Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಿ ರುಚಿಗೆ ಕೊತ್ತಂಬರಿ ಚಟ್ನಿ! ಒಮ್ಮೆ ಸವಿದರೆ ಮತ್ತೆಂದು ಮರೆಯದ ಸ್ವಾದ!
ನೀವು ಊಟದೊಂದಿಗೆ ಹಾಗೆ ಬೆಳಗ್ಗೆ ತಿಂಡಿಯೊಂದಿಗೆ ರುಚಿ ರುಚಿಯಾದ ಚಟ್ನಿ ಮಾಡಿ ಸವಿಯುವುದು ರೂಢಿ ಮಾಡಿಕೊಂಡಿರಬಹುದು, ಆದ್ರೆ ಚಟ್ಜಿ ಅಂದ್ರೆ ತೆಂಗಿನಕಾಯಿ ಬಳಸಿ ಮಾಡುವ ಚಟ್ನಿ ಅಥವಾ ಕಡಲೆ ಗಳಿಂದ ಮಾಡುವಂತಹ ಚಟ್ನಿ ಹೆಚ್ಚಾಗಿ ಮಾಡುತ್ತೀರಿ. ಯಾವಾಗಲು ಒಂದೇ ರೀತಿಯ ಚಟ್ನಿಗಳ ಮಾಡಿ ಸವಿಯೋಕೆ ನಿಮಗೂ ಬೇಸರ ತರಿಸಿರಬಹುದು. ಇದರಿಂದ ನಿಮ್ಮ ನಾಲಿಗೆ ರುಚಿಯೂ ಕೆಟ್ಟಿರಬಹುದು.
ಹಾಗೆ ಬಾಯಿ ರುಚಿ ಹೆಚ್ಚಿಸುವ ರುಚಿಯ ಚಟ್ನಿಯೊಂದನ್ನು ಮಾಡಿ ಸವಿಯುವ ಕುರತಾಗಿ ನಾವಿಂದು ಹೇಳಲಿದ್ದೇವೆ. ಅದ್ರಲ್ಲೂ ಈ ರೀತಿ ಖಾರ ಚಟ್ನಿ ಒಮ್ಮೆ ನೀವು ಮಾಡಿ ಸವಿದರೆ ಪ್ರತಿನಿತ್ಯ ಈ ಚಟ್ನಿ ಸವಿಯಲು ಇಷ್ಟಪಡುತ್ತೀರಿ. ಅಷ್ಟೇ ಅಲ್ಲ ಈ ಚಟ್ನಿ ನಿಮ್ಮ ಆರೋಗ್ಯಕ್ಕೂ ಕೂಡ ಬಹಳ ಉತ್ತಮವಾಗಿದೆ. ಹಾಗಾದ್ರೆ ಈ ಚಟ್ನಿಯನ್ನು ಮಾಡಿ ಸವಿಯುವ ಕುರಿತಾಗಿ ನಾವಿಂದು ತಿಳಿಯೋಣ.

ಇದು ಕೊತ್ತಂಬರಿ ಸೊಪ್ಪನ್ನು ಹೆಚ್ಚಾಗಿ ಬಳಸಿ ಮಾಡುವಂತಹ ಚಟ್ನಿಯಾಗಿದೆ. ಕೊತ್ತಂಬರಿ ನಿಮ್ಮ ದೇಹಕ್ಕೆ ಅನೇಕ ಪ್ರಯೋಜನಗಳ ತರಲಿದೆ. ಹಾಗೆ ಕೊತ್ತಂಬರಿ ಸೊಪ್ಪಿನ ಈ ಚಟ್ನಿಯನ್ನು ನೀವು ಸುಲಭವಾಗಿ ಮಾಡಿ ಮುಗಿಸಬಹುದು. ಊಟದೊಂದಿಗೆ ಹಾಗೆ ಯಾವುದೇ ತಿಂಡಿಯೊಂದಿಗೆ ಈ ಚಟ್ನಿಯನ್ನು ನೀವು ಮಾಡಿ ಸವಿಯಬಹುದು.
ಹಾಗಾದ್ರೆ ಈ ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಕೊತ್ತಂಬರಿ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ಕೊತ್ತಂಬರಿ ಸೊಪ್ಪು- ಅರ್ಧ ಕಟ್ಟು
- ಸಾಸಿವೆ
- ಮೆಂತ್ಯ
- ಜೀರಿಗೆ
- ಬೆಲ್ಲ
- ಒಣ ಮೆಣಸಿನಕಾಯಿ
- ಬೆಳ್ಳುಳ್ಳಿ
- ಹುಣಸೆ
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ಕೊತ್ತಂಬರಿ ಚಟ್ನಿ ಮಾಡುವ ಸುಲಭದ ವಿಧಾನವೇನು?
ಮೊದಲು ಕೊತ್ತಂಬರಿ ಸೊಪ್ಪನ್ನು ತೊಳೆದು ಇಟ್ಟುಕೊಳ್ಳಿ. ನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ನಂತರ ತೊಳೆದುಕೊಂಡ ಈ ಅರ್ಧ ಕಟ್ಟು ಕೊತ್ತಂಬರಿಯನ್ನು ಬಾಣಲೆಗೆ ಹಾಕಿಕೊಂಡು ಎನ್ನಾಗಿ ಹುರಿದುಕೊಳ್ಳಿ. ಎಣ್ಣೆ ಫ್ರೈ ಆದ ಕೊತ್ತಂಬರಿ ಸೊಪ್ಪನ್ನು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಅದೇ ಬಾಣಲೆಗೆ ಮತ್ತೆ ಎಣ್ಣೆ ಹಾಕಿ ಈಗ ಸಾಸಿವೆ, ಮೆಂತ್ಯ ಹಾಕಿಕೊಂಡು ಫ್ರೈ ಮಾಡಿ. ನಂತರ ಜೀರಿಗೆ, ಒಣ ಮೆಣಸಿನಕಾಯಿಯನ್ನು ಸಹ ಹಾಕಿಕೊಂಡು ಹುರಿದುಕೊಳ್ಳಿ. ಇದಕ್ಕೆ ಗಡ್ಡೆ ಬೆಳ್ಳುಳ್ಳಿ ಹಾಕಿ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ನಂತರ ಎಲ್ಲವನ್ನು ತೆಗೆದು ಒಂದು ಬೌಲ್‌ಗೆ ಹಾಕಿ ತಣ್ಣಗಾಗಲು ಬಿಡಿ.
ಈಗ ತಣ್ಣಗಾದ ಎಲ್ಲಾ ಪದಾರ್ಥವನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಮೇಲೆ ಇದಕ್ಕೆ ನೆನೆಸಿಟ್ಟ ಹುಣಸೆ ಹುಳಿ, ಹುರಿದ ಕೊತ್ತಂಬರಿ ಸೊಪ್ಪು, ಬೆಲ್ಲ, ಉಪ್ಪು, ಹುರಿದುಕೊಂಡ ಒಣ ಮೆಣಸು ಸಾಸಿವೆ ಸೇರಿ ಎಲ್ಲಾ ಪದಾರ್ಥಗಳನ್ನು ಹಾಕಿ 2 ಸ್ಪೂನ್ ನೀರು ಸಹ ಹಾಕಿಕೊಳ್ಳಿ.
ಇದನ್ನು ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಕೊತ್ತಂಬರಿ ಚಟ್ನಿ ಸಿದ್ದವಾಗುತ್ತೆ. ಇದನ್ನು ಊಟದೊಂದಿಗೆ ತಿಂಡಿಯೊಂದಿಗೆ ಕಲಸಿಕೊಂಡು ಸವಿಯಲು ಮುಂದಾದರೆ ಅದರ ರುಚಿಗೆ ನಿತ್ಯ ಈ ಚಟ್ನಿ ಸವಿಯಲು ಮನಸಾಗುತ್ತೆ. ಇದು ಆರೋಗ್ಯದ ದೃಷ್ಟಿಯಲ್ಲು ಉತ್ತಮ. ಇದಕ್ಕೆ ಬಳಸುವ ಮಸಾಲೆ ಅಂಶಗಳು ನಿಮಗಿರುವ ಸಣ್ಣ ಪುಟ್ಟ ಅನಾರೋಗ್ಯವನ್ನು ದೂರ ಮಾಡಲಿದೆ. ದೇಹವನ್ನ ಸಮತೋಲನದಲ್ಲಿ ಇಡಲಿದೆ.



Click it and Unblock the Notifications