Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2 ವಸ್ತು ಇದ್ರೆ 5 ನಿಮಿಷದೊಳಗೆ ಈ ಬರ್ಫಿ ಮಾಡಿ; ಎಷ್ಟು ಸುಲಭ ಗೊತ್ತಾ?
ಹಬ್ಬದಲ್ಲಿ ನೀವು ರುಚಿ ರುಚಿಯಾದ ಸಿಹಿ ಮಾಡಿ ಸವಿಯೋದು ಸರ್ವೇ ಸಾಮಾನ್ಯ. ಹಾಗೆ ಸುಲಭವಾಗಿ ಮಾಡಿ ಸವಿಯುವ ಯಾವುದಾದರು ಸಿಹಿಯನ್ನು ನೀವು ಮಾಡಲು ಮುಂದಾಗುತ್ತಿರುತ್ತೀರಿ. ಇನ್ನು ಈ ಹಬ್ಬದ ಸಮಯದಲ್ಲಿ ಇಲ್ಲವೆ ಮನೆಯಲ್ಲಿ ಶುಭ ಕಾರ್ಯವಿದ್ದಾಗ ಅಥವಾ ಪೂಜೆ, ಅತಿಥಿಗಳ ಆಗಮನದ ಹಿನ್ನಲೆಯಲ್ಲೂ ನೀವು ಸಿಹಿ ತಿಂಡಿ ಮಾಡಿ ಸವಿಯಲು ಮುಂದಾಗೋದು ಸಾಮಾನ್ಯ.
ಇನ್ನು ಹುರಿಗಡಲೆಯಿಂದ ಅದ್ಭುತ ರುಚಿಯ ಬರ್ಫಿ ಮಾಡಬಹುದು ಎಂಬುದು ನಿಮಗೆ ಗೊತ್ತಾ? ನೀವು ರುಚಿ ರುಚಿಯಾದ ಹಲವು ಬರ್ಫಿ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ಬೇಕರಿಗಳಲ್ಲಿ ಹಾಗೆ ಅಂಗಡಿಗಳಲ್ಲಿ ಸಿಗುವ ರುಚಿ ರುಚಿಯ ಹಾಗೆ ಬಗೆ ಬಗೆಯ ಬರ್ಫಿಗಳು ಬಾಯಲ್ಲಿ ನೀರು ತರಿಸುತ್ತವೆ. ಆದ್ರೆ ಮನೆಯಲ್ಲಿ ಎಂದಾದ್ರು ನೀವು ಬರ್ಫಿ ಮಾಡಿ ಸವಿದಿದ್ದೀರಾ? ಹುರಿಗಡಲೆ ಬಳಸಿಕೊಂಡು ಮಾಡುವ ಬರ್ಫಿಯಂತು ಸವಿಯೋಕೆ ಬಹಳ ರುಚಿ ತರಲಿದೆ. ಬಾಯಲ್ಲಿ ಇಟ್ಟರೆ ಸಾಕು ಕರಗುವುದು ನೋಡಬಹುದು.

ಹಾಗಾದ್ರೆ ಮನೆಯಲ್ಲಿ ನಾವಿಂದು ಈ ರುಚಿಕರ ಬರ್ಫಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಹುರಿಗಡಲೆ ಬರ್ಫಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಹೇಗೆಲ್ಲಾ ತಯಾರಿ ಮಾಡಿಕೊಳ್ಳಬೇಕು ಅನ್ನೋದನ್ನು ತಿಳಿದುಕೊಳ್ಳೋಣ.
ಹುರಿಗಡಲೆ ಬರ್ಫಿ ಮಾಡಲು ಬೇಕಾಗುವ ವಸ್ತುಗಳು
- ಹುರಿಗಡಲೆ
- ತುಪ್ಪ
- ಸಕ್ಕರೆ
- ಏಲಕ್ಕಿ
ಹುರಿಗಡಲೆ ಬರ್ಫಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಒಂದು ಕಪ್ ಹುರಿಗಡಲೆ ಸೇರಿಸಿ 2 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಸ್ವಲ್ಪ ಗರಿಗರಿಯಾಗಬೇಕು. ನಂತರ ಇದನ್ನು ತೆಗೆದು ತಣ್ಣಗಾಗಲು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಹುರಿಗಡಲೆಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಅದಕ್ಕೆ 2 ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿ ಪುಡಿ ಮಾಡಿಕೊಳ್ಳಬೇಕು.
ಹಾಗೆ ಅದೇ ಕಪ್ ಅಳತೆಯಲ್ಲಿ ಈಗ ಒಂದು ಕಪ್ ಸಕ್ಕರೆ ತೆಗೆದುಕೊಂಡು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ 1 ಕಪ್ ಅಳತೆಯ ತುಪ್ಪ ಹಾಕಿಕೊಳ್ಳಿ. ಹಾಗೆ ಇದಕ್ಕೆ ರುಬ್ಬಿಕೊಂಡಿದ್ದ ಹುರಿಗಡಲೆ ಪುಡಿಯನ್ನು ಇದಕ್ಕೆ ಹಾಕಿಕೊಂಡು ಬಳಿಕ ಸಕ್ಕರೆ ಪುಡಿ ಸಹ ಇದಕ್ಕೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ.
3 ನಿಮಿಷ ಮಿಶ್ರಣ ಮಾಡಿದ ಬಳಿಕ ಹುಡಿ ಹುಡಿಯಾಗಿ ಬಂದಾಗ ಒಲೆ ಆಫ್ ಮಾಡಿ. ಈಗ ಒಂದು ತಟ್ಟೆಗೆ ತುಪ್ಪ ಹಚ್ಚಿಕೊಂಡು ಅದಕ್ಕೆ ಈ ಹಿಟ್ಟನ್ನು ಹಾಕಿ ಮೇಲಿನಿಂದ ಒತ್ತಿ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಇದನ್ನು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಹುರಿಗಡಲೆ ಬರ್ಫಿ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ನೋಡಿ. ಬಹಳ ಸುಲಭವಾಗಿ ಮಾಡಿ ಸವಿಯಬಹುದಾದ ತಿಂಡಿ ಇದಾಗಿರಲಿದೆ.
ಈ ಸಿಹಿಯನ್ನು ವಿಶೇಷ ದಿನಗಳಲ್ಲಿ ಮಾಡಬಹುದು. ಹಾಗೆ ಎಲ್ಲರಿಗೂ ಇದು ಇಷ್ಟವಾಗುತ್ತೆ, ಮಕ್ಕಳಿಗಂತು ಬಾಯಲ್ಲಿ ನೀರು ತರಿಸಲಿದೆ.



Click it and Unblock the Notifications