Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
10 ರೂ. ಬಿಸ್ಕೇಟ್‌ನಿಂದ ಎಗ್‌ಲೆಸ್ ಕೇಕ್ ಮಾಡಿ.! ಇಲ್ಲಿದೆ ಸುಲಭದ ವಿಧಾನ!
ಬೇಕರಿಯಲ್ಲಿ ಸಿಗುವಂತಹ ಕೇಕ್ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮೃದುವಾದ ಹೂವಿನಂತಹ ಸಿಹಿ ಸಿಹಿಯಾದ ಕೇಕ್ ಸವಿಯಲು ಸಿಕ್ಕರೆ ಎಲ್ಲರು ಹೊಟ್ಟೆ ತುಂಬುವಷ್ಟು ಸವಿಯುತ್ತಾರೆ. ಆದ್ರೆ ಬೇಕರಿಯಲ್ಲಿನ ಕೇಕ್‌ಗಳನ್ನು ಸವಿಯೋದು ಅಂದ್ರೆ ಕೆಲವರಿಗೆ ಭೀತಿ. ಹಾಗೆ ಮತ್ತೆ ಕೆಲವರು ಮೊಟ್ಟೆ ಸವಿಯದೆ ಇರುವವರು ಈ ಕೇಕ್‌ಗಳ ಸಹವಾಸಕ್ಕೆ ಹೋಗೋದಿಲ್ಲ.
ಆದ್ರೆ ಎಗ್‌ಲೆಸ್ ಕೇಕ್‌ಗಳು ಕೂಡ ಸಿಗಲಿವೆ. ಆದ್ರೆ ಮನೆಯಲ್ಲೇ ನಾವು ಸುಲಭವಾಗಿ ಎಗ್‌ಲೆಸ್ ಕೇಕ್ ಮಾಡಿ ಸವಿಯಬಹುದು. ಹೌದು ಅಂಗಡಿಯಲ್ಲಿ ಸಿಗುವಂತಹ ಬಿಸ್ಕೇಟ್ ಅನ್ನು ಬಳಸಿಕೊಂಡು ಸುಲಭವಾಗಿ ಮನೆಯಲ್ಲಿ ಕೇಕ್ ತಯಾರಿಸಬಹುದು. ಇದಕ್ಕೆ ಎಗ್ ಬಳಸುವ ಅಗತ್ಯವಿಲ್ಲ ಹಾಗೆ ಹೆಚ್ಚು ವಸ್ತುಗಳು ಕೂಡ ಬೇಕಾಗಿಲ್ಲ.

ಹೌದು ಮನೆಯಲ್ಲಿ ಎಗ್ ಲೆಸ್ ಕೇಕ್ ಮಾಡಿದ್ರೆ ಮನೆ ಮಂದಿಯಲ್ಲ ಕುಳಿತು ಸವಿಯಲು ಇಷ್ಟಪಡುತ್ತಾರೆ, ಹಾಗೆ ಅತಿಥಿಗಳು, ಸ್ನೇಹಿತರು ಬರುವ ಸೂಚನೆ ಇದ್ದಾಗ ಈ ರೀತಿಯ ಕೇಕ್ ನಿಮ್ಮ ಸಂಭ್ರಮ ಹೆಚ್ಚಿಸಲಿದೆ. ಹಾಗಾದ್ರೆ ಮೊಟ್ಟೆಯನ್ನೇ ಬಳಸದೆ ರುಚಿ ರುಚಿಯ ಚಾಕೊಲೆಟ್ ಕೇಕ್ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ.
ಮನೆಯಲ್ಲಿ ಎಗ್ ಬಳಸದೆ ಕೇಕ್ ಮಾಡಲ ಯಾವೆಲ್ಲಾ ಪದಾರ್ಥಗಳು ಬೇಕು?
ಬಿಸ್ಕೇಟ್
ಹಾಲು
ಈನೋ ಪ್ಯಾಕ್
ಎಣ್ಣೆ
ತುಪ್ಪ
ಮನೆಯಲ್ಲಿ ಎಗ್ ಬಳಸದೆ ಕೇಕ್ ಮಾಡುವ ವಿಧಾನವೇನು?
ಮೊದಲು ಈ ಕೇಕ್ ಮಾಡಲು ಯಾವುದಾದರು ಚಾಕೋಲೆಟ್ ಫ್ಲೇವರ್ ಹೊಂದಿರುವ ಬಿಸ್ಕೇಟ್ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಓರಿಯೋ ಅಥವಾ ಹ್ಯಾಪಿ ಹ್ಯಾಪಿ ಬಿಸ್ಕೇಟ್ ಇದ್ದರೆ ಬಹಳ ರುಚಿಯಾಗಿರಲಿದೆ. ಸುಮಾರು 3 ಪ್ಯಾಕ್ ಬಿಸ್ಕೇಟ್ ಅನ್ನು ಮೊದಲು ಬಿಡಿಸಿ ಪುಡಿ ಮಾಡಿ ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಇದನ್ನು ನುಣ್ಣಗೆ ಪುಡಿ ಮಾಡಬೇಕು.
ನುಣ್ಣಗೆ ಪುಡಿಯಾದ ಹಿಟ್ಟನ್ನು ಒಂದು ಬೌಲ್‌ಗೆ ಹಾಕಿಕೊಳ್ಳಿ. ಈಗ ಇದಕ್ಕೆ 1 ಕಪ್ ಹಾಲನ್ನು ಹಾಕಿಕೊಳ್ಳಿ. ಸ್ವಲ್ಪ ಸ್ವಲ್ಪ ಹಾಲು ಹಾಕಿಕೊಳುತ್ತಾ ಮಿಕ್ಸ್ ಮಾಡಬೇಕು. ಗಟ್ಟಿ ಇದ್ದರೆ ಸ್ವಲ್ಪ ಹಾಲು ಹಾಕಿ ಮಿಕ್ಸ್ ಮಾಡಿ. ಬಹಳ ಅಂಟು ಅಂಟಾದ ಹಿಟ್ಟು ರೆಡಿಯಾಗಬೇಕು. ಇಡ್ಲಿ ಹಿಟ್ಟಿಗಿಂತಲೂ ಗಟ್ಟಿಯಾಗಿರಬೇಕು.
ಹಾಗೆ ಇದಕ್ಕೆ ಒಂದು ಈನೋ ಪ್ಯಾಕ್ ತೆಗೆದುಕೊಂಡು ಇದಕ್ಕೆ ಹಾಕಿ ಮೇಲೆ 2 ಸ್ಪೂನ್ ಹಾಲು ಹಾಕಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಈಗ ಒಂದು ಕೇಕ್ ಅಚ್ಚು ಮಾಡಲು ಪಾತ್ರೆ ತೆಗೆದುಕೊಂಡು ಅದಕ್ಕೆ ತುಪ್ಪ ಇಲ್ಲವೆ ಎಣ್ಣೆ ಸವರಿಕೊಳ್ಳಿ. ಹಾಗೆ ಬಟರ್ ಪೇಪರ್ ಸಹ ಹಾಕಿಕೊಳ್ಳಿ, ಬಟರ್ ಫೇಪರ್ ಇಲ್ಲಿದಿದ್ದರೆ ಮೈದಾ ಹಿಟ್ಟು ನೀರಿಗೆ ಹಾಕಿ ಅದನ್ನು ಪಾತ್ರೆಗೆ ಹಾಕಿ. ಈಗ ಈ ಪಾತ್ರೆಯೊಳಗೆ ಬಿಸ್ಕೇಟ್ ಹಿಟ್ಟನ್ನು ಹಾಕಿಕೊಳ್ಳಿ.
ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದರ ತಳಕ್ಕೆ ಪುಡಿ ಉಪ್ಪು ಹಾಕಿಕೊಳ್ಳಿ. ನಂತರ ಉಪ್ಪು ಬಿಸಿಯಾಗಲು ಬಿಡಿ. ಮುಚ್ಚಳ ಮುಚ್ಚಿ 5 ನಿಮಿಷ ಬಿಡಿ. ಈಗ ಮುಚ್ಚಳ ತೆಗೆದು ಹಿಟ್ಟಿನ ಪಾತ್ರೆ ಒಳಗೆ ಇಡಿ. ನಂತರ ರಬ್ಬರ್ ಹಾಗೂ ಸೀಟಿಯನ್ನು ತೆಗೆದು ಮುಚ್ಚಳ ಮುಚ್ಚಿ 30 ನಿಮಿಷ ಬಿಡಬೇಕು.
30 ನಿಮಷದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಅದನ್ನು ಸೈಡ್‌ನಿಂದ ಬಿಡಿಸಿ ಮತ್ತೊಂದು ಪಾತ್ರೆಯ ಮೇಲೆ ಹಾಕಿ ನಿಮಗೆ ಯಾವ ಗಾತ್ರಕ್ಕೆ ಬೇಕೋ ಹಾಗೆ ಕತ್ತರಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಎಗ್‌ಲೆಸ್ ಕೇಕ್ ರೆಡಿಯಾಗುತ್ತದೆ. ನೀವು ಸಹ ಈ ಸುಲಭದ ಕೇಕ್ ಮಾಡಿ ನೋಡಿ.



Click it and Unblock the Notifications