Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲಿಯೇ ಸಾಸ್ ಬಳಸದೆ ಎಗ್ ರೈಸ್ ಮಾಡಿ..! ಹೇಗೆ ಗೊತ್ತಾ?
ನೀವು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಎಗ್‌ರೈಸ್ ಕಂಡು ಸೇವಿಸಬೇಕು ಅಂದುಕೊಂಡಿರುತ್ತೀರಿ, ಆದ್ರೆ ಆರೋಗ್ಯದ ದೃಷ್ಟಿಯಿಂದ ಸೇವಿಸದೆ ಸುಮ್ಮನಾಗಿರುತ್ತೀರಿ. ಯಾಕಂದ್ರೆ ಅಲ್ಲಿ ಅಡುಗೆ ಸೋಡಾ, ಸಾಸ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಿ ಈ ಎಗ್‌ರೈಸ್ ಮಾಡುತ್ತಾರೆ. ಅಲ್ಲದೆ ಕರಿದ ಎಣ್ಣೆಯನ್ನು ಎಗ್‌ರೈಸ್ ಮಾಡಲು ಬಳಸಲಾಗುತ್ತದೆ.
ಆದರೆ ಎಗ್‌ರೈಸ್ ಸೇವಿಸಲು ಬಹಳ ರುಚಿಕರವಾಗಿರುತ್ತದೆ. ಹೀಗಾಗಿ ವಯಸ್ಸಿನ ಮಿತಿ ಇಲ್ಲದೆ ಎಲ್ಲರು ಇದನ್ನು ಸೇವಿಸುತ್ತಾರೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿಯೂ ಸಹ ಇದನ್ನು ಸೇವಿಸಬಹುದು. ಹಾಗಾದ್ರೆ ನಾವಿಂದು ಮನೆಯಲ್ಲಿಯೇ ಯಾವುದೇ ಸಾಸ್ ಬಳಸದೆ ಎಗ್‌ರೈಸ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಎಗ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಗ್‌ರೈಸ್ ಮಾಡಲು ಎಷ್ಟು ಸಮಯ ಹಿಡಿಯುತ್ತದೆ, ಮಾಡುವ ಪಾಕವಿಧಾನ ಏನು ಎಂಬುದನ್ನು ನೋಡೋಣ ಬನ್ನಿ.
ಎಗ್ ರೈಸ್ ಮಾಡಲು ಬೇಕಾಗುವ ಪದಾರ್ಥಗಳು
- ಮೊಟ್ಟೆ- 5
- ಅನ್ನ - 1 ಬೌಲ್
- ಈರುಳ್ಳಿ- 3
- ಹಸಿರು ಮೆಣಸಿನಕಾಯಿ - 3
- ಟೊಮೆಟೊ - 1
- ಕೊತ್ತಂಬರಿ ಪುಡಿ-1/2 ಟೀಸ್ಪೂನ್
- ಅರಿಶಿನ ಪುಡಿ - 1/4 ಟೀಸ್ಪೂನ್
- ಜೀರಿಗೆ ಪುಡಿ - 1/4 ಟೀಸ್ಪೂನ್
- ಕೆಂಪು ಮೆಣಸಿನ ಪುಡಿ - 1 ಟೀಸ್ಪೂನ್
- ಗರಂ ಮಸಾಲಾ ಪುಡಿ - 1/2 ಟೀಸ್ಪೂನ್
- ಕ್ಯಾಪ್ಸಿಕಂ-1/2
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbs
- ಕೊತ್ತಂಬರಿ ಸೊಪ್ಪು - 2 tbs
- ಕರಿಬೇವಿನ ಎಲೆಗಳು - 1 tbs
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಎಗ್ ರೈಸ್ ಮಾಡುವ ವಿಧಾನ
ಮೊದಲು ಒಲೆ ಮೇಲೆ ಪಾತ್ರೆಯಿಟ್ಟು ಎಣ್ಣೆ ಹಾಕಿ ಬಳಿಕ ಈರುಳ್ಳಿಯನ್ನು ಸ್ಲೈಸ್ ಮಾಡಿಕೊಂಡು ಅದಕ್ಕೆ ಹಾಕಿ. ಅದಕ್ಕೆ ಕರಿಬೇವಿನ ಸೊಪ್ಪು, ಹಸಿಮೆಣಸಿನ ಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಫ್ರೈ ಮಾಡಿ.
ಎರಡು ನಿಮಿಷ ಫ್ರೈ ಮಾಡಿದ ಬಳಿಕ ಒಂದು ಹಣ್ಣು ಟೊಮೆಟೊ ಹಾಕಿಕೊಂಡು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಬಳಿಕ ಅರ್ಧ ಕಪ್ ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷ ಫ್ರೈ ಆದ ಬಳಿಕ ಅರಶಿನ ಪುಡಿ, ಖಾರದ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ ಹಾಕಿಕೊಂಡು ಮತ್ತೊಂದು ನಿಮಿಷ ಫ್ರೈ ಮಾಡಿ.
ಇದಾದ ಬಳಿಕ 5 ಮೊಟ್ಟೆಗಳನ್ನು ಒಡೆದು ಅದಕ್ಕೆ ಹಾಕಿಕೊಳ್ಳಿ. ಮೊಟ್ಟೆ ಹಾಕಿದ ಬಳಿಕ ಮಿಶ್ರಣ ಮಾಡಬೇಡಿ, 1 ನಿಮಿಷ ಬಿಟ್ಟ ಬಳಿಕ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮೊಟ್ಟೆ ಬೇಯುವವರೆಗೂ ಫ್ರೈ ಮಾಡಿಕೊಳ್ಳಿ. ಇದಾದ ಬಳಿಕ ಅನ್ನವನ್ನು ಹಾಕಿಕೊಳ್ಳಿ. ಅನ್ನ ಹಾಕಿದ ಬಳಿಕ ಉರಿ ಕಡಿಮೆ ಮಾಡಿಕೊಳ್ಳಿ. ಇದಕ್ಕೆ ಗರಂ ಮಸಾಲ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. 4ರಿಂದ 5 ನಿಮಿಷಗಳ ಕಾಲ ಮಿಶ್ರಣ ಮಾಡಿಕೊಳ್ಳುತ್ತಾ ಫ್ರೈ ಮಾಡಿಕೊಳ್ಳಿ.
ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಎಗ್ ರೈಸ್ ರೆಡಿಯಾಗಿರುತ್ತದೆ. ಇದಕ್ಕೆ ನಿಮ್ಮ ಮನೆಯಲ್ಲಿ ಅಡುಗೆ ಸೋಡಾ ಇದ್ದರೆ ಒಂದು ಚಿಟಿಕೆ ಹಾಕೊಕೊಳ್ಳಬಹುದು. ಇಲ್ಲದಿದ್ದರೂ ತೊಂದರೆ ಇಲ್ಲ. ಇನ್ನು ಕ್ಯಾಪ್ಸಿಕಂ ಹಾಕಲೇಬೇಕು ಅಂತಾನು ಇಲ್ಲ. ಇನ್ನು ಇದಕ್ಕೆ ಯಾವ ಸಾಸ್ ಸಹ ಬಳಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿ ಸಾಸ್ ಅಥವಾ ವಿನೆಗರ್ ಇದ್ದರೆ ರುಚಿಗೆ ತಕ್ಕಷ್ಟು ಬಳಸಿ.



Click it and Unblock the Notifications