Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಖಾರ ಖಾರ ಹುಳಿ ಹುಳಿಯ ಶುಂಠಿ ಚಟ್ನಿ ಸವಿದು ನೋಡಿ..! ನಿತ್ಯ ಇದೇ ಬೇಕು ಅಂತೀರಾ!
ನೀವು ಬೆಳಗ್ಗೆ ತಿಂಡಿಗೆ, ಮಧ್ಯಾಹ್ನ ಅಥವಾ ಸಂಜೆ ಊಟದ ಜೊತೆಗೆ ಸಾಂಬಾರ್, ಪಲ್ಯದ ಜೊತೆಗೆ ಯಾವುದಾದರೊಂದು ರುಚಿ ರುಚಿಯ ಚಟ್ನಿ ಇರಬೇಕು ಎಂದುಕೊಳ್ಳುತ್ತೀರಿ. ಇನ್ನು ಚಟ್ನಿ ಇದ್ದರೆ ಬೆಳಗ್ಗಿನ ತಿಂಡಿಯ ರುಚಿ ದುಪ್ಪಟ್ಟಾಗುವುದು ಖಚಿತ. ಅದರಲ್ಲೂ ವಿಶೇಷ ಬಗೆಯ ಚಟ್ನಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ನೀವು ಸಹ ಬಹಳ ಇಷ್ಟಪಟ್ಟು ಸವಿಯುವಂತಹ ಹಲವು ಚಟ್ನಿಗಳ ಪೈಕಿ ನಾವಿಂದು ಸುಲಭದ ಹಾಗೆ ವಿಭಿನ್ನ ಚಟ್ನಿ ಕುರಿತು ಹೇಳಲಿದ್ದೇವೆ.
ನೀವು ಬಹಳ ದಿನಗಳ ಕಾಲ ಯಾವುದಾದರು ಚಟ್ನಿಯನ್ನು ಇಟ್ಟು ಸವಿಯಬೇಕು ಎಂದುಕೊಂಡಿದ್ದರೆ ಈ ಶುಂಠಿ ಚಟ್ನಿಯನ್ನು ನೀವು ಮಾಡಬಹುದು. ಹೌದು ಶುಂಠಿ ಚಟ್ನಿಯನ್ನು ವಾರಗಳಿಗೂ ಅಧಿಕ ಕಾಲ ಇಡಬಹುದು. ಹಾಗೆ ಊಟ-ತಿಂಡಿ ಯಾವುದೇ ಸಮಯದಲ್ಲಿ ಬೇಕಾದರು ನೀವು ಬಳಸಬಹುದು. ಅದರ ರುಚಿಯಲ್ಲಿ ನೀವು ಮತ್ತಷ್ಟು ಊಟ, ಸವಿದಷ್ಟು ತಿಂಡಿಯ ರುಚಿ ಹೆಚ್ಚಾಗೋದು ಖಚಿತ.

ಇನ್ನು ಶುಂಠಿ ನಿಮ್ಮ ಆರೋಗ್ಯಕ್ಕೂ ಬಹಳ ಉತ್ತಮ. ಈಗ ಮಳೆಗಾಲ ಆರಂಭದ ಸಮಯ ಆಗಿರೋದ್ರಿಂದ ಈ ಶುಂಠಿ ಚಟ್ನಿಯನ್ನು ನೀವು ಮಾಡಿ ಸವಿಯುತ್ತಿದ್ದರೆ ಆಗಾಗ ಕಾಡುವ ಶೀತ, ಗಂಟಲು ನೋವಿನಂತಹ ಸಮಸ್ಯೆಯಿಂದ ನೀವು ಪಾರಾಗಬಹುದು. ಹಾಗಾದ್ರೆ ಈ ಶುಂಠಿ ಚಟ್ನಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಶುಂಠಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು?
ಶುಂಠಿ
ಬೆಲ್ಲ
ಒಣ ಮೆಣಸು
ಕರಿಬೇವು
ಉದ್ದಿನ ಬೇಳೆ
ಕೊತ್ತಂಬರಿ ಕಾಳು
ಜೀರಿಗೆ
ಸಾಸಿವೆ
ಮೆಂತ್ಯ ಕಾಳು
ಹುಣಸೆ ಹಣ್ಣು
ಇಂಗು
ಎಣ್ಣೆ
ಉಪ್ಪು
ಶುಂಠಿ ಚಟ್ನಿ ಮಾಡುವ ವಿಧಾನವಿದು
ಮೊದಲಿಗೆ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಹೆಚ್ಚಿಕೊಂಡಿರುವ ಶುಂಠಿ ಹಾಕಿ ಹುರಿದುಕೊಳ್ಳಿ 1ರಿಂದ 2 ನಿಮಿಷ ಹುರಿದುಕೊಳ್ಳಿ. ಅನಂತರ ಶುಂಠಿಯನ್ನು ತೆಗೆದು ಒಂದು ಪ್ಲೇಟ್ಗೆ ಹಾಕಿಟ್ಟುಕೊಳ್ಳಿ. ಈಗ 12 ಒಣ ಮೆಣಸು ಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ಈಗ ಉದ್ದಿನ ಬೇಳೆ, ಜೀರಿಗೆ, ಧನಿಯಾ ಕಾಳು, ಸಾಸಿವೆ, ಮೆಂತ್ಯ, ಕರಿಬೇವು ಎಲ್ಲವನ್ನು ಒಂದೊಂದಾಗಿ ಹಾಕಿ. ಕೊನೆಯಲ್ಲಿ ಇಂಗು ಸಹ ಹಾಕಿಕೊಂಡು 1 ನಿಮಿಷ ಹುರಿದುಕೊಂಡು ತೆಗೆದಿಟ್ಟುಕೊಳ್ಳಿ.
ಈಗ ನಿಂಬೆ ಹಣ್ಣಿನ ಗಾತ್ರದ ಹುಣಸೆ ಹುಳಿಯನ್ನು ನೆನೆಸಿಟ್ಟು ಅದನ್ನು ಪುಡಿ ಪುಡಿ ಮಾಡಿ ಹುಳಿ ಮಾಡಿಕೊಳ್ಳಿ, ಅಷ್ಟನ್ನು ಈಗ ಒಂದು ಬಾಣಲೆಗೆ ಹಾಕಿ ಕುದಿಬರಲು ಬಿಡಿ. ಹುಳಿ ಚೆನ್ನಾಗಿ ಕುದಿಬರಬೇಕು. ದಪ್ಪವಾದ ಪೇಸ್ಟ್ ಆದ ಬಳಿಕ ಹುಳಿಯನ್ನು ತೆಗೆದು ತಣ್ಣಗಾಲು ಬಿಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಮೊದಲು ಪ್ರೈ ಮಾಡಿ ಇಟ್ಟಿದ್ದ ಪದಾರ್ಥಗಳ ಹಾಕಿಕೊಳ್ಳಿ.
ಶುಂಠಿಯೊಂದನ್ನು ಬಿಟ್ಟು ಉಳಿದೆಲ್ಲಾ ಮಸಾಲೆಗಳನ್ನು ಮುಕ್ಸಿ ಜಾರ್ಗೆ ಹಾಕಿ ನೀರು ಹಾಕದೆ ಪುಡಿ ಮಾಡಿಕೊಳ್ಳಿ. ಚಟ್ನಿ ಪುಡಿಯಂತೆ ಬಂದ ನಂತರ ಈಗ ಹುರಿದುಕೊಂಡಿದ್ದ ಶುಂಠಿಯನ್ನು, ಬೆಲ್ಲ, ಉಪ್ಪು, ಹಾಗೆ ಬೆಯಿಸಿದ್ದ ಹುಣಸೆ ರಸವನ್ನು ಸಹ ಇದಕ್ಕೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ಇದು ಪೇಸ್ಟ್ ಆಗಿ ಬರಲಿದೆ.
ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಉದ್ದಿನ ಬೇಳೆ, ಒಣ ಮೆಣಸು, ಕರಿಬೇವು ಹಾಕಿ ಒಗ್ಗರಣೆ ಮಾಡಿ ಈ ಚಟ್ನಿಗೆ ಸುರಿದು ಕಲಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಶುಂಠಿ ಚಟ್ನಿ ರೆಡಿ, ಇದು ಖಾರ ಖಾರವಾಗಿ ಹುಳಿ ಹುಳಿಯಾಗಿ ಅದ್ಭುತ ರುಚಿ ನೀಡಲಿದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ.



Click it and Unblock the Notifications