Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳ ಬಾಯಲ್ಲಿ ನೀರು ತರಿಸುವ ಎಗ್ ರೋಲ್ ಮಾಡಿ ನೋಡಿ..! ಒಂದೂ ಬಿಡದೆ ಖಾಲಿಯಾಗುತ್ತೆ!
ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಅವರ ಊಟ, ತಿಂಡಿಯದ್ದೇ ಬಹುದೊಡ್ಡ ತಲೆನೋವಾಗಿರುತ್ತೆ. ಏಕೆಂದರೆ ಮಕ್ಕಳು ನೀವು ಮಾಡಿದ ತಿಂಡಿಗಳ ಇಷ್ಟಪಟ್ಟು ಸವಿಯುವುದು ಬಹಳ ಕಡಿಮೆ. ಅವರು ತಿಂಡಿ ಸವಿದು ಶಾಲೆಗೆ ಹೊರಡಿಸುವುದು ನಿಮ್ಮ ಅತ್ಯಂತ ಸವಾಲಿನ ಕೆಲಸದಲ್ಲಿ ಒಂದಾಗಿರಲಿದೆ. ಅದರಲ್ಲೂ ಬೆಳಗ್ಗೆ ಸಮಯದಲ್ಲಿ ಅವರಿಗೆ ತಿಂಡಿ ನೀಡುವುದು ಬಹಳ ಕಷ್ಟದ ಕೆಲಸ.
ಇನ್ನು ಮಕ್ಕಳಿಗೆ ಇಷ್ಟವಾಗುವ ಹಾಗೆ ಅವರ ಬಾಕ್ಸ್‌ಗೆ ಹಾಕಿ ಕಳುಹಿಸಲು ತಾಯಿ ಹಲವು ಬಗೆಯ ತಿಂಡಿಗಳ ಮಾಡುವುದು ನೋಡುತ್ತೇವೆ. ಆದ್ರೆ ಮಕ್ಕಳು ಇಷ್ಟಪಟ್ಟು ಯಾವ ತಿಂಡಿ ಸವಿಯುತ್ತಾರೆ. ಮಕ್ಕಳಿಗೆ ದೋಸೆ, ಇಡ್ಲಿ ಇಷ್ಟವಾಗಬಹುದು ಹಾಗೆ ಕೆಲವರಿಗೆ ರೈಸ್‌ನಿಂದ ಮಾಡಿದ ಖಾದ್ಯ ಸವಿಯಲು ಇಷ್ಟವಾಗಬಹುದು. ಆದ್ರೆ ಎಲ್ಲಾ ಮಕ್ಕಳಿಗೂ ಸಾಮಾನ್ಯವಾಗಿ ಇಷ್ಟವಾಗುವ ಖಾದ್ಯ ಅಂದ್ರೆ ಅದು ಎಗ್ ರೋಲ್.

ಮಕ್ಕಳಿಗೆ ಮನೆಯಲ್ಲಿ ಎಗ್ ರೋಲ್ ಸವಿಯೋದು ಅಂದ್ರೆ ಬಹಳ ಇಷ್ಟ. ಅವರು ಸ್ಕೂಲ್‌ಗೆ ತೆಗೆದುಕೊಂಡು ಹೋಗುವ ಬಾಕ್ಸ್‌ಗೂ ಕೂಡ ಇದನ್ನು ಹಾಕಿಕೊಂಡು ಸವಿಯಲು ಇಷ್ಟಪಡುತ್ತಾರೆ. ಹಾಗೆ ಇದನ್ನು ಮಾಡೋದು ಕೂಡ ಸುಲಭ ಆಗಿರೋದ್ರಿಂದ ಎಲ್ಲರಿಗೂ ಇದನ್ನು ಮಾಡಲು ಮನಸ್ಸಾಗುತ್ತೆ. ಎರಡು ಚಪಾತಿ ಹಾಗೆ ಮೊಟ್ಟೆ ಇದ್ದರೆ ಇದನ್ನು ಮಾಡಬಹುದು.
ಹಾಗಾದ್ರೆ ಈ ಚಪಾತಿ ಎಗ್ ರೋಲ್ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಎಗ್ ರೋಲ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಚಪಾತಿ
- ಮೊಟ್ಟೆ-4
- ಶುಂಠಿ
- ಬೆಳ್ಳುಳ್ಳಿ
- ಈರುಳ್ಳಿ
- ಟೊಮೆಟೋ
- ಕ್ಯಾಪ್ಸಿಕಂ
- ಅರಶಿಣ
- ಉಪ್ಪು
- ಎಣ್ಣೆ
- ಖಾರದ ಪುಡಿ
- ಧನಿಯಾ
- ಗರಂ ಮಸಾಲೆ
- ಕೊತ್ತಂಬರಿ ಸೊಪ್ಪು
- ಟೊಮೆಟೋ ಸಾಸ್
ಎಗ್ ರೋಲ್ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ ನಂತರ ಇದಕ್ಕೆ ಶುಂಠಿ, ಚಿಕ್ಕದಾಗಿ ಕತ್ತರಿಸಿರುವ ಬೆಳ್ಳುಳ್ಳಿ ಹಾಕಿ ಅರ್ಧ ನಿಮಿಷ ಫ್ರೈ ಮಾಡಿ. ನಂತರ ಚಿಕ್ಕದೊಂದು ಕ್ಯಾಪ್ಸಿಕಂ ಸಣ್ಣದಾಗಿ ಕತ್ತರಿಸಿ ಹಾಕಿ ಹಾಗೆ ಈರುಳ್ಳಿ ಕೂಡ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿ.
ನಂತರ ಸಣ್ಣದಾಗಿ ಕತ್ತರಿಸಿಕೊಂಡಿರುವ ಟೊಮೆಟೋವನ್ನು ಕೂಡ ಇದಕ್ಕೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಹಾಗೆ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಅರಶಿಣ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಅರ್ಧ ಗ್ಲಾಸ್ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಈಗ ಮೊಟ್ಟೆ ಹಾಕಿಕೊಳ್ಳಬೇಕು.
ಮೊದಲೇ ಬೇಯಿಸಿಕೊಂಡಿದ್ದ 4 ಮೊಟ್ಟೆಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಈ ಬಾಣಲೆಗೆ ಹಾಕಿಕೊಳ್ಳಿ. ಒಂದು ಎಗ್ ರೋಲ್‌ಗೆ ಒಂದು ಮೊಟ್ಟೆಯಂತೆ ಲೆಕ್ಕ ಇಟ್ಟುಕೊಳ್ಳಬಹುದು. ಈ ಮಿಶ್ರಣ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ 3 ನಿಮಿಷದ ಬಳಿಕ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ.
ಈಗ ಕಾವಲಿಯಲ್ಲಿ ಚಪಾತಿ ಮಾಡಿಕೊಳ್ಳಿ. ಚಪಾತಿಯನ್ನು ಎರಡು ಕಡೆಗೂ ರೋಸ್ಟ್ ಮಾಡಬೇಕು, ಚಪಾತಿ ರೋಲ್‌ಗೆ ಉಬ್ಬಿಬರುವ ಚಪಾತಿ ಬಳಸಬೇಡಿ. ಈ ಚಪಾತಿ ಬಿಸಿ ಮಾಡಿಕೊಂಡ ಬಳಿಕ ಮೊಟ್ಟೆಯ ಮಸಾಲೆಯನ್ನು ಮಧ್ಯದಲ್ಲಿ ಹಾಕಿ ಸಾಸ್ ಹಾಕಿಕೊಳ್ಳಬಹುದು. ನಂತರ ಒಂದು ಕಡೆಯಿಂದ ಮಡಚಿಕೊಳ್ಳಬೇಕು ನೀವು ಇದಕ್ಕೆ ಈರುಳ್ಳಿಯನ್ನು ಕೂಡ ಮಧ್ಯದಲ್ಲಿ ಹಾಕಿ ಸುತ್ತಿಕೊಳ್ಳಬಹುದು.
ಇಷ್ಟಾದರೆ ಎಗ್ ಚಪಾತಿ ರೋಲ್ ರೆಡಿಯಾಗುತ್ತದೆ, ಮಕ್ಕಳಿಗೆ ಇದು ಬ್ರೇಕ್ ಫಾಸ್ಟ್ ಆಗಿ ನೀಡಿದರೆ ಬಹಳ ಇಷ್ಟಪಟ್ಟು ಸವಿಯುತ್ತಾರೆ. ನೀವು ಕೂಡ ಬೆಳಗ್ಗೆ ಇದನ್ನು ಸವಿಯಬಹುದು.



Click it and Unblock the Notifications