Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲಾ ಘಮ್ ಎನ್ನುವ ಮೊಟ್ಟೆ ಚಾಪ್ಸ್ ಮಾಡಿ..! ಇಲ್ಲಿದೆ ರೆಸಿಪಿ!
ನಾನ್‌ವೆಜ್ ಪ್ರಿಯರಿಗೆ ಮಾಂಸಹಾರದಲ್ಲಿ ಹತ್ತಾರು ವಿಧದ ಖಾದ್ಯ ಇದೆ. ಚಿಕನ್, ಮಟನ್‌ನಲ್ಲಿ ಎಷ್ಟೊಂದು ವಿಧದ ಖಾದ್ಯವಿದೆ ಅಂದ್ರೆ ಬಾಯಲ್ಲಿ ನೀರು ತರಿಸುತ್ತೆ. ಎಲ್ಲರೂ ಈಗ ವಾರಕ್ಕೆ ಒಮ್ಮೆಯಾದರು ಚಿಕನ್, ಮಟನ್ ಸವಿಯುತ್ತಾರೆ. ಇನ್ನು ಮೊಟ್ಟೆಯ ವಿಚಾರಕ್ಕೆ ಬಂದರೆ ಸಸ್ಯಹಾರಿಗಳು ಹಾಗೂ ಮಾಂಸಹಾರಿಗಳಲ್ಲೂ ಈ ಖಾದ್ಯ ಸವಿಯುವುದನ್ನು ನೋಡಬಹುದು.
ಮೊಟ್ಟೆಯಲ್ಲಿ ಹಲವು ರೀತಿ ಖಾದ್ಯ ಮಾಡಬಹುದು. ಮೊಟ್ಟೆ ಮಸಾಲ, ಮೊಟ್ಟೆ ಬಿರಿಯಾನಿ, ಮೊಟ್ಟೆ ಕರಿ, ಎಗ್ ಬುರ್ಜಿ ಹೀಗೆ ಹಲವು ರೀತಿ ಖಾದ್ಯ ಮಾಡಿ ಸವಿದಿರುತ್ತೀರಿ. ಮೊಟ್ಟೆ ಆರೋಗ್ಯಕ್ಕೂ ಉತ್ತಮವಾಗಿರುವುದರಿಂದ ಹಲವರು ಇದನ್ನು ಸವಿಯಲು ಇಷ್ಟಪಡುತ್ತಾರೆ. ಆದ್ರೆ ಮೊಟ್ಟಯಲ್ಲಿ ಹಲವು ರೀತಿಯ ಮಸಾಲೆ ಭರಿತ ಖಾದ್ಯ ಮಾಡಬಹುದು.

ನೀವು ಚಿಕನ್ ಹಾಗೂ ಮಟನ್ ಚಾಪ್ಸ್ ಮಾಡಿ ಸವಿದಿರುತ್ತೀರಿ. ಮಟನ್ ಚಾಪ್ಸ್ ಎಂದರೆ ಆ ಹೋಟೆಲ್ ಹುಡುಕಿಕೊಂಡು ಹೋಗಿ ಸವಿಯುವ ಮಂದಿಯೂ ಇದ್ದಾರೆ. ಆದ್ರೆ ಎಂದಾದ್ರು ಮೊಟ್ಟೆ ಚಾಪ್ಸ್ ಸವಿದಿದ್ದೀರಾ? ಹೌದು ಮೊಟ್ಟೆ ಬಳಸಿ ಮಾಡುವ ಚಾಪ್ಸ್ ಎಲ್ಲಾ ಖಾದ್ಯಕ್ಕಿಂತ ಅತ್ಯುತ್ತಮ ರುಚಿ ನೀಡಲಿದೆ. ಚಪಾತಿ, ಅನ್ನ, ಪರೋಟ, ದೊಸೆ ಹೀಗೆ ಎಲ್ಲಾ ಖಾದ್ಯದ ಜೊತೆ ಸವಿಯಲು ಇದು ಸಖತ್ ರುಚಿ ನೀಡಲಿದೆ.
ಹಾಗಾದ್ರೆ ಮೊಟ್ಟೆಯ ಚಾಪ್ಸ್ ಮಾಡುವುದು ಹೇಗೆ? ಮೊಟ್ಟೆ ಚಾಪ್ಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯಬೇಕು, ಇದಕ್ಕೆ ಮಸಾಲೆ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊಟ್ಟೆ ಚಾಪ್ಸ್ ಮಾಡಲು ಬೇಕಾಗುವ ಪದಾರ್ಥಗಳು
- ಮೊಟ್ಟೆ - 5
- ಈರುಳ್ಳಿ
- ಟೊಮೆಟೊ
- ಖಾರದ ಪುಡಿ
- ಧನಿಯಾ
- ನಿಂಬೆ ಹಣ್ಣು
- ಅರಶಿನ
- ತೆಂಗಿನಕಾಯಿ
- ಹಸಿ ಮೆಣಸು
- ಲವಂಗ
- ಚಕ್ಕೆ
- ಕಾಳು ಮೆಣಸು
- ಶುಂಠಿ
- ಬೆಳ್ಳುಳ್ಳಿ
- ಪುದಿನ ಎಲೆಗಳು
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಉಪ್ಪು
ಮೊಟ್ಟೆ ಚಾಪ್ಸ್ ಮಾಡುವ ವಿಧಾನ
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಈರುಳ್ಳಿ, ಹಸಿ ಮೆಣಸು ಹಾಕಿದ ಬಳಿಕ ಪುದಿನ ಎಲೆಗಳ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದನ್ನು ತೆಗೆದು ಬದಿಗಿಟ್ಟುಕೊಳ್ಳಿ.
ಈಗ ಅದೇ ಪಾತ್ರೆಗೆ ಎಣ್ಣೆ ಹಾಕಿ ಮತ್ತೆ ಈರುಳ್ಳಿ, ಟೊಮೆಟೋ, ಉಪ್ಪು, ಅರಶಿನ ಹಾಕಿ 2 ನಿಮಿಷ ಫ್ರೈ ಮಾಡಿ. ನಂತರ ಮೊದಲು ಹುರಿದುಕೊಂಡಿದ್ದ ಪುದಿನ ಎಲೆ, ಹಸಿಮೆಸಿನ ಫ್ರೈ ಅನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಇದಕ್ಕೆ ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ಉಪ್ಪು, ಚಕ್ಕೆ, ಲವಂಗ, ಕಾಳು ಮೆಣಸು ಬೆಳ್ಳುಳ್ಳಿ, ನೀರು ಹಾಕಿಕೊಂಡು ರುಬ್ಬಿಕೊಳ್ಳಿ.
ಈಗ ರುಬ್ಬಿಕೊಂಡ ಮಸಾಲೆಯನ್ನ ಒಲೆ ಮೇಲೆ ಇರುವ ಟೊಮೆಟೋ ಫ್ರೈ ಜೊತೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಧನಿಯಾ ಪುಡಿ, ಖಾರದ ಪುಡಿ ಹಾಕಿ ಕಾಯಲು ಬಿಡಿ. 2 ನಿಮಿಷ ಕುದಿಸಿದ ಬಳಿಕ ಬೇಯಿಸಿಕೊಂಡಿರುವ ಮೊಟ್ಟೆಯನ್ನು ಮಧ್ಯದಲ್ಲಿ ಸಣ್ಣದಾಗಿ ಕತ್ತರಿಸಿಕೊಂಡು ಅದನ್ನು ಈ ಮಸಾಲೆಗೆ ಹಾಕಿಕೊಳ್ಳಿ.
ನಿಮಗೆ ತೆಳು ಸಾರು ಬೇಕಾದರೆ ಸ್ವಲ್ಪ ನೀರು ಹಾಕಿಕೊಳ್ಳಿ. ಇಷ್ಟಲ್ಲಾ ಹಾಕಿ ಕುದಿಯಲು ಬಿಡಿ. 5 ನಿಮಿಷದಲ್ಲಿ ಇದು ರುಚಿ ರುಚಿಯ ಚಾಪ್ಸ್ ಆಗಿ ಬದಲಾಗುತ್ತದೆ. ಸಣ್ಣ ಉರಿಯಲ್ಲಿ ಆದರೆ 8 ನಿಮಿಷ ಕುದಿಸಿದರೆ ಸಾಕಾಗುತ್ತದೆ. ಇಷ್ಟಾದರೆ ಘಮ ಘಮಿಸುವ ಮೊಟ್ಟೆ ಚಾಪ್ಸ್ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications