Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ನೆಕ್ಸ್ಟ್ ಲೆವೆಲ್ ರುಚಿಯ ಎಗ್ ಬಿರಿಯಾನಿ ಇದು..! ಹೋಟೆಲ್ ರುಚಿಯ ರೆಸಿಪಿ
ಬಿರಿಯಾನಿ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಾಂಸಹಾರ ಪ್ರಿಯರಿಗೆ ಬಿರಿಯಾನಿ ಅಂದ್ರೆ ಬಾಯಲ್ಲಿ ನೀರು ಬರುತ್ತೆ. ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ಜೊತೆಗೆ ಮೊಟ್ಟೆ ಬಿರಿಯಾನಿ ಕೂಡ ಸವಿಯಲು ಬಲು ರುಚಿಕರವಾಗಿರುತ್ತೆ. ಹಾಗೆ ಸಸ್ಯಹಾರಿಗಳು ಕೂಡ ಮೊಟ್ಟೆ ಬಿರಿಯಾನಿ ಸವಿಯುತ್ತಾರೆ. ಮಕ್ಕಳು ಕೂಡ ಎಗ್ ಬಿರಿಯಾನಿ ಅಂದ್ರೆ ಇಷ್ಟಪಡುತ್ತಾರೆ.
ಸಾಮಾನ್ಯವಾಗಿ ಮೊಟ್ಟೆಯನ್ನು ಬೇಯಿಸಿ ಕುಕ್ಕರ್‌ನಲ್ಲಿ ಬಿರಿಯಾನಿ ಮಾಡಿದರೆ ಸಿಂಪಲ್ ಎಗ್ ಬಿರಿಯಾನಿ ರೆಡಿಯಾಗಿಬಿಡುತ್ತದೆ. ಆದ್ರೆ ನಾವಿಂದು ಅದ್ಭುತ ರುಚಿಯಲ್ಲಿ ಸಿಂಪಲ್ ಆಗಿ ಕಡಿಮೆ ಸಮಯದಲ್ಲಿ, ಕಡಿಮೆ ವಸ್ತುಗಳ ಬಳಸಿಕೊಂಡು ಹೊಸ ವಿಧಾನದಲ್ಲಿ ಮೊಟ್ಟೆ ಬಿರಿಯಾನಿ ಮಾಡುವ ಕುರಿತು ತಿಳಿದುಕೊಳ್ಳೋಣ. ಅದರಲ್ಲೂ ಹೋಟೆಲ್ ರುಚಿ ನೀಡುವಂತಹ ಬಿರಿಯಾನಿ ನಾವಿಂದು ಮಾಡೋಣ.

ಮನೆಯಲ್ಲಿ ಬಿರಿಯಾನಿ ಮಾಡಲು ಹಲವರು ಇಷ್ಟಪಡುವುದಿಲ್ಲ. ಕೆಲಸ ಜಾಸ್ತಿಯಾಗುತ್ತೆ, ಹೆಚ್ಚು ಸಮಯ ಹಿಡಿಯುತ್ತದೆ ಎಂಬುದು ಅವರ ದೂರಾಗಿರುತ್ತೆ. ಆದ್ರೆ ನಾವಿಂದು ಕಡಿಮೆ ಸಮಯದಲ್ಲಿ ಹೇಗೆ ಎಗ್ ಬಿರಿಯಾನಿ ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಅದರಲ್ಲೂ ರುಚಿಕರವಾಗಿ ಹುಡು ಹುಡಿಯಾದ ಎಗ್ ಬಿರಿಯಾನಿ ರೆಸಿಪಿ ಕುರಿತು ತಿಳಿಯೋಣ.
ಈ ಎಗ್ ಬಿರಿಯಾನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಗ್ ಬಿಡಿಯಾನಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸ್ಪೆಷಲ್ ಎಗ್ ಬಿರಿಯಾನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೊಟ್ಟೆ - 4
- ಅಕ್ಕಿ - 2 ಕಪ್
- ಕಸೂರಿ ಮೇಥಿ - 1 tbs
- ಪಲಾವ್ ಎಲೆ
- ಚಕ್ರಮೊಗ್ಗು
- ದಾಲ್ಚಿನ್ನಿ
- ಏಲಕ್ಕಿ
- ಲವಂಗ
- ಮರಾಠಿ ಮೊಗ್ಗು
- ಈರುಳ್ಳಿ 2
- ಟೊಮೆಟೊ - 1
- ಬೆಳ್ಳುಳ್ಳಿ
- ಶುಂಠಿ
- ಕೊತ್ತಂಬರಿ ಸೊಪ್ಪು
- ಪುದೀನ ಎಲೆಗಳು
- ಅರಿಶಿನ ಪುಡಿ
- ಖಾರದ ಪುಡಿ
- ಧನಿಯಾ ಪುಡಿ
- ಗರಂ ಮಸಾಲಾ ಪುಡಿ
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಸ್ಪೆಷಲ್ ಎಗ್ ಬಿರಿಯಾನಿ ಮಾಡುವ ಸುಲಭದ ವಿಧಾನವೇನು?
ಮೊದಲು 4 ಮೊಟ್ಟೆಯನ್ನು ಬೇಯಿಸಿಕೊಂಡು ಸಿಪ್ಪೆ ತೆಗೆದು ಸೀಳಿಕೊಂಡು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಚಕ್ಕೆ, ಲವಂಗ, ಪಲಾವ್ ಎಲೆ, ಮರಾಠಿ ಮೊಗ್ಗು, ಚಕ್ರಮೊಗ್ಗು, ಏಲಕ್ಕಿ ಹಾಕಿಕೊಂಡು ಫ್ರೈ ಮಾಡಿ. ನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಈರುಳ್ಳಿ ಹಾಕಿ 1 ನಿಮಿಷ ಫ್ರೈ ಮಾಡಿ.
ಈಗ ಒಲೆ ಮೇಲಿನ ಮಸಾಲೆಗೆ ಅರಶಿಣ, ಧನಿಯಾ, ಖಾರದ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಮಿಕ್ಸಿ ಜಾರ್‌ಗೆ ಟೊಮೆಟೋ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಪುದಿನ, ಉಪ್ಪು, ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಈ ರುಬ್ಬಿದ ಮಸಾಲೆಯನ್ನು ಕುಕ್ಕರ್‌ಗೆ ಹಾಕಿಕೊಂಡು ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ 3 ನಿಮಿಷ ಫ್ರೈ ಮಾಡಿ ಕುದಿಯಲು ಬಿಡಿ.
ಈ ಮಸಾಲೆ ಕುದಿಬಂದು ಎಣ್ಣೆ ಬಿಟ್ಟ ಬಳಿಕ ಅಳತೆ ಗ್ಲಾಸ್‌ನಲ್ಲಿ 4 ಕಪ್ ನೀರು ಹಾಕಿಕೊಳ್ಳಿ. ಈಗ ಒಂದು ಬೌಲ್‌ನಲ್ಲಿ ಅರ್ಧ ಗಂಟೆ ಮೊದಲು ಅಕ್ಕಿಯನ್ನು ತೊಳೆದು ನೆನೆಸಿಡಬೇಕು. ನೀವು ಅಳತೆ ಗ್ಲಾಸ್‌ನಲ್ಲಿ 2 ಕಪ್ ಅಕ್ಕಿ ನೆನೆಸಿಡಬೇಕು. ನಂತರ ಕುಕ್ಕರ್‌ಗೆ ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಕುಕ್ಕರ್‌ಗೆ ಬಿರಿಯಾನಿ ಪೌಡರ್, ಉಪ್ಪು ಹಾಕಿ ಮಿಕ್ಸ್ ಮಾಡಿ ಮತ್ತೆ ಕುದಿಯಲು ಬಿಡಿ.
ಕುದಿಯಲು ಆರಂಭಿಸಿದಾಗ ಬೇಯಿಸಿದ ಮೊಟ್ಟೆಯನ್ನು ಇದಕ್ಕೆ ಹಾಕಿ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. 2 ಸೀಟಿ ಹೊಡೆದ ಬಳಿಕ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಅದ್ಭುತ ರುಚಿಯ ಎಗ್ ಬಿರಿಯಾನಿ ರೆಡಿಯಾಗಿರುತ್ತೆ ನೀವು ಕೂಡ ಮನೆಯಲ್ಲಿ ಈ ವಿಧಾನದಲ್ಲಿ ಎಗ್ ಬಿರಿಯಾನಿ ಮಾಡಿ ನೋಡಿ.



Click it and Unblock the Notifications