Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಡುಗೆ ಬರಲ್ಲ ಅನ್ನೋರು ಸಹ ಮಾಡಿ ಮುಗಿಸುವ ಮೊಟ್ಟೆ ಕರಿ; ಸುಲಭದ ರೆಸಿಪಿ!
ಊಟದೊಂದಿಗೆ ಸವಿಯಲು ನೀವು ಹಲವು ರೀತಿಯ ಖಾದ್ಯಗಳ ಮಾಡುವಿರಿ. ಬಗೆ ಬಗೆಯ ಕರಿ, ಸಾಂಬಾರ್, ಗ್ರೇವಿ ಮಾಡುವುದು ಕಾಮನ್. ಹಾಗೆ ಹಲವು ರುಚಿಯ ಖಾದ್ಯಗಳಿದ್ದರೆ ಊಟದ ರುಚಿ ಕೂಡ ದುಪ್ಪಟ್ಟಾಗುತ್ತೆ. ಅಂತಹ ಊಟದ ಸಮಯಕ್ಕೆ ನಾವಿಂದು ಮೊಟ್ಟೆಯಿಂದ ಮಾಡುವಂತಹ ವಿಶೇಷ ರುಚಿಯ ಖಾದ್ಯ ಮಾಡುವುದು ನೋಡಿರುತ್ತೇವೆ.
ಆದ್ರೆ ಅಡುಗೆ ಬಾರದೆ ಇರುವ ಮಂದಿ ಕೂಡ ಸುಲಭವಾಗಿ ಮೊಟ್ಟೆ ಕರಿ ಮಾಡಬಹುದು. ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಈ ಮೊಟ್ಟೆ ಕರಿಯನ್ನು ಮಾಡಿ ಸವಿಯಬಹುದು. ಅದ್ರಲ್ಲೂ ಅಡುಗೆ ಬರಲ್ಲ ಅನ್ನೋರು ಸಹ ಇದನ್ನು ಮಾಡಿ ಸವಿಯಬಹುದು. ಊಟದ ರುಚಿ ಹೆಚ್ಚಿಸುವ ಈ ಮೊಟ್ಟೆ ಕರಿ ಎಲ್ಲರಿಗೂ ಇಷ್ಟವಾಗುತ್ತೆ.

ಆದ್ರೆ ಅಡುಗೆ ಕಲಿಯುವವರು ಮೊಟ್ಟೆ ಕರಿಯನ್ನು ಮಾಡುವುದು ಹೇಗೆ ಸುಲಭವಾಗಿ ಮಾಡಿ ಮುಗಿಸುವ ಜೊತೆಗೆ ಕಡಿಮೆ ವಸ್ತುಗಳ ಬಳಸಿಕೊಂಡು ಹೇಗೆ ಮಾಡಬೇಕು ಎನ್ನುವುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೊಟ್ಟೆ ಕರಿ ಮಾಡಲು ಬೇಕಾಗುವ ಪದಾರ್ಥಗಳು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೊಟ್ಟೆ ಕರಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮೊಟ್ಟೆ
- ಈರುಳ್ಳಿ
- ಟೊಮೆಟೊ
- ಹಸಿ ಮೆಣಸು
- ಶುಂಠಿ
- ಬೆಳ್ಳುಳ್ಳಿ
- ಕೊತ್ತಂಬರಿ ಸೊಪ್ಪು
- ಜೀರಿಗೆ
- ಸೋಂಪುಕಾಳು
- ಕಸೂರಿ ಮೇಥಿ
- ಅರಿಶಿನ ಪುಡಿ
- ಕೊತ್ತಂಬರಿ ಪುಡಿ
- ಕೆಂಪು ಮೆಣಸಿನ ಪುಡಿ
- ಗರಂ ಮಸಾಲ ಪುಡಿ
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಮೊಟ್ಟೆ ಕರಿ ಮಾಡುವ ಸುಲಭದ ವಿಧಾನವಿದು
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಈರುಳ್ಳಿ, ಮೆಣಸು, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಕೊತ್ತಂಬರು ಸೊಪ್ಪು, ನೀರು ಹಾಕಿಕೊಂಡು ರುಬ್ಬಿಕೊಂಡು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಸೋಂಪು ಕಾಳು ಹಾಕಿ ಬಳಿಕ ಮಿಕ್ಸಿಯಲ್ಲಿ ರುಬ್ಬಿದ್ದ ಮಸಾಲೆಯನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಫ್ರೈ ಆಗಲು ಬಿಡಿ.
ಸುಮಾರು 2ರಿಂದ 3 ನಿಮಿಷಗಳ ಕಾಲ ಇದನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಇದು ಎಣ್ಣೆ ಬಿಟ್ಟ ಬಳಿಕ ಇದಕ್ಕೆ 1 ಸ್ಪೂನ್ ಕಸೂರಿ ಮೇಥಿ, ಟೊಮೆಟೋ, ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಹಾಗೆ ಅರಶಿಣ ಪುಡಿ, ಧನಿಯ ಪುಡಿ, ಖಾರದ ಪುಡಿ, ಗರಂ ಮಸಾಲ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ.
ಹಾಗೆ ಉಪ್ಪು ಹಾಕಿಕೊಂಡು ಸಣ್ಣ ಉರಿಯಲ್ಲಿ ಮಿಕ್ಸ್ ಮಾಡುತ್ತಾ ಇರಿ. 1 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಸ್ವಲ್ಪ ನೀರು ಹಾಕಿಕೊಳ್ಳಿ. ನಿಮಗೆ ಎಷ್ಟು ಕರಿ ಬೇಕೋ ಅಷ್ಟು ನೀರು ಹಾಕಿಕೊಂಡು ಕುದಿಬರಲು ಬಿಡಿ.
ಕುದಿಬರಲು ಆರಂಭಿಸಿದಾಗ ಒಂದೊಂದೇ ಮೊಟ್ಟೆಯನ್ನು ಇದಕ್ಕೆ ಹಾಕಿಕೊಳ್ಳಬೇಕು, ನಂತರ ಮುಚ್ಚಿ ಕುದಿಯಲು ಬಿಡಿ. ಆಗಾಗ ಮಧ್ಯದಲ್ಲಿ ಮಿಕ್ಸ್ ಮಾಡಬೇಕು. ಹೆಚ್ಚು ಜೋರಾಗಿ ಮಿಕ್ಸ್ ಮಾಡಲು ಮುಂದಾಗಬೇಡಿ. ಆದ್ರೆ ನಿಧಾನವಾಗಿ ಮಿಶ್ರಣ ಮಾಡಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮೊಟ್ಟೆ ಕರಿ ಸಿದ್ದವಾಗುತ್ತೆ. ನೀವು ಸಹ ಇದನ್ನು ಮನೆಯಲ್ಲಿ ಮಾಡಿ ನೊಡಿ.



Click it and Unblock the Notifications