Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಥಟ್ ಅಂತ ಮಾಡಿ ವೆಜ್ ಮಸಾಲ ಖುಷ್ಕ ರೈಸ್: ಈ ವಿಧಾನದಲ್ಲಿ ಎಂದಾದ್ರು ಮಾಡಿದ್ದೀರಾ?
ರೈಸ್‌ನಿಂದ ಮಾಡುವಂತಹ ಹಲವು ಬಗೆಯ ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತವೆ. ಅದ್ರಲ್ಲೂ ನೀವು ಸಹ ಬೆಳಗ್ಗೆ ತಿಂಡಿಗೆ ಪಲಾವ್, ಚಿತ್ರಾನ್ನ, ಬಾತ್‌ಗಳು, ಪುಳಿಯೋಗರೆ ಸೇರಿದಂತೆ ಹಲವು ರೀತಿ ಖಾದ್ಯ ಸವಿದಿರುತ್ತೀರಿ. ಅದರಂತೆ ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಆಗಿ ಫ್ರೈಡ್ ರೈಸ್, ಎಗ್‌ರೈಸ್, ಚಿಕನ್ ರೈಸ್‌ನಂತರ ಖಾದ್ಯಗಳನ್ನು ಕೂಡ ಸವಿದಿರುತ್ತೀರಿ.
ಇನ್ನು ರೈಸ್‌ನಿಂದ ಮಾಡುವಂತಹ ಹಲವು ಖಾದ್ಯಗಳ ಪೈಕಿ ಬಿರಿಯಾನಿ ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ನಾನ್ ವೆಜ್ ಹಾಗೂ ವೆಜ್ ಬಿರಿಯಾನಿಗಳೆಂದರೆ ಬಾಯಲ್ಲಿ ನೀರು ಬರುವುದು ಸಹಜ. ಆದ್ರೆ ನಾವಿಂದು ರೈಸ್‌ನಿಂದ ಮಾಡುವಂತಹ ವೆಜ್ ಖುಷ್ಕ ಕುರಿತಾಗಿ ತಿಳಿದುಕೊಳ್ಳೋಣ. ವೆಜ್ ಖುಷ್ಕ ಸವಿಯೋಕೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಸುಲಭವಾಗಿ ಮಾಡಿ ಮುಗಿಬಹುದಾದ ಈ ಖಾದ್ಯವನ್ನ ಬೆಳಗ್ಗೆ ತಿಂಡಿಗೆ ಹಾಗೆ ಊಟದ ಸಮಯದೊಂದಿಗೆ ಕೂಡ ಸವಿಯಬಹುದು.

ನಾನ್‌ವೆಜ್ ಖುಷ್ಕ ಎಲ್ಲರಿಗೂ ಇಷ್ಟವಾಗುವಂತೆ ಈ ವೆಜ್ ಖುಷ್ಕ ಕೂಡ ಇಷ್ಟವಾಗುತ್ತೆ. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ. ಮಸಾಲೆ ಭರಿತ ಈ ಖುಷ್ಕ ಇದ್ದರೆ ಎಲ್ಲರ ಬಾಯಲ್ಲು ನೀರು ಬರೋದು ಖಚಿತ. ಹಾಗಾದ್ರೆ ಅತೀ ಕಡಿಮೆ ಸಮಯದಲ್ಲಿ ವೆಜ್ ಖುಷ್ಕ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ವೆಜ್ ಖುಷ್ಕ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತಾದ ವಿವರಣೆ ನೋಡಿ.
ವೆಜ್ ಖುಷ್ಕ ಮಾಡಲು ಬೇಕಾಗುವ ವಸ್ತುಗಳಿವು
- ಅಕ್ಕಿ
- ಈರುಳ್ಳಿ
- ಟೊಮೇಟೊ
- ಎಣ್ಣೆ
- ತುಪ್ಪ
- ಮೊಸರು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಚಕ್ಕೆ
- ಲವಂಗ
- ಏಲಕ್ಕಿ
- ಕಲ್ಲು ಹೂವು
- ಸ್ಟಾರ್ ಮೊಗ್ಗು
- ಕಸೂರಿ ಮೆಂತ್ಯ
- ಸೋಂಪು ಕಾಳು
- ಪುದಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸಿನಕಾಯಿ
- ಅಚ್ಚಕಾರದ ಪುಡಿ
- ಗರಂ ಮಸಾಲ
- ಉಪ್ಪು ರುಚಿಗೆ ತಕ್ಕಷ್ಟು
ವೆಜ್ ಖುಷ್ಕ ಮಾಡುವ ಸುಲಭದ ವಿಧಾನವೇನು?
- ಮೊದಲು ಒಂದು ಕಪ್ ಅಕ್ಕಿ ತೆಗೆದುಕೊಂಡು ತೊಳೆದು ಇಟ್ಟುಕೊಳ್ಳಿ. ಜೀರಾ ರೈಸ್ ಬಳಸಿದರೆ ನೆನೆಸಿಡುವ ಅವಶ್ಯಕತೆ ಇಲ್ಲ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ, ಚಕ್ಕೆ, ಲವಂಗ, ಪಲಾವ್ ಎಲೆ, ಚಕ್ರಮೊಗ್ಗು, ಏಲಕ್ಕಿ, ಸೋಪುಕಾಳು, ಕಸೂರಿ ಮೇಥಿ ಹಾಕಿ ಬಿಸಿ ಮಾಡಿಕೊಳ್ಳಿ.
- ಈಗ ಒಂದು ಈರುಳ್ಳಿಯನ್ನು ಹೆಚ್ಚಿಕೊಂಡು ಹಾಕಿ, ಹಸಿ ಮೆಣಸು, ಪುದಿನ, ಕೊತ್ತಂಬರಿ ಸೊಪ್ಪು ಹಾಕಿ 4 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
- ಈಗ ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಿಸಿ ಮಾಡಿ. ಅನಂತರ ಚಿಕ್ಕದಾಗಿ ಕತ್ತರಿಸಿಕೊಂಡ 2 ಟೊಮೆಟೋ ಹಣ್ಣು, ಉಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿ.
- 5 ನಿಮಿಷ ಬೇಯಿಸಿಕೊಂಡ ಬಳಿಕ ಈಗ ಖಾರದ ಪುಡಿ, ಗರಂ ಮಸಾಲ ಪುಡಿ, ಚಿಕನ್ ಮಸಾಲ ಪುಡಿ ಸಹ ಹಾಕಿ 1 ನಿಮಿಷ ಮಿಕ್ಸ್ ಮಾಡಿಕೊಳ್ಳಿ.
- ಈಗ ಎರಡು ಸ್ಪೂನ್ ಮೊಸರು ಹಾಕಿ ಮತ್ತೆ 2 ನಿಮಿಷ ಬಿಸಿ ಮಾಡಿಕೊಳ್ಳಿ. ಹಾಗೆ ಎರಡು ಕಪ್ ನೀರು ಹಾಕಿ ಮಿಕ್ಸ್ ಮಾಡಿ ಕುದಿಬರಲು ಬಿಡಿ.
- ನೀರು ಕುದಿಬಂದ ಬಳಿಕ ಈಗ ನೆನೆಸಿಟ್ಟ ಅಕ್ಕಿಯನ್ನು ಕುಕ್ಕರ್‌ಗೆ ಹಾಕಿ ಮತ್ತೆ ಮಿಶ್ರಣ ಮಾಡಿಕೊಂಡು ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ವೆಜ್ ಮಸಾಲ ಖುಷ್ಕ ರೈಸ್ ಸಿದ್ದವಾಗುತ್ತೆ.
- ಬಹಳ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದಾದ ಖುಷ್ಕ ರೈಸ್ ಇದಾಗಿದೆ. ನೀವು ಕೂಡ ಒಮ್ಮೆ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications