Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
ನಾನ್‌ವೆಜ್ ಪ್ರಿಯರು ಹೆಚ್ಚಾಗಿ ಮೊಟ್ಟೆ ಸಾಂಬಾರ್ ಎಂದರೆ ಹೆಚ್ಚು ಇಷ್ಟಪಡುತ್ತಾರೆ. ಇತ್ತೀಚಿಗೆ ಸಸ್ಯಹಾರಿಗಳಲ್ಲೂ ಮೊಟ್ಟೆ ಸೇವನೆ ಮಾಡುವವರು ಸಿಗುತ್ತಾರೆ. ಮೊಟ್ಟೆ ಸಾಂಬಾರ್ ಅನ್ನದ ಜೊತೆ ಹಾಗೂ ಇಡ್ಲಿ, ದೋಸೆಯ ಜೊತೆ ಸವಿಯಲು ಬಹಳ ರುಚಿಕರವಾಗಿರುತ್ತೆ. ಇನ್ನು ಮೊಟ್ಟೆ ಸಾಂಬಾರ್ ಮಾಡುವುದು ಸಹ ತುಂಬ ಸುಲಭ ಕೆಲವೇ ಮಸಾಲೆಗಳಿದ್ದರೂ ಸಾಕು ನಾವು ಸುಲಭವಾಗಿ ಮೊಟ್ಟೆ ಸಾಂಬಾರ್ ಮಾಡಬಹುದು.
ಇನ್ನು ಆರೋಗ್ಯದ ದೃಷ್ಟಿಯಲ್ಲಿ ಮೊಟ್ಟೆ ಒಳ್ಳೆಯ ಆಹಾರವಾಗಿರುವುದರಿಂದ ಹಲವರು ಇದನ್ನು ಇಷ್ಟಪಡುತ್ತಾರೆ. ಹೀಗಾಗಿ ಮೊಟ್ಟೆ ಸಾಂಬಾರ್‌ಗೆ ಅಭಿಮಾನಿ ಬಳಗವಿದೆ. ಅದರ ಕ್ಯಾಲ್ಸಿಯಂ ಅಂಶ ಹಾಗೂ ವಿಭಿನ್ನ ರುಚಿಯ ಕಾರಣದಿಂದಾಗಿ. ಹಾಗಾದ್ರೆ ನಾವಿಂದು ರುಚಿ ರುಚಿಯಾಗಿ ವಿಭಿನ್ನ ರೀತಿಯಲ್ಲಿ ಮೊಟ್ಟೆ ಸಾಂಬಾರ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ವಿಭಿನ್ನ ರುಚಿಯ ಮೊಟ್ಟೆ ಸಾಂಬಾರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮೊಟ್ಟೆ ಸಾಂಬಾರ್ ಮಾಡುವ ವಿಧಾನವೇನು? ಯಾವ ವಿಧಾನ ಅನುಸರಿಸಬೇಕು ಎಂದು ನಾವಿಂದು ತಿಳಿದುಕೊಳ್ಳೋಣ.
ಮೊಟ್ಟೆ ಸಾಂಬಾರ್ ಮಾಡಲು ಬೇಕಾಗುವ ಪದಾರ್ಥಗಳು
- ಈರುಳ್ಳಿ- 3
- ಬೆಳ್ಳುಳ್ಳಿ- 1
- ಮೊಟ್ಟೆ- 5
- ಶುಂಠಿ
- ಸೋಂಕಾಳು
- ಟೊಮೆಟೋ- 1 (ದೊಡ್ಡದು)
- ದನಿಯಾ ಪುಡಿ
- ಖಾರದ ಪುಡಿ
- ಕೊತ್ತಂಬರಿ ಸೊಪ್ಪು
- ತೆಂಗಿನ ಕಾಯಿ
- ಪುದಿನ
- ಕರಿಬೇವು
- ಅರಶಿನ
- ಮೊಟ್ಟೆ ಮಸಾಲ
- ಉಪ್ಪು
ಮೊಟ್ಟೆ ಸಾಂಬಾರ್ ಮಾಡುವ ವಿಧಾನ
ಮೊದಲು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆ ಹಚ್ಚಿ ಹೆಚ್ಚಿರುವ 2 ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ, ಇದಕ್ಕೆ ಬೆಳ್ಳುಳ್ಳಿ, ಶುಂಠಿ, ಸೋಂಕಾಳು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಒಂದು 5 ನಿಮಿಷ ಚೆನ್ನಾಗಿ ಫ್ರೈ ಆದ ಬಳಿಕ ಟೊಮೆಟೋ ಹಾಕಿ ಮಿಕ್ಸ್ ಮಾಡಿ. ಬಳಿಕ ಇದಕ್ಕೆ ದನಿಯಾ ಹಾಗೂ ಖಾರದ ಪುಡಿ ಹಾಕಿ ಫ್ರೈ ಮಾಡಿಕೊಳ್ಳಿ. ಆದರೆ ಈ ವೇಳೆ ಉರಿ ಸಣ್ಣಗೆ ಇರಲಿ. ಬಳಿಕ ಉರಿ ಆಫ್ ಮಾಡಿ.
ಬಳಿಕ ಸಣ್ಣ ಮಿಕ್ಸರ್ ಜಾರ್ ತೆಗೆದುಕೊಂಡು ಈ ಹುರಿದುಕೊಂಡ ಮಸಾಲೆ ಹಾಕಿ, ಬಳಿಕ ಅದಕ್ಕೆ ಕೊತ್ತಂಬರಿ ಸೊಪ್ಪು, ಸ್ವಲ್ಪ ಕಾಯಿ ಹಾಕಿ. ಆದರೆ ಬೇರೆ ಯಾವ ಮಸಾಲೆಯನ್ನೂ ಹಾಕಬೇಡಿ. ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಈ ರುಬ್ಬಿದ ಮಸಾಲೆಯನ್ನು ಬದಿಗಿಡಿ.
ಈಗ ಒಲೆ ಮೇಲೆ ಪಾತ್ರೆಯಿಟ್ಟು ಅದಕ್ಕೆ ಮತ್ತೆ ಸ್ವಲ್ಪ ಎಣ್ಣೆ ಹಾಕಿ. ಎಣೆ ಕಾದ ಬಳಿಕ 1 ಹೆಚ್ಚಿರುವ ಈರುಳ್ಳಿ ಹಾಕಿ. ಪುದಿನ, ಕರಿಬೇವು, ಎರಡು ಹಸಿಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ನೀವು ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದಕ್ಕೆ ಅರಶಿನ ಪುಡಿ ಹಾಗೂ ಮೊಟ್ಟೆ ಮಸಾಲ ಹಾಕಿ ಮಿಶ್ರಣ ಮಾಡಿ. ನಿಮಗೆ ಎಷ್ಟು ನೀರು ಬೇಕೋ ಅಷ್ಟು ಹಾಕಿಕೊಂಡು ಮಿಕ್ಸ್ ಮಾಡಿ. ಗ್ರೇವಿ ಎಷ್ಟು ತೆಳು ಬೇಕು ಎಂಬುದಕ್ಕೆ ಸರಿಯಾಗಿ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ತಿರುಗಿಸಿ.
ಬಳಿಕ ಕುದಿಯಲು ಬಿಡು. ಇದು ಕುಡಿಯಲಯ ಆರಂಭಿಸಿದಾಗ ಉರಿ ಸಣ್ಣಗೆ ಮಾಡಿ 5 ಮೊಟ್ಟೆಗಳನ್ನು ಒಡೆದು ಅದಕ್ಕೆ ಹಾಕಿಕೊಳ್ಳಿ. ಈ ವೇಳೆ ಸಾಂಬಾರ್ ಅನ್ನು ತಿರುಗಿಸಲು ಹೋಗಬೇಡಿ. ತಿರುಗಿಸಿದರೆ ಮೊಟ್ಟೆ ಕರಡಿ ಹೋಗುತ್ತದೆ. ಈ ರೀತಿ ಹಾಕಿ 5 ನಿಮಿಷ ಕುದಿಯಲು ಬಿಡಿ, ನಂತರ ಒಲೆ ಆಫ್ ಮಾಡಿ ಇಳಿಸಿದರೆ ರುಚಿಕರ ಮೊಟ್ಟೆ ಸಾಂಬಾರ್ ರೆಡಿ.



Click it and Unblock the Notifications