Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇದಕ್ಕಿಂತ ಸುಲಭವಾಗಿ ತಿಳಿಸಾರು ಮಾಡಲು ಸಾಧ್ಯವೇ ಇಲ್ಲ..! 5 ನಿಮಿಷ ಸಾಕಾಗುತ್ತೆ!
ನೀವು ಮನೆಯಲ್ಲಿ ಊಟದ ಸಮಯಕ್ಕೆ ಏನಾದರು ವಿಶೇಷವಾದ ಖಾದ್ಯ ಮಾಡುವುದು ಸಾಮಾನ್ಯ. ಹಾಗೆ ಊಟಕ್ಕೆ ಅದ್ಭುತ ರುಚಿಯಲ್ಲಿ ನೀವು ಸಾಂಬಾರ್, ರಸಂ ಮಾಡುವುದು ಕೂಡ ನೋಡಬಹುದು. ಅದರಲ್ಲೂ ರಸಂ ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ರಸಂ ಅನ್ನು ನೀವು ಊಅಟದ ಜೊತೆಗೆ ಅಥವಾ ಊಟದ ಕೊನೆಯಲ್ಲಿ ಸವಿಯಲು ಬಳಸುತ್ತೀರಿ.
ಹಬ್ಬದ ಸಮಯದಲ್ಲಿ ಊಟದ ಜೊತೆಗೆ ತರಕಾರಿ ಸಾಂಬಾರ್ ಹಾಗೆ ಪಲ್ಯದ ಜೊತೆಗೆ ಮೊಸರು ಇದ್ದಾಗ ಕೊನೆಯಲ್ಲಿ ಊಟದ ರುಚಿ ಹೆಚ್ಚಿಸುವುದು ರಸಂ ಆಗಿರುತ್ತೆ. ರಸಂ ಅನ್ನು ಊಟದ ಜೊತೆಗೆ ಮಾತ್ರವಲ್ಲ ಹಾಗೆಯೇ ಲೋಟದಲ್ಲಿ ಹಾಕಿ ಕುಡಿಯಲು ಕೂಡ ಬಳಸುವುದು ನೋಡಬಹುದು. ಹಾಗೆ ಹೋಟೆಲ್‌ನಲ್ಲಿ, ದೇವಾಲಯದಲ್ಲಿ, ಮದುವೆ ಮನೆಯಂತಹ ಸಮಾರಂಭದಲ್ಲಿ ನೀವು ರುಚಿ ರುಚಿಯ ರಸಂ ಸವಿದು ಅದನ್ನು ಮನೆಯಲ್ಲಿಯೂ ಮಾಡಿ ಸವಿಯುವ ಮನಸ್ಸು ಮಾಡಿರುತ್ತೀರಿ.

ಹಾಗೆ ಈ ರಸಂ ಮಾಡುವುದು ಕೂಡ ಬಹಳ ಸುಲಭ ಎಂಬುದನ್ನು ಕೂಡ ನೀವು ತಿಳಿದಿದ್ದೀರಿ. ಹಾಗೆ ನೀವು ಸಹ ಹಲವು ರೀತಿಯಲ್ಲಿ ರಸಂ ಮಾಡಿರುತ್ತೀರಿ. ಆದ್ರೆ ನಾವಿಂದು ಸುಲಭವಾಗಿ ತಿಳಿ ಸಾರು ಮಾಡುವ ಕುರಿತು ತಿಳಿಯೋಣ, ಇದಕ್ಕಿಂತ ಸುಲಭವಾಗಿ ನೀವು ತಿಳಿ ಸಾರು ಮಾಡಲು ಸಾಧ್ಯವಿಲ್ಲ. ಹಾಗಾದ್ರೆ ರಸಂ ಮಾಡುವ ವಿಧಾನವೇನು? ಈ ತಿಳಿ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಸಂ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮೆಣಸು
- ಜೀರಿಗೆ
- ಹುಣಸೆ ಹಣ್ಣು
- ಬೆಳ್ಳುಳ್ಳಿ
- ಒಣ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಟೊಮೊಟೊ
- ಎಣ್ಣೆ
- ಸಾಸಿವೆ
- ಬೆಲ್ಲದ ಪುಡಿ
- ಇಂಗು
- ಬೆಲ್ಲ
- ಅರಿಶಿಣ ಪುಡಿ
- ಉಪ್ಪು
ರಸಂ ಮಾಡುವ ಅತ್ಯಂತ ಸುಲಭದ ವಿಧಾನವೇನು?
ಮೊದಲಿಗೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಜೀರಿಗೆ, ಕಾಳು ಮೆಣಸು, ಬೆಳ್ಳುಳ್ಳಿ, ಹುಣಸೆ ಹುಣ್ಣು (ನಿಂಬೆ ಹಣ್ಣು ಗಾತ್ರದಷ್ಟು), ಟೊಮೆಟೋ, ಒಣ ಮೆಣಸು, ಕೊತ್ತಂಬರಿ ಸೊಪ್ಪು ನೀರು ಕೂಡ ಹಾಕಿಕೊಂಡು ರುಬ್ಬಕೊಳ್ಳಬೇಕು. ನುಣ್ಣಗೆ ರುಬ್ಬಿಕೊಂಡು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಬಾಣಲೆ ಪಲೆ ಮೇಲೆ ಇಟ್ಟ ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಬಿಸಿಯಾದಾಗ ಸಾಸಿವೆ, ಇಂಗು, ಒಣ ಮೆಣಸು, ಕರಿಬೇವು ಹಾಕಿ ಅರ್ಧ ನಿಮಿಷ ಫ್ರೈ ಮಾಡಿ. ನಂತರ ಮಿಕ್ಸಿಯಲ್ಲಿ ರುಬ್ಬಿದ್ದ ಮಸಾಲೆ ಪೇಸ್ಟ್ ಅನ್ನು ಕೂಡ ಇದಕ್ಕೆ ಹಾಕಿಕೊಂಡು ಸ್ವಲ್ಪ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನೀರು ಹೆಚ್ಚಾಗಿ ಇರಲಿ.
ಇಗ ಇದಕ್ಕೆ ಬೆಲ್ಲದ ಪುಡಿ, ಉಪ್ಪು, ಅರಶಿಣ ಪುಡಿ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕುದಿಬರಲು ಬಿಡಬೇಕು. ತಿಳಿಸಾರು ಕುದಿಬರಲು ಆರಂಭವಾದಾಗ ಒಮ್ಮೆ ತಿರುಗಿಸಿಕೊಂಡು ರುಚಿ ನೋಡಿಕೊಳ್ಳಿ. ಒಟ್ಟು 4ರಿಂದ 5 ನಿಮಿಷ ಕುದಿಬಂದರೆ ಸಾಕಾಗುತ್ತದೆ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ತಿಳಿಸಾರು ರೆಡಿಯಾಗುತ್ತದೆ. ಇಷ್ಟೊಂದು ರುಚಿಯಲ್ಲಿ ಇಷ್ಟು ರುಚಿಯಾಗಿ ತಿಳಿಸಾರನ್ನು ಮಾಡಲು ಬೇರೆ ವಿಧಾನಗಳಿಲ್ಲ. ನೀವು ಕೂಡ ಈ ವಿಧಾನದ ಮೂಲಕ ತಿಳಿ ಸಾರು ಮಾಡಿ ಸವಿದು ನೋಡಿ.



Click it and Unblock the Notifications