ಚಪಾತಿ, ಮುದ್ದೆಯೊಂದಿಗೆ ಡಬಲ್ ರುಚಿ ತರುವ ಚಿಕನ್ ಚಾಪ್ಸ್! ಹೋಟೆಲ್ ರುಚಿಯ ಖಾದ್ಯ ಮನೆಯಲ್ಲಿ!!

Posted By:

ನಾನ್ ವೆಜ್ ಪ್ರಿಯರು ಚಿಕನ್‌ನಿಂದ ಮಾಡುವ ಎಲ್ಲಾ ಖಾದ್ಯಗಳನ್ನು ಇಷ್ಟಪಡುತ್ತಾರೆ. ಮಾಂಸಹಾರದಲ್ಲಿ ಎಲ್ಲರು ಚಿಕನ್‌ ಪಾಕವಿಧಾನಗಳ ಇಷ್ಟಪಡುತ್ತಾರೆ. ಅದ್ರಲ್ಲೂ ಚಿಕನ್ ಸಾಂಬಾರ್, ಗ್ರೇವಿ, ಚಿಲ್ಲಿ ಚಿಕನ್, ಚಿಕನ್ 65, ಚಿಕನ್ ಫ್ರೈ, ಚಿಕನ್ ಫ್ರೈ, ಚಿಕನ್ ಚಾಪ್ಸ್ ಸೇರಿದಂತೆ ಹಲವು ಖಾದ್ಯಗಳ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರಬಹುದು.

ಹೀಗಾಗಿ ನಾವಿಂದು ಚಿಕನ್‌ನಿಂದ ಮಾಡುವಂತಹ ಚಿಕನ್ ಚಾಪ್ಸ್ ಕುರಿತಾಗಿ ತಿಳಿದುಕೊಳ್ಳೋಣ. ಚಿಕನ್ ಚಾಪ್ಸ್‌ ಅನ್ನೊದೊಂದಿಗೆ ರೊಟ್ಟಿ, ಪರೋಠ, ಚಪಾತಿ, ಮುದ್ದೆಗೆ ಹೇಳಿ ಮಾಡಿಸಿದ ಖಾದ್ಯ. ಅದ್ರಲ್ಲೂ ನಾನ್‌ವೆಜ್ ಪ್ರಿಯರು ಒಮ್ಮೆ ಈ ಚಾಪ್ಸ್ ಸವಿದರೆ ಪದೇ ಪದೇ ಸವಿಯಲು ಮುಂದಾಗೋದು ಖಚಿತ. ಇನ್ನು ಈ ಚಾಪ್ಸ್ ಮಾಡೋದು ಸಹ ಬಹಳ ಸುಲಭ.

Easy Chicken Chaps For Mudde And Chapati

ಚಿಕನ್ ಚಾಪ್ಸ್ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಹೋಟೆಲ್ ರುಚಿಯಲ್ಲಿ ಚಾಪ್ಸ್ ಅನ್ನು ಮನೆಯಲ್ಲೇ ಮಾಡಿ ಸವಿಯಬಹುದು. ಹಾಗಾದ್ರೆ ನಾವಿಂದು ಮನೆಯಲ್ಲಿ ಚಿಕನ್ ಚಾಪ್ಸ್ ಮಾಡಿ ಸವಿಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಚಿಕನ್ ಚಾಪ್ಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಚಿಕನ್ ಚಾಪ್ಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?

  • ಚಿಕನ್
  • ಟೊಮೆಟೊ - 1
  • ಈರುಳ್ಳಿ
  • ಹಸಿ ಮೆಣಸಿನಕಾಯಿ
  • ಶುಂಠಿ
  • ಬೆಳ್ಳುಳ್ಳಿ
  • ಕೊತ್ತಂಬರಿ ಸೊಪ್ಪು
  • ಪುದೀನ ಸೊಪ್ಪು
  • ದಾಲ್ಚಿನ್ನಿ
  • ಹುರಿಗಡಲೆ
  • ಕರಿಮೆಣಸು
  • ಏಲಕ್ಕಿ
  • ಸೋಂಪು ಕಾಳು
  • ಲವಂಗ
  • ಧನಿಯಾ ಪುಡಿ
  • ತೆಂಗಿನಕಾಯಿ ತುರಿ
  • ಅರಿಶಿನ ಪುಡಿ
  • ಅಡುಗೆ ಎಣ್ಣೆ
  • ರುಚಿಗೆ ತಕ್ಕಷ್ಟು ಉಪ್ಪು


ಚಿಕನ್ ಚಾಪ್ಸ್ ಮಾಡುವ ಸುಲಭದ ವಿಧಾನವೇನು?

ಮೊದಲಿಗೆ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಮಸಾಲೆ ರುಬ್ಬಿಕೊಳ್ಳಲು ಬೇಕಾಗುವ ವಸ್ತುಗಳ ಹಾಕಿಕೊಳ್ಳಬೇಕು. ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ, ಟೊಮೆಟೋ, ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿ.

ಈಗ ಕೊತ್ತಂಬರಿ ಸೊಪ್ಪು ಹಾಗೆ ಪುದಿನ ಸೊಪ್ಪು ಸಹ ಹಾಕಿಕೊಳ್ಳಬೇಕು. ಅನಂತರ ಇದಕ್ಕೆ ಚಕ್ಕೆ, ಲವಂಗ, ಹುರಿಗಡಲೆ, ಏಲಕ್ಕಿ, ತೆಂಗಿನಕಾಯಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳುತ್ತಾ ಹುರಿದುಕೊಳ್ಳಿ. 1 ನಿಮಿಷದಲ್ಲಿ ಹುರಿದು ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ.

ಈಗ ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಈರುಳ್ಳಿ, ಅರಶಿಣ ಹಾಕಿ ಬಳಿಕ ಇದಕ್ಕೆ ಕ್ಲೀನ್ ಮಾಡಿಕೊಂಡ ಚಿಕನ್ ಹಾಕಿಕೊಳ್ಳಿ. ಹಾಗೆ ಇದಕ್ಕೆ ಉಪ್ಪು ಹಾಕಿ ಫ್ರೈ ಮಾಡಿಕೊಳ್ಳಬೇಕು. ಚಿಕನ್ ನೀರು ಡ್ರೈ ಆಗುವವರೆಗೂ ಬಿಡಿ.

ಈಗ ಒಂದು ಮಿಕ್ಸಿ ಜಾರ್‌ಗೆ ಮೊದಲು ಹುರಿದ ವಸ್ತುಗಳ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಈಗ ರುಬ್ಬಿದ ಮಸಾಲೆಯನ್ನು ಕುಕ್ಕರ್‌ನಲ್ಲಿನ ಚಿಕನ್‌ಗೆ ಹಾಕಿಕೊಂಡು ನೀರು ಸಹ ಹಾಕಿಕೊಳ್ಳಿ. ಮತ್ತೆ 2 ನಿಮಿಷ ಫ್ರೈ ಮಾಡಿ. ಹೀಗೆ ಮಾಡುವಾಗ ಧನಿಯಾ ಪುಡಿ ಹಾಕಿಕೊಳ್ಳಿ. 1 ನಿಮಿಷ ಬಿಟ್ಟು ಪುದಿನ ಎಲೆ ಹಾಕಿಕೊಳ್ಳಿ. ಈಗ ಮುಚ್ಚಳ ಮುಚ್ಚಿ 4 ಸೀಟಿ ಹೊಡೆಯಲು ಬಿಡಬೇಕು. ನಂತರ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಮತ್ತೆ ಕುದಿಸಿಕೊಳ್ಳುವ ಅಗತ್ಯವಿಲ್ಲ.

ನೀವು ಈ ಟೇಸ್ಟಿ ಚಿಕನ್ ಚಾಪ್ಸ್ ಮನೆಯಲ್ಲೇ ಮಾಡಿ ನೋಡಿ. ಇದೇ ವಿಧಾನದಲ್ಲಿ ಡಾಬಾ, ಹೋಟೆಲ್‌ನಲ್ಲಿ ಮಡಲಾಗುತ್ತೆ.

[ of 5 - Users]
Story first published: Sunday, November 23, 2025, 14:25 [IST]
X
Desktop Bottom Promotion