Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಡುಗೆ ಗೊತ್ತೇ ಇಲ್ಲ ಎನ್ನುವವರು ಕೂಡ ಸುಲಭವಾಗಿ ಮಾಡಬಹುದು ಈ ಎಗ್ ಮಸಾಲ
ನಾವು ಬ್ಯಾಚುಲರ್ಸ್ ಅಡುಗೆ ಮಾಡೋಕೆ ಬರಲ್ಲ ಎನ್ನುವವರು ಈ ಎಗ್‌ಬುರ್ಜಿ ಧೈರ್ಯವಾಗಿ ಟ್ರೈ ಮಾಡಬಹುದು, ಇದನ್ನು ರೆಡಿ ಮಾಡಿ ಟೇಸ್ಟ್ ಮಾಡಿದರೆ ಅರೇ... ನಾನಾ ಇದನ್ನು ಮಾಡಿದ್ದು, ಇನ್ಮುಂದೆ ನನಗೆ ಎಗ್ ಮಸಾಲ ಅಥವಾ ಎಗ್‌ಬುರ್ಜಿ ಬರುತ್ತೆ ಅಂತ ಧೈರ್ಯವಾಗಿ ಹೇಳುತ್ತೀರಿ, ಅಷ್ಟು ಚೆನ್ನಾಗಿದೆ ಈ ರೆಸಿಪಿ. ಬನ್ನಿ ಈ ಸಿಂಪಲ್ ರೆಸಿಪಿ ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಮೊಟ್ಟೆ 4
ಕ್ಯಾಪ್ಸಿಕಂ ಅರ್ಧ (ಚಿಕ್ಕ ಗಾತ್ರದ್ದು ಆದರೆ 1 )
ಟೊಮೆಟೊ 1
ಎಣ್ಣೆ 2-3 ಚಮಚ
ಸ್ವಲ್ಪ ಅರಿಶಿಣ ಪುಡಿ
ಜೀರಿಗೆ ಪುಡಿ 1/2 ಚಮಚ
ಕೊತ್ತಂಬರಿ ಪುಡಿ 1 ಚಮಚ
ಸ್ವಲ್ಪ ಕೊತ್ತಂಬರಿ ಪುಡಿ 1 ಚಮಚ
ಗರಂ ಮಸಾಲ 1/2 ಚಮಚ
ಎಗ್ ಮಸಾಲ 1 ಚಮಚ (1 ಚಮಚ)
ಮಾಡುವ ವಿಧಾನ
- ಮೊಟ್ಟೆಯನ್ನು ಬೇಯಿಸಿ ಸಿಪ್ಪೆ ಸುಲಿದು ಇಡಿ.
- ಕ್ಯಾಪ್ಸಿಕಂ ಬಿಳಿ ಭಾಗ ತೆಗೆದು ಅದನ್ನು ಚಿಕ್ಕದಾಗಿ ಕತ್ತರಿಸಿಡಿ
- ಟೊಮೆಟೊದ ಬೀಜ ತೆಗೆದು ಕತ್ತರಿಸಿಡಿ
- ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ
- ನಂತರ ಕ್ಯಾಪ್ಸಿಕಂ ಹಾಕಿ ಒಂದು ನಿಮಿಷ ಫ್ರೈ ಮಾಡಿ
- ಬಳಿಕ ಟೊಮೆಟೊ ಹಾಕಿ
- ಈಗ ಮಸಾಲೆ ಸೇರಿಸಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ, ನಂತರ ಕಸೂರಿ ಮೇತಿ ಅಥವಾ ಕೊತ್ತಂಬರಿ ಸೊಪ್ಪು ಮಿಕ್ಸ್ ಮಾಡಿ
- ಬಳಿಕ ಬೇಯಿಸಿದ ಮೊಟ್ಟೆ ಹಾಕಿ ಮಿಕ್ಸ್ ಮಾಡಿದರೆ ಮುಗೀತು, ಮೊಟ್ಟೆ ರೋಸ್ಟ್ ರೆಡಿ.
ಇತರ ಸಲಹೆ
ಇಲ್ಲಿ ನೀಡಿರುವುದು ಅತ್ಯಂತ ಸರಳ ರೆಸಿಪಿ, ಬ್ಯಾಚುಲರ್ಸ್‌ಗೆ ಟ್ರೈ ಮಾಡಲು
ಪರ್ಫೆಕ್ಟ್ ರೆಸಿಪಿ
ನಿಮಗೆ ಉಪ್ಪು ಹಾಕುವಾಗ ಕನ್ಫ್ಯೂಸ್ ಆದರೆ ಚಿಕ್ಕ ಚಮಚದಲ್ಲಿ ಅರ್ಧ ಚಮಚಕ್ಕಿಂತಲೂ
ಕಡಿಮೆ ಉಪ್ಪು ಹಾಕಿ ಮಿಕ್ಸ್ ಮಾಡಿ, ಬೇಕಿದ್ದರೆ ಇನ್ನು ಸ್ವಲ್ಪ
ಸೇರಿಸಬಹುದು.
ಇನ್ನು ಇದೇ ಎಗ್ ಬುರ್ಜಿಯನ್ನು ಈ ರೀತಿಯೂ ಟ್ರೈ ಮಾಡಬಹುದು,
ಅದಕ್ಕೆ ಈ ಮೇಲಿನ ಸಾಮಗ್ರಿ ಜೊತೆ ಇನ್ನೂ ಸ್ವಲ್ಪ ಸಾಮಗ್ರಿ ಕೂಡ
ಬೇಕಾಗುವುದು
1 ಇಂಚಿನಷ್ಟು ದೊಡ್ಡದಿರುವ ಶುಂಠಿ (ಚಿಕ್ಕದಾಗಿ ಕತ್ತರಿಸಿ)
ಈರುಳ್ಳಿ 2
10-12 ಬೆಳ್ಳುಳ್ಳಿ(ಅದು ಕೂಡ ಚಿಕ್ಕದಾಗಿ ಕತ್ತರಿಸಬೇಕು)
2 ಹಸಿ ಮೆಣಸು
ಸ್ವಲ್ಪ ಕರಿಬೇವು
ಸಾಸಿವೆ
ಮಾಡುವ ವಿಧಾನ
ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ
ಮಾಡುವಾಗ ಕರಿಬೇವು ಹಾಕಿ, ನಂತರ ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು ಹಾಕಿ 2
ನಿಮಿಷ ಫ್ರೈ ಮಾಡಿ, ನಂತರ ಮೇಲೆ ತಿಳಿಸಿದ ಸಾಮಗ್ರಿ ಹಾಕಿ ಮಿಕ್ಸ್ ಮಾಡಿ, ಬಳಿ
ಮೊಟ್ಟೆ ಹಾಕಿ ಮಿಕ್ಸ್ 5 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ ಸ್ಟೌವ್ ಆಫ್
ಮಾಡಿದರೆ ಮೊಟ್ಟೆ ಬುರ್ಜಿ ರೆಡಿ.



Click it and Unblock the Notifications