Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
4 ವಸ್ತು ಇದ್ರೆ 5 ನಿಮಿಷದಲ್ಲಿ ಹಾಲಿನ ಪೇಡ ಮಾಡಿ! ಸುಲಭದ ತಿಂಡಿ
ಅಕ್ಟೋಬರ್‌ನಲ್ಲಿ ಹಲವು ಹಬ್ಬಗಳ ನಡುವೆ ಎಲ್ಲರು ಬಹಳ ಅದ್ದೂರಿಯಾಗಿ ಆಚರಿಸುವಂತಹ ಹಬ್ಬ ಅಂದ್ರೆ ದೀಪಾವಳಿ. ಈ ದೀಪಾವಳಿಯಲ್ಲಿ ಎಲ್ಲರ ಮನೆಯಲ್ಲೂ ಸಿಹಿ ಮಾಡುವುದು ಕಾಮನ್. ಅದ್ರಲ್ಲೂ ಕೆಲವೇ ವಸ್ತುಗಳ ಬಳಸಿಕೊಂಡು ರುಚಿ ರುಚಿ ಸಿಹಿ ಮಾಡೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಇಂತಹ ಸಿಹಿಗಳ ಸಾಲಿನಲ್ಲಿ ನಾವಿಂದು ಹಾಲಿನಿಂದ ಮಾಡುವ ಪೇಡದ ಕುರಿತು ತಿಳಿಯೋಣ.
ನೀವು ಕೂಡ ಅಂಗಡಿ, ಬೇಕರಿಯಿಂದ ಖರೀದಿಸಿ ತಂದು ಬೇಡ ಸವಿದಿರುತ್ತೀರಿ. ರುಚಿ ರುಚಿಯ ಪೇಡದ ಹೆಸರು ಕೇಳಿದ್ರೆ ನಿಮ್ಮ ಬಾಯಲ್ಲಿ ನೀರು ಬರುತ್ತಿರಬಹುದು. ಹಾಗೆ ಪೇಡ ಅಂದ್ರೆ ಎಲ್ಲರು ಇಷ್ಟಪಡುತ್ತಾರೆ. ಮಾಡೋದು ಕೂಡ ಬಹಳ ಸುಲಭ. ಇನ್ನು ಈ ಪೇಡದಲ್ಲಿ ಹತ್ತು ಹಲವು ಬಗೆಗಳಿವೆ. ಹಬ್ಬದ ಸಮಯದಲ್ಲಿ ಯಾವುದಾದರೊಂದು ಬಗೆ ಮಾಡಿದ್ರೆ ಹಬ್ಬದ ಸಂಭ್ರಮ ಡಬಲ್ ಆಗೋದು ಖಚಿತ.

ಆದ್ರೆ ನಾವಿಂದು ಹಾಲಿನಿಂದ ಮಾಡುವಂತಹ ಸುಲಭದ ಪೇಡ ಕುರಿತಾಗಿ ತಿಳಿಯೋಣ. ಈ ಪೇಡ ಮಾಡಲು ಕೆಲವೇ ವಸ್ತು ನಿಮ್ಮ ಬಳಿ ಇದ್ದರೆ ಸಾಕು. ಹಾಗಾದ್ರೆ ಈ ಹಾಲಿನ ಪೇಡ ಮಾಡುವ ಕುರಿತು ಇಲ್ಲಿ ತಿಳಿಯೋಣ. ಈ ಹಾಲಿನ ಪೇಡ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿಯೋಣ.
ಹಾಲಿನ ಪೇಡ ಮಾಡಲು ಬೇಕಾಗುವ ವಸ್ತುಗಳು
ಹಾಲು
ಹಾಲಿನ ಪುಡಿ
ಸಕ್ಕೆರೆ
ಏಲಕ್ಕಿ
ತುಪ್ಪ
ಹಾಲಿನ ಪೇಡ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್‌ಗೆ ಅರ್ಧ ಕಪ್ ಸಕ್ಕರೆ, ಏಲಕ್ಕಿ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿಕೊಂಡು ತೆಗೆದಿಟ್ಟುಕೊಳ್ಳಿ. ಈಗ ಒಂದು ಬೌಲ್‌ಗೆ ಹಾಲಿ ಪುಡಿ ಹಾಕಿಕೊಳ್ಳಿ. 1 ಕಪ್ ಹಾಲಿನ ಪುಡಿಗೆ ಕಾಲು ಕಪ್ ಹಾಲು ಹಾಕಿಕೊಂಡು ಮಿಕ್ಸ್ ಮಾಡಬೇಕು. ಬಿಸಿ ಮಾಡಿ ತಣ್ಣಗೆ ಮಾಡಿರುವ ಹಾಲನ್ನು ಹಾಕಿ ಗಂಟುಗಳಿಲ್ಲದಂತೆ ಮಿಕ್ಸ್ ಮಾಡಿ. ಇದು ದಪ್ಪ ಹಿಟ್ಟಿನಂತೆ ಬರಬೇಕು, ನಂತರ ಇದನ್ನು ಬದಿಗಿಟ್ಟುಕೊಳ್ಳಿ.
ಈಗ ಒಂದು ಬಾಣಲೆ ಇಟ್ಟು ಅದಕ್ಕೆ 2 ಸ್ಪೂನ್ ತುಪ್ಪ ಹಾಕಿ ನಂತರ ಇದಕ್ಕೆ ಹಾಲಿನ ಪುಡಿಯ ಮಿಶ್ರಣವನ್ನು ಹಾಕಿಕೊಂಡು ಮಿಕ್ಸ್ ಮಾಡುತ್ತಾ ಬರಬೇಕು. ತುಪ್ಪದೊಂದಿಗೆ ಈ ಮಿಶ್ರಣ ಚೆನ್ನಾಗಿ ಮಿಕ್ಸ್ ಆಗಬೇಕು. ಈಗ ಮೊದಲು ರುಬ್ಬಿದ ಸಕ್ಕರೆ ಪುಡಿಯನ್ನು ಸಹ ಇದಕ್ಕೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು.
ಕೈಬಿಡದೆ ಚೆನ್ನಾಗಿ ಮಿಶ್ರಣ ಮಾಡುತ್ತಾ ಇರಿ. ಇದು ಗಟ್ಟಿ ಆಗುವವರೆಗೂ ಮಿಶ್ರಣ ಮಾಡುತ್ತಿರಬೇಕು ಅದರ ನಡುವೆ ಅರ್ಧ ಸ್ಪೂನ್ ತುಪ್ಪ ಸಹ ಹಾಕಿಕೊಳ್ಳಿ. 3 ನಿಮಿಷದ ಬಳಿಕ ಇದು ತಳ ಬಿಡಲು ಆರಂಭಿಸಲಿದೆ. ಈಗ ಒಲೆ ಆಫ್ ಮಾಡಿಕೊಂಡು ಒಂದು ತಟ್ಟೆಗೆ ಹಾಕಿಕೊಳ್ಳಿ. ಈಗ ತಟ್ಟೆಯಲ್ಲಿರುವ ಹಿಟ್ಟು 2 ನಿಮಿಷ ಬಿಟ್ಟು ಅದನ್ನು ಉಂಡೆ ಕಟ್ಟಿಕೊಳ್ಳಿ.
ಉಗುರು ಬೆಚ್ಚಗೆ ಇದ್ದಾಗ ನಿಂಬೆ ಹಣ್ಣು ಗಾತ್ರದಲ್ಲಿ ಅದನ್ನು ಉಂಡೆ ಕಟ್ಟಿಕೊಂಡು ನಂತರ ಅದನ್ನು ಪೇಡಾದ ರಚನೆಗೆ ತಟ್ಟಿಕೊಳ್ಳಿ. ಎಲ್ಲವು ಒಂದೇ ಗಾತ್ರದಲ್ಲಿ ತಟ್ಟಿಕೊಂಡು ಕಡ್ಡಿಯಿಂದ ಅದರ ಮೇಲೆ ಡಿಸೈನ್ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಹಾಗೆ ನೀಡಬಹುದು. ಇಷ್ಟಾದರೆ ರುಚಿ ರುಚಿಯ ಪೇಡ ಸಿದ್ದವಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ. ನೀವು ಸಹ ಮನೆಯಲ್ಲಿ ಅದ್ರಲ್ಲೂ ಹಬ್ಬದ ಸಮಯದಲ್ಲಿ ಇದನ್ನು ಮನೆಯಲ್ಲಿ ಮಾಡಿ ಸವಿದು ನೋಡಿ. ನಿಮ್ಮ ಬಾಯಲ್ಲೂ ಇದು ನೀರು ತರಿಸಲಿದೆ.



Click it and Unblock the Notifications