Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ರೀತಿಯ ಗ್ರೇವಿ ಮಾಡಿದ್ರೆ ಅನ್ನ, ಚಪಾತಿ, ದೋಸೆಗೂ ಸೈ..! ಮಾಡೋಕೆ 5 ನಿಮಿಷ ಸಾಕು
ನಾವು ಊಟ, ತಿಂಡಿ ಎಲ್ಲದಕ್ಕೂ ಸೇರಿ ರುಚಿ ರುಚಿಯಾಗುವಂತಹ ಸೈಡ್ ಡಿಶ್ ಮಾಡುವುದನ್ನು ಇಷ್ಟಪಡುತ್ತೇವೆ, ಏಕೆಂದರೆ ಸಮಯ ಉಳಿತಾಯವಾಗುತ್ತೆ ಹಾಗೆ ಒಂದೇ ಖಾದ್ಯ ಎಲ್ಲದ್ದಕ್ಕೂ ಬಳಕೆಯಾಗುತ್ತೆ. ಆದ್ರೆ ಕೆಲವೊಂದು ಈ ರೀತಿ ಮಾಡಿ ಸವಿಯಬಹುದು. ಅದರಲ್ಲಿ ನಾವಿಂದು ಕ್ಯಾಪ್ಸಿಕಂ ಗ್ರೇವಿ ಕುರಿತು ತಿಳಿಯೋಣ.
ಊಟದ ಜೊತೆಗೆ ಗ್ರೇವಿ ಇದ್ದರೆ ಅದರ ರುಚಿ ತುಂಬಾ ಚೆನ್ನಾಗಿರುತ್ತೆ, ಹಾಗೆ ಊಟವು ಚೆನ್ನಾಗಿ ಮಾಡಬಹುದು. ನಾವು ಹಲವು ತರಕಾರಿಗಳ ಬಳಸಿ ಗ್ರೇವಿ ಮಾಡುತ್ತೇವೆ. ಆದರೆ ಕ್ಯಾಪ್ಸಿಕಂ ಗ್ರೇವಿ ಅಷ್ಟು ರುಚಿ ನೀಡುವ ಗ್ರೇವಿ ಮತ್ತೊಂದಿಲ್ಲ. ಏಕೆಂದರೆ ಕ್ಯಾಪ್ಸಿಕಂ ಬಳಸಿ ಮಾಡುವ ಎಲ್ಲಾ ರೀತಿಯ ಖಾದ್ಯಗಳು ಕೂಡ ಒಳ್ಳೆಯ ರುಚಿ ನೀಡುತ್ತವೆ. ಹೀಗಾಗಿ ನಾವಿಂದು ಕ್ಯಾಪ್ಸಿಕಂ ಗ್ರೇವಿ ಮಾಡುವುದನ್ನು ತಿಳಿದುಕೊಳ್ಳೋಣ. ಈ ಗ್ರೇವಿಯನ್ನು ನಾವು ಊಟ, ಚಪಾತಿ, ಪೂರಿ, ದೋಸೆ ಸವಿಯಬಹುದು.

ಕ್ಯಾಪ್ಸಿಕಂ ಗ್ರೇವಿ ಮಾಡಲು ಬೇಕಾಗುವ ಪದಾರ್ಥಗಳು ಏನು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವಾಗ ಯಾವ ರೀತಿ ತಯಾರಿ ಬೇಕು ಎಂಬೆಲ್ಲಾ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾಪ್ಸಿಕಂ ಗ್ರೇವಿ ಮಾಡಲು ಬೇಕಾಗುವ ಪದಾರ್ಥಗಳು
- ಕ್ಯಾಪ್ಸಿಕಂ -4
- ಈರುಳ್ಳಿ -2
- ಟೊಮೆಟೋ
- ಕಸುರಿ ಮೇತಿ
- ಸೋಂಪು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಮೊಸರು 2 ಟೇಬಲ್ ಸ್ಪೂನ್
- ಖಾರದ ಪುಡಿ
- ಧನಿಯ ಪುಡಿ
- ಗರಂ ಮಸಾಲ
- ಅರಿಶಿಣದ ಪುಡಿ
- ಉಪ್ಪು
- ಎಣ್ಣೆ
ಕ್ಯಾಪ್ಸಿಕಂ ಗ್ರೇವಿ ಮಾಡುವುದು ಹೇಗೆ?
ಮೊದಲು ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ನಂತರದಲ್ಲಿ ಕಸೂರಿ ಮೇತಿ, ಸೋಂಕಾಳು, ಈರುಳ್ಳಿ ಹಾಕಿಕೊಂಡು 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಿಸಿ ಮಾಡಿ. ನಂತರ ಇದಕ್ಕೆ ದಪ್ಪವಾಗಿ ಕತ್ತರಿಸಿಕೊಂಡಿರುವ 4 ಕ್ಯಾಪ್ಸಿಕಂ ಅನ್ನು ಈ ಕುಕ್ಕರ್‌ಗೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈಗ ಉಪ್ಪು ಸೇರಿಸಿ 4 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಇದಾದ ಬಳಿಕ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಅರಶಿನ ಪುಡಿ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷಗಳ ಕಾಲ ಚೆನ್ನಾಗಿ ತಿರುಗಿಸುತ್ತಾ ಇರಿ. ನಂತರ ಮಿಕ್ಸಿ ಜಾರ್‌ಗೆ 4 ಟೊಮೆಟೋ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಈ ಪೇಸ್ಟ್ ಅನ್ನು ಈಗ ಕುಕ್ಕರ್‌ಗೆ ಹಾಕಿಕೊಳ್ಳಿ.
ಈಗ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುವಾಗ ಸ್ವಲ್ಪ ಮೊಸರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಮೊಸರು ಹಾಕದಿದ್ದರೂ ನಡೆಯುತ್ತದೆ. ಈಗ ಸ್ವಲ್ಪ ನೀರು ಹಾಕಿ 10 ನಿಮಿಷಗಳ ಕುದಿಯಲು ಬಿಡಿ. ಮುಚ್ಚಳ ಮುಚ್ಚಿ ಕುದಿಸಿಕೊಳ್ಳಿ. ಆಗಾಗ ತಿರುಗಿಸುತ್ತಾ ಇರಿ. 10 ನಿಮಿಷದ ಬಳಿಕ ಒಲೆ ಆಫ್ ಮಾಡಿಕೊಂಡು ಕೊನೆದಾಗಿ ನಿಮಗೆ ಬೇಕಾದರೆ ಕೊತ್ತಂಬರಿ ಸೊಪ್ಪು ಹಾಕಿ ಕಲಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಕ್ಯಾಪ್ಸಿಕಂ ಗ್ರೇವಿ ಸಿದ್ದವಾಗುತ್ತದೆ. ನೀವು ಸಹ ಮನೆಯಲ್ಲಿ ಒಮ್ಮೆ ಮಾಡಿ ನೋಡಿ.



Click it and Unblock the Notifications