Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಸ್ತೆ ಬದಿಯ ಕಾರ್ನ್ ಚಾಟ್ ಮನೆಯಲ್ಲೇ ಮಾಡಿ! ಬಾಯಲ್ಲಿ ನೀರು ತರಿಸೋದು ಖಚಿತ!
ನಿತ್ಯದ ಹವಾಮಾನ ಬದಲಾವಣೆಯ ನಡುವೆ ಮಳೆ ಹಾಗೂ ಚಳಿ ಎರಡೂ ಕೂಡ ನೋಡುತ್ತಿದ್ದೇವೆ. ಹಾಗೆ ಈ ಸಮಯದಲ್ಲಿ ಬಾಯಿ ರುಚಿ ಹೆಚ್ಚಿಸುವಂತಹ ಯಾವುದಾದರು ತಿಂಡಿ, ಖಾದ್ಯ, ಸ್ನ್ಯಾಕ್ಸ್ ಇದ್ದರೆ ಎಲ್ಲರ ಬಾಯಲ್ಲೂ ನೀರು ಬರಲಿದೆ. ಅದ್ರಲ್ಲೂ ಜೋಳ ಬಳಸಿ ಮಾಡುವಂತಹ ಖಾರ ಖಾರದ ಮಸಾಲ ಸ್ನ್ಯಾಕ್ಸ್ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.
ನೀವು ಸಹ ರಸ್ತೆ ಬದಿಯಲ್ಲಿ ಮಾರಾಟ ಮಾಡುವಂತಹ ಖಾರ ಜೋಳ ಸೇವಿಸಿರುತ್ತೀರಿ. ಈ ಕಾರ್ನ್ ಚಾಟ್ ಅದ್ಭುತ ರುಚಿ ಹಾಗೆ ಸವಿದಷ್ಟು ರುಚಿ ಹೆಚ್ಚಿಸುತ್ತೆ. ಕೆಲವೊಮ್ಮೆ ಸ್ವೀಟ್ ಆಗಿ ಹಾಗೆ ಖಾರವಾಗಿ ಮಾಡಿ ಸವಿಯಬಹುದು. ಕಪ್‌ನಲ್ಲಿ ಹಾಕಿ ಸವಿಯುವುದು ನಿಮಗೂ ಇಷ್ಟವಾಗಬಹುದು. ಅದ್ರಲ್ಲೂ ಚಳಿಯಲ್ಲಿ ಹಾಗೆ ಮಳೆ ಬರುವ ಸಮಯದಲ್ಲಿ ಈ ಸ್ನ್ಯಾಕ್ಸ್ ಸವಿಯೋಕೆ ಇಷ್ಟಪಡುತ್ತಾರೆ.

ಹೀಗಾಗಿ ನಾವಿಂದು ಈ ರಸ್ತೆ ಬದಿಯಲ್ಲಿ ಸವಿಯಲು ಸಿಗುವಂತಹ ಈ ಕಾರ್ನ್ ಚಾಟ್ ಅನ್ನು ಮನೆಯಲ್ಲಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಎಂಬುದನ್ನು ತಿಳಿದುಕೊಳ್ಳೋಣ. ಹಾಗೆ ಸಂಜೆ ಸಮಯದಲ್ಲಿ ಜೋಳ ಖರೀದಿಸಿ ತಂದು ಮನೆ ಮಂದಿಯಲ್ಲ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಕಾರ್ನ್ ಚಾಟ್ ಮಾಡಲು ಬೇಕಾಗುವ ವಸ್ತುಗಳು
- ಜೋಳ
- ಖಾರದ ಪುಡಿ
- ಜೀರಿಗೆ ಪುಡಿ
- ಉಪ್ಪು
- ಬೆಣ್ಣೆ
- ಚಾಟ್ ಮಸಾಲ
ಕಾರ್ನ್ ಚಾಟ್ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಎರಡು ಕಪ್ ನೀರು ಹಾಕಿ ಅದಕ್ಕೆ ಅಂಗಡಿಯಿಂದ ತಂದ ಜೋಳ ಬಿಡಿಸಿ ಹಾಕಿಕೊಂಡು ಕುದಿಬರಲು ಬಿಡಿ. ಕುದಿಬರಲು 5ರಿಂದ 6 ನಿಮಿಷ ಬಿಟ್ಟು ನಂತರ ಒಲೆ ಆಫ್ ಮಾಡಿ ಕಾರ್ನ್ ತೆಗೆಯಿರಿ. ಈಗ ಮತ್ತೊಂದು ಬಾಣಲೆ ಒಲೆ ಮೇಲೆ ಇಟ್ಟು ಮತ್ತೆ ಜೋಳಗಳ ಹಾಕಿಕೊಂಡು 1 ಸ್ಪೂನ್ ಬೆಣ್ಣೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಬೆಣ್ಣೆ ಕರಗಿದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಹಾಗೆ ಬೇಯಿಸಿದ ಈ ಜೋಳವನ್ನು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಖಾರದ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲ, ಉಪ್ಪು, ನಿಂಬೆ ಹುಳಿ ಹಿಂಡಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಿಮಗೆ ಖಾರ ಬೇಕಿದ್ದರೆ ಹೆಚ್ಚು ಖಾರ ಹಾಗೆ ಕಡಿಮೆ ಬೇಕಿದ್ದರೆ ಕಡಿಮೆ ಖಾರ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಸ್ವೀಟ್ ಕಾರ್ನ್ ಚಾಟ್
ರೆಡಿಯಾಗುತ್ತದೆ. ಇದನ್ನು ಎಲ್ಲರೂ ಸವಿಯಲು ಇಷ್ಟಪಡುತ್ತಾರೆ. ಹಾಗೆ ಒಮ್ಮೆ ನೀವು
ಮಾಡಿ ಸವಿದರೆ ನಿತ್ಯವೂ ಇದನ್ನೇ ಮಾಡಿ ಸವಿಯಲು ಮುಂದಾಗುತ್ತೀರಿ. ಹಾಗಾದ್ರೆ ನೀವು
ಕೂಡ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.
ಮನೆಯಲ್ಲಿ ಮಕ್ಕಳಿದ್ದರೆ ಅವರಿಗೂ ಇಷ್ಟವಾಗುತ್ತೆ. ಹಾಗೆ ನೀವು ಮನೆಯಲ್ಲಿ ಫ್ರೀ
ಆಗಿದ್ದರೆ ಕೂಡ ಈ ಸ್ನ್ಯಾಕ್ಸ್ ಮಾಡಿ ಸವಿಯಬಹುದು.
ಇದು ನೀವು ರಸ್ತೆಯ ಬದಿಯಲ್ಲಿ ನೀವು ಸವಿಯುವಂತಹ ರುಚಿಯಲ್ಲೇ ಇರಲಿದೆ. ಹಾಗೆ ಮನೆ ಮಂದಿಯಲ್ಲ ಕುಳಿತು ಸವಿಯಲು ಮುಂದಾಗಬಹುದು. ಬಾಯಿ ರುಚಿ ಕೆಟ್ಟಿದ್ದರಂತು ಇದು ನಿಮಗೆ ಅದ್ಭುತ ಎನಿಸಲಿದೆ. ಬಹಳ ಕಡಿಮೆ ವಸ್ತುಗಳ ಬಳಸಿ ಕಡಿಮೆ ಸಮಯದಲ್ಲಿ ಇದನ್ನು ಮಾಡಿ ಮುಗಿಸಬಹುದು.



Click it and Unblock the Notifications