ತಿ, ಬಲಹೀನತೆ ಹಾಗೆ ದೇಹಕ್ಕೆ ಶಕ್ತಿಯ ಅಗತ್ಯವಿದ್ದಾಗ ಈ ಉದ್ದಿನ ಹಿಟ್ಟಿನಿಂದ ಮಾಡುವ ವಿಶೇಷ ಮುದ್ದೆಯನ್ನು ಮಾಡಿ ಸವಿದು ನೋಡಿ. ಇದು ನಿಮ್ಮ ತೋಳುಗಳಲ್ಲಿ ಬಲ ಹೆಚ್ಚಿಸುತ್ತೆ. ಹಾಗಾದ್ರೆ ಈ ಉದ್ದಿನ ಮುದ್ದೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಮಾಹಿತಿಯನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಉದ್ದಿನ ಮುದ್ದೆ ಮಾಡಲು ಬೇಕಾಗುವ ಪದಾರ್ಥಗಳು
ಮೆಂತ್ಯ
ಕಪ್ಪು ಉದ್ದಿನ ಕಾಳು
ಉಪ್ಪು
ಎಣ್ಣೆ
ತುಪ್ಪ
ಗೋಧಿ
ಅಕ್ಕಿ
ಉದ್ದಿನ ಮುದ್ದೆ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಉದ್ದಿನ ಕಾಳು, ಸೇರಿದಂತೆ ಎಲ್ಲಾ ಪದಾರ್ಥಗಳನ್ನು ಬೇರೆ ಬೇರೆಯಾಗಿ ಹುರಿದು ಇಟ್ಟುಕೊಳ್ಳಬೇಕು. ಎಲ್ಲಾ ಪದಾರ್ಥವು ಬಿಸಿಯಾದರೆ ಸಾಕಾಗುತ್ತದೆ. ಈ ಎಲ್ಲಾ ಪದಾರ್ಥಗಳು ತಣ್ಣಗಾದ ಬಳಿಕ ಒಂದೇ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಈ ಕಾಳುಗಳನ್ನು ಹಿಟ್ಟು ಮಾಡಿಕೊಳ್ಳಬೇಕು. ಮಿಕ್ಸಿ ಜಾರ್ನಲ್ಲಿ ಪುಡಿ ಮಾಡಿಕೊಳ್ಳಬಹುದು, ಇಲ್ಲದಿದ್ದರೆ ಹಿಟ್ಟಿನ ಗಿರಣಿಯಲ್ಲು ಪುಡಿ ಮಾಡಿಕೊಂಡು ಬರಬಹುದು.
ಈಗ ಒಲೆ ಮೇಲೆ ಅಳತೆ ಕಪ್ನಲ್ಲಿ ನೀರು ಹಾಕಬೇಕಿ. 4 ಕಪ್ ನೀರು ಹಾಕಿ ಬಿಸಿಯಾಗಲು ಬಿಡಿ. ಕುದಿಬರುವಾಗ 2 ಕಪ್ ಈ ಹಿಟ್ಟನ್ನು ಹಾಕಿಕೊಳ್ಳಬೇಕು. ಹಾಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಮುದ್ದೆ ತಿರುಗಿಸುವಾಗ ಉಪ್ಪು ಹಾಕಿಕೊಂಡು ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ. ಮುದ್ದೆ ಕೋಲಿನಿಂದಲೇ ಮಿಶ್ರಣ ಮಾಡಿ. ಹಿಟ್ಟು ಹದಕ್ಕೆ ಬರುವವರೆಗೂ ಮಿಕ್ಸ್ ಮಾಡುತ್ತಾ ಇರಿ.
ಸಾಮಾನ್ಯ ಮುದ್ದೆ ಮಾಡಿದಂತೆಯೇ ತಿರುಗಿಸಿಕೊಳ್ಳಬೇಕು. ಹಿಟ್ಟು ಮೃದುವಾಗಿ ಬರುವವರಗೂ ಮಿಕ್ಸ್ ಮಾಡಿಕೊಳ್ಳಿ. ಅನಂತರ ಬಿಸಿಯಾಗಿದ್ದಾಗಲೆ ದೊಡ್ಡ ಗಾತ್ರದ ಉಂಡೆ ಅಥವಾ ಮುದ್ದೆ ಕಟ್ಟಿಕೊಳ್ಳಿ. ಹಾಗೆ ಇದನ್ನು ಸವಿಯಲು ತುಪ್ಪ ಅಥವಾ ಯಾವುದೇ ಪಲ್ಯವಿದ್ದರೂ ರುಚಿ ದುಪ್ಪಟ್ಟಾಗಲಿದೆ. ಇದು ನಿಮ್ಮ ದೇಹವು ಶಕ್ತಿ ಪಡೆಯಲು ನಿಶಕ್ತಿ ಇದ್ದರೂ ನಿವಾರಣೆ ಮಾಡಲಿದೆ. ಇದು ಬಹಳ ಸುಲಭವಾಗಿ ಮಾಡುವ ಹಾಗೆ ನಿಮ್ಮ ದೇಹಕ್ಕೆ ಅತ್ಯಂತ ಬಲ ನೀಡುವ ಖಾದ್ಯ ಇದು. ಇದರ ಜೊತೆ ಕಾಳು ಪಲ್ಯವಿದ್ದರೆ ರುಚಿ ದುಪ್ಪಟ್ಟಾಗುತ್ತೆ.
ಅದ್ರಲ್ಲೂ ಬೇಸಿಗೆಯಲ್ಲಿ ದೇಹ ತಂಪಾಗಿಡಬೇಕಾದರೆ ಈ ಹಿಟ್ಟಿನ ತಿಂಡಿ ನಿಮಗೆ ಸಹಕಾರಿಯಾಗಿದೆ. ಬೆಳಗ್ಗೆ ತಿಂಡಿಗೆ ಮಾತ್ರವಲ್ಲದೆ ಯಾವುದೇ ಸಮಯದಲ್ಲಿ ಬೇಕಾದರೂ ಇದನ್ನು ಮಾಡಿ ಸವಿಯಬಹುದು.



Click it and Unblock the Notifications