Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸ್ಟೋರೆಂಟ್, ಡಾಬಾ ರುಚಿಯ ಮೊಟ್ಟೆ ಮಸಾಲೆ ಫ್ರೈ ಇಲ್ಲಿದೆ..! ಮಾಡೋದು ಹೇಗೆ?
ಊಟಕ್ಕೆ ಒಂದು ಕರಿ ಅಥವಾ ಗ್ರೇವಿ ಇದ್ದರೆ ಅದರ ರುಚಿಯೇ ಬೇರೆ. ಅದ್ರಲ್ಲೂ ಕಡಿಮೆ ವಸ್ತುಗಳ ಬಳಸಿ ಶೀಘ್ರ ಗತಿಯಲ್ಲಿ ಎಲ್ಲರು ಸವಿಯಲು ಇಷ್ಟಪಡುವಂತೆ ಮಾಡುವ ಖಾದ್ಯ ಅಂದ್ರೆ ಎಗ್ ಕರಿ. ನೀವು ತಿಂಡಿಗೆ, ಊಟಕ್ಕೆ ಯಾವುದೇ ಸಮಯದಲ್ಲಿ ಇದನ್ನು ಮಾಡಿ ಸವಿಯಬಹುದು. ಇದರ ರುಚಿಯೇ ಎಲ್ಲರನ್ನು ಸವಿಯುವಂತೆ ಮಾಡಲಿದೆ.
ನಾವಿಂದು ಸಾಮಾನ್ಯವಾಗಿ ನೀವು ಡಾಬಾ, ಹೋಟೆಲ್, ರೆಸ್ಟೋರೆಂಟ್‌ನಲ್ಲಿ ಸವಿದಿರುವಂತಹ ರುಚಿಯ ಎಗ್ ಮಸಾಲ ಫ್ರೈ ಮಾಡುವ ಕುರಿತು ತಿಳಿದುಕೊಳ್ಳೋಣ. ರೆಸ್ಟೋರೆಂಟ್ ಡಾಬಾದಲ್ಲಿ ಸಿಗುವಂತಹ ಈ ಎಗ್ ಮಸಾಲೆಯು ನಿಮ್ಮ ಬಾಯಿ ರುಚಿ ಹೆಚ್ಚಿಸುತ್ತೆ, ಅಲ್ಲದೆ ನಿಮಗೆ ಮತ್ತಷ್ಟು ಸವಿಯಬೇಕು ಎನಿಸುತ್ತೆ.

ಹೀಗಾಗಿ ನಾವಿಂದು ಈ ಮೊಟ್ಟೆ ಮಸಾಲೆ ಮಾಡುವುದು ಹೇಗೆ ಎಂಬುದನ್ನು ನೋಡೋಣ. ರೆಸ್ಟೋರೆಂಟ್ ಸ್ಟೈಲ್‌ನಲ್ಲಿ ಎಗ್ ಮಸಾಲೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲ ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಎಗ್ ಮಸಾಲೆ ಕರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬೇಯಿಸಿದ ಮೊಟ್ಟೆಗಳು - 6
- ಮೆಣಸಿನಕಾಯಿ - 4
- ಗೋಡಂಬಿ - 50 ಗ್ರಾಂ
- ಎಣ್ಣೆ - 4 tbs
- ಜೀರಿಗೆ - 1/2 tbs
- ಗರಂ ಮಸಾಲಾ
- ಕರಿಬೇವಿನ ಎಲೆಗಳು
- ಬೆಳ್ಳುಳ್ಳಿ - 1
- ಈರುಳ್ಳಿ - 2
- ಟೊಮೆಟೊ - 3
- ಮೆಣಸಿನ ಪುಡಿ - 1 tbs
- ರುಚಿಗೆ ಉಪ್ಪು
- ಮೊಟ್ಟೆ ಮಸಾಲಾ ಪುಡಿ - 2 tbs
- ಕೊತ್ತಂಬರಿ ಸೊಪ್ಪು
- ಕಸೂರಿಮೇತಿ
ರೆಸ್ಟೋರೆಂಟ್ ರುಚಿಯಲ್ಲಿ ಎಗ್ ಮಸಾಲೆ ಕರಿ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್‌ನಲ್ಲಿ ಒಣ ಮೆಣಸು ಹಾಗೂ ಗೋಡಂಬಿಯನ್ನು ಬೇರೆ ಬೇರೆಯಾಗಿ ನೆನೆಸಿಟ್ಟುಕೊಳ್ಳಬೇಕು. ಈ ನೆನೆಸಿಟ್ಟ ಮೆಣಸನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಇದಕ್ಕೆ ಟೊಮೆಟೋ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಬಳಿಕ ನೀರು ಸಮೇತ ಗೋಡಂಬಿ ಇನ್ನೊಂದು ಜಾರಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ಇನ್ನೊಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ, ಜೀರಿಗೆ, ಚಕ್ಕೆ, ಲವಂಗ, ಚಕ್ರ ಮೊಗ್ಗು , ಏಲಕ್ಕಿ, ಕರಿಬೇವು, ಕತ್ತರಿಸಿಕೊಂಡ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಎರಡು ಈರುಳ್ಳಿ ಸಣ್ಣದಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿ.
ಈಗ ಖಾರದ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ಟೊಮೆಟೋ ಪೇಸ್ಟ್ ಅನ್ನು ಈ ಪಾತ್ರೆಗೆ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದನ್ನು ಸಣ್ಣ ಉರಿಯಲ್ಲಿ ಬಿಡಿ.
ಈಗ ಮತ್ತೊಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಇದಕ್ಕೆ ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಇದಕ್ಕೆ ಬೇಯಿಸಿರುವ ಮೊಟ್ಟೆಯನ್ನು ಮಧ್ಯದಲ್ಲಿ ಸಣ್ಣದಾಗಿ ಕತ್ತರಿಸಿಕೊಂಡು ಈ ಬಾಣಲೆಯಲ್ಲಿ ಹಾಕಿ ಹುರಿದುಕೊಳ್ಳಬೇಕು. 3 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ 3 ಹಸಿ ಮೆಣಸು ಕೂಡ ಸೀಳಿಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿ.
ಈ ಮೊಟ್ಟೆಯನ್ನು ಮಸಾಲೆ ಸಮೇತ ಒಲೆ ಮೇಲೆ ಕುದಿಯುತ್ತಿರುವ ಮತ್ತೊಂದು ಮಸಾಲೆಗೆ ಹಾಕಿಕೊಂಡು 2 ನಿಮಿಷ ಪ್ರೈ ಮಾಡಿ. ಇದಕ್ಕೂ ಈಗ ಉಪ್ಪು ಹಾಕಿ ಜೊತೆಗೆ ಮೊಟ್ಟೆ ಮಸಾಲೆ ಪುಡಿ ಹಾಕಿ ಮಿಕ್ಸ್ ಮಾಡಿ ಕುದಿಯಲು ಬಿಡಿ. ಅಂತಿಮವಾಗಿ ಮಿಕ್ಸಿಯಲ್ಲಿ ರುಬ್ಬಿರುವ ಗೋಡಂಬಿ ಪೇಸ್ಟ್ ಹಾಕಿ ಕುದಿಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರೆಸ್ಟೋರೆಂಟ್ ರುಚಿಯ ಮೊಟ್ಟೆ ಮಸಾಲೆ ಫ್ರೈ ರೆಡಿಯಾಗುತ್ತದೆ.



Click it and Unblock the Notifications