Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಂಪು ತಂಪಿನ ಈರುಳ್ಳಿ ತಂಬುಳಿ ಸವಿದು ನೋಡಿ! ಇಲ್ಲಿದೆ ಸುಲಭದ ರೆಸಿಪಿ!
ನೀವು ಮಧ್ಯಾಹ್ನ ಹಾಗೆ ರಾತ್ರಿ ಊಟಕ್ಕೆ ರುಚಿ ರುಚಿಯಾದ ಯಾವುದಾದರು ಸಾಂಬಾರ್, ಸಾರು, ಗ್ರೇವಿ, ರುಚಿ ರುಚಿಯ ರಸಂ ಹೀಗೆ ಯಾವುದಾದರು ಒಂದು ಖಾದ್ಯವನ್ನು ರೆಡಿ ಮಾಡಿಕೊಂಡು ಸವಿಯಲು ಇಷ್ಟಪಡುತ್ತೀರಿ. ಅನ್ನದ ಜೊತೆಗೆ ಈ ರೀತಿ ಯಾವುದಾದರು ರುಚಿ ರುಚಿರು ಸಾರು ಇದ್ದರೆ ಊಟದ ರುಚಿ ಕೂಡ ಅದ್ಭುತವಾಗಲಿದೆ. ಹಾಗೆ ಅನ್ನದೊಂದಿಗೆ ರುಚಿ ರುಚಿ ತಂಬುಳಿ ಮಾಡಿ ಸವಿಯುವುದು ಕೂಡ ಎಲ್ಲರಿಗೂ ಇಷ್ಟವಾಗುತ್ತೆ.
ಇನ್ನು ತಂಬುಳಿಯನ್ನು ಹಲವು ರೀತಿಯಲ್ಲಿ ಹಲವು ಬಗೆಯಲ್ಲಿ ವಿವಿಧ ರುಚಿಯಲ್ಲಿ ಮಾಡಬಹುದು ಎಂಬುದನ್ನು ಕೂಡ ನೀವು ಕೇಳಿದ್ದೀರಿ. ತಂಬುಳಿಯಲ್ಲಿ ಹಲವು ಬಗೆ ಇದ್ದರೂ ಎಲ್ಲಾ ಬಗೆಯು ರುಚಿ ನೀಡಲಿವೆ. ಹಾಗೆ ನಾವಿಂದು ಸುಳಭವಾಗಿ ಕಡಿಮೆ ವಸ್ತುಗಳ ಬಳಸಿ ಮಾಡುವಂತಹ ರುಚಿ ರುಚಿಯ ಈರುಳ್ಳಿ ತಂಬುಳಿಯ ಕುರಿತು ತಿಳಿದುಕೊಳ್ಳೋಣ.

ಈರುಳ್ಳಿಯಿಂದ ಮಾಡುವ ಈ ತಂಬುಳಿ ಬಹಳ ರುಚಿ ನೀಡಲಿದೆ. ನಿಮ್ಮ ಊಟದ ರುಚಿ ದುಪ್ಪಟ್ಟಾಗಿಸೋದು ಖಚಿತ. ಹಾಗಾದ್ರೆ ನಾವಿಂದು ಈ ಈರುಳ್ಳಿ ತಂಬುಳಿ ಮಾಡೋದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವುದು ಹೇಗೆ? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈರುಳ್ಳಿ ತಂಬುಳಿ ಮಾಡಲು ಬೇಕಾಗುವ ವಸ್ತುಗಳು
- ಈರುಳ್ಳಿ
- ಮಜ್ಜಿಗೆ ಅಥವಾ ಮೊಸರು
- ತೆಂಗಿನಕಾಯಿ
- ಉಪ್ಪು
- ಎಣ್ಣೆ
- ಕರಿಬೇವು
- ಒಣ ಮೆಣಸು
ಈರುಳ್ಳಿ ತಂಬುಳಿ ಮಾಡುವುದು ಹೇಗೆ?
ಮೊದಲು ಒಂದು ಈರುಳ್ಳಿಯನ್ನು ದೊಡ್ಡದಾಗಿ ಕತ್ತರಿಸಿಕೊಳ್ಳಿ. ನಂತರ ಮಿಕ್ಸಿ ಜಾರ್‌ಗೆ ಈ ಕತ್ತರಿಸಿಕೊಂಡ ಈರುಳ್ಳಿ, ಕತ್ತರಿಸಿದ ಸ್ವಲ್ಪ ತೆಂಗಿನಕಾಯಿ, ಒಂದರಿಂದ ಎರಡು ಒಣ ಮೆಣಸು ಹಾಕಿ ನಿರು ಹಾಕದೆ ಮೊದಲು ತರಿತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಹಾಗೆ ನೀರು ಸಹ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
ನುಣ್ಣಗಾದ ಬಳಿಕ ಈಗ ಕೊನೆಯಲ್ಲಿ ಮೊಸರು ಅಥವಾ ಅರ್ಧ ಕಪ್ ಮಜ್ಜಿಗೆ ಹಾಕಿಕೊಂಡು ಮತ್ತೆ ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಒಂದು ಪಾತ್ರೆಗೆ ಈ ರುಬ್ಬಿದ ವಸ್ತುಗಳ ಹಾಕಿಕೊಂಡು ತೆಳುವಾಗಲು ನಿಮಗೆ ಎಷ್ಟು ನೀರು ಬೇಕೋ ಅಷ್ಟು ನೀರು ಹಾಕಿಕೊಳ್ಳಬೇಕು. ಈಗ ಒಮೆ ಮೇಲೆ ಒಂದು ಸಣ್ಣ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಸಾಸಿವೆ, ಒಣ ಮೆಣಸು, ಕರಿಬೇವು ಹಾಕಿ ಒಗ್ಗರಣೆ ಮಾಡಿ ಇದನ್ನು ತಂಬುಳಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಈರುಳ್ಳಿ ತಂಬುಳಿ ಸಿದ್ದವಾಗುತ್ತೆ. ಅನ್ನದ ಜೊತೆಗಂತು ಇದು ಬಹಳ ರುಚಿ ನೀಡಲಿದೆ. ಹಾಗೆ ಮಾಡೋದು ಕೂಡ ಬಹಳ ಸುಲಭವಾಗಿದೆ. ಈ ತಂಬುಳಿಯು ನಿಮ್ಮ ಹೊಟ್ಟೆ ಸರಿ ಇಲ್ಲದಿದ್ದರೆ, ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾಗಿದ್ದರೆ, ದೇಹದ ಉಷ್ಣಾಂಶ ಹೆಚ್ಛಾಗಿದ್ದರೆ ಅಥವಾ ನಿಮ್ಮಲ್ಲಿ ಸಣ್ಣ ಪುಟ್ಟ ಅನಾರೋಗ್ಯಗಳು ಕಾಡುತ್ತಿದ್ದರೆ ಸುಲಭವಾಗಿ ಇದನ್ನು ಮಾಡಿ ಸವಿದು ನೋಡಿ. ಹಾಗೆ ರಾತ್ರಿ ಊಟದೊಂದಿಗೆ ಇದು ಬಹಳ ಉಪಯೋಗಕಾರಿ. ನಿಮ್ಮ ಜೀರ್ಣಕ್ರಿಯೆಗೆ ಇದು ಸಹಕಾರಿಯಾಗಿದ್ದು, ಮಕ್ಕಳಿಗ ಸಹ ನೀಡಬಹುದು.



Click it and Unblock the Notifications