Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ!
ಬ್ರೇಕ್ಫಾಸ್ಟ್ ಜೊತೆ ಚಟ್ನಿ ಮಾಡಿ ಸವಿಯೋದು ಕಾಮನ್. ದೋಸೆ, ಇಡ್ಲಿ, ಚಪಾತಿ, ಪೂರಿ, ಹೀಗೆ ಯಾವುದೇ ಬ್ರೇಕ್ ಫಾಸ್ಟ್ ಮಾಡಿದ್ರೂ ಅದಕ್ಕೊಂದು ಚಟ್ನಿ ಇಲ್ಲವೆ ಸಾಂಬಾರ್ ಇರಲೇಬೇಕು. ಹೀಗಾಗಿ ಹಲವು ತಿಂಡಿಗಳೊಂದಿಗೆ ಸಾಂಬಾರ್, ಚಟ್ನಿ ಇದ್ದರೆ ಅದರ ರುಚಿ ದುಪ್ಪಟ್ಟಾಗಿರುತ್ತೆ. ಇನ್ನು ಒಮ್ಮೆ ಮಾಡಿಟ್ಟ ಚಟ್ನಿ ಹಲವು ದಿನಗಳ ಕಾಲ ಬರಬಬಹುದು. ನಿತ್ಯವೂ ತಿಂಡಿಗೆ ಚಟ್ನಿ ಮಾಡುವ ಬದಲಾಗಿ ಒಮ್ಮೆ ಮಾಡಿರುವ ಚಟ್ನಿ ವಾರಗಳ ಕಾಲ ಕುಳಿತು ಸವಿಯುವಂತೆ ಮಾಡಬಹುದು.
ನಾವಿಂದು ಸುಲಭವಾಗಿ ಮಾಡುವ ಶುಂಠಿ ಚಟ್ನಿ ಕುರಿತಾಗಿ ತಿಳಿದುಕೊಳ್ಳೋಣ. ಈ ಚಟ್ನಿ ನೀವು ಯಾವುದೇ ತಿಂಡಿ ಮಾಡಿದ್ರೂ ಸಹ ಅದರ ರುಚಿ ಹೆಚ್ಚಿಸುವ ಖಾದ್ಯ ಎನ್ನಬಹುದು. ಅದ್ರಲ್ಲೂ ವಿಶೇಷ ರುಚಿಯಲ್ಲಿ ಹಾಗೆ ವಿಭಿನ್ನವಾಗಿ ಈ ಚಟ್ನಿ ಮಾಡಿ ಸವಿಯಬಹುದು. ಬಹುತೇಕ ಎಲ್ಲಾ ಚಟ್ನಿ ರೆಸಿಪಿಗಳಂತೆ ಇದು ಕೂಡ ತಕ್ಷಣಕ್ಕೆ ಮಾಡಿ ಸವಿಯಬಹುದಾದ ರೆಸಿಪಿ ಆಗಿರಲಿದೆ.
ಇನ್ನು ಆರೋಗ್ಯದ ದೃಷ್ಟಿಯಿಂದಲೂ ಸಹ ಇದು ಬಹಳ ಉತ್ತಮವಾದ ಚಟ್ನಿ. ನಿಮಗೆ ಕೆಮ್ಮು, ಶೀತ, ಗಂಟಲು ನೋವು ಸೇರಿ ಯಾವುದೇ ಕಾಲೋಚಿತ ಸಮಸ್ಯೆ ಇದ್ದರೂ ಕೂಡ ಈ ರುಚಿ ರುಚಿಯಾದ ಶುಂಠಿ ಚಟ್ನಿ ಮಾಡಿ ಸವಿದು ನೋಡಿ, ಕೆಲ ದಿನದಲ್ಲಿ ಈ ಸಮಸ್ಯೆಗಳು ದೂರಾಗಲಿದೆ. ಹಾಗಾದ್ರೆ ಈ ಸುಲಭದ ಚಟ್ನಿಯನ್ನು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಸುಲಭವಾಗಿ ಶುಂಠಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಶುಂಠಿ
- ಉದ್ದಿನ ಬೇಳೆ
- ಒಣ ಮೆಣಸು
- ಜೀರಿಗೆ
- ಈರುಳ್ಳಿ
- ಬೆಳ್ಳುಳ್ಳಿ
- ಟೊಮೆಟೋ
- ಕೊತ್ತಂಬರಿ ಸೊಪ್ಪು
- ಸಾಸಿವೆ
- ಕರಿಬೇವು
- ಇಂಗು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಸುಲಭವಾಗಿ ಶುಂಠಿ ಚಟ್ನಿ ಮಾಡುವ ಸುಲಭದ ವಿಧಾನವೇನು?
ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಉದ್ದಿನ ಬೇಳೆ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿ ಹಾಗೂ ಶುಂಠಿ, ಬೆಳ್ಳುಳ್ಳಿ ಸಹ ಹಾಕಿಕೊಂಡು ಫ್ರೈ ಮಾಡಿ. ಈರುಳ್ಳಿ ಹೆಚ್ಚಾಗಿ ಬಳಸಿ. ಈಗ ಟೊಮೆಟೋ ಕೂಡ ಹಾಕಿ 1 ನಿಮಿಷ ಫ್ರೈ ಮಾಡಿ.
ಈಗ ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ 1 ನಿಮಿಷ ಫ್ರೈ ಆಗಲು ಬಿಟ್ಟು ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಫ್ರೈ ಮಾಡಿಕೊಂಡ ಎಲ್ಲಾ ವಸ್ತುಗಳನ್ನು ಈ ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ಹಾಗೆ ಸಣ್ಣ ಬೆಲ್ಲದ ಉಂಡೆ ಹಾಕಿ ಸ್ವಲ್ಪ ನೀರು ಹಾಕಿ, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈ ಚಟ್ನಿಯನ್ನು ಬೌಲ್ಗೆ ಹಾಕಿಟ್ಟುಕೊಂಡು, ಈಗ ಮತ್ತೆ ಬಾಣಲೆಯಲ್ಲಿ ಎಣ್ಣೆ ಹಾಕಿ ಇದಕ್ಕೆ ಸಾಸಿವೆ, ಜೀರಿಗೆ ಹಾಕಿ ಬಳಿಕ ಇಂಗು, ಒಣ ಮೆಣಸು, ಕರಿಬೇವು ಹಾಕಿ ಫ್ರೈ ಮಾಡಿಕೊಂಡು ಈ ಒಗ್ಗರಣೆಯನ್ನು ಚಟ್ನಿಯೊಂದಿಗೆ ಸೇರಿಸಿಕೊಳ್ಳಿ. ಇಷ್ಟಾದರೆ ಶುಂಠಿ ಚಟ್ನಿ ಸಿದ್ದವಾಗುತ್ತೆ. ಇದನ್ನು ಯಾವುದೇ ತಿಂಡಿಯೊಂದಿಗೆ ಸವಿಯಬಹುದು. ಇದರ ರುಚಿ ಎಲ್ಲರಿಗೂ ಇಷ್ಟವಾಗುತ್ತೆ. ಶುಂಠಿ ಮತ್ತು ಈರುಳ್ಳಿ ಹೆಚ್ಚಾಗಿ ಬಳಸಿಕೊಂಡು ಮಾಡುವ ಈ ಚಟ್ನಿ ವಾರಗಳ ಕಾಲ ಇಡಬಹುದು. ಕಾಯಿ ಬಳಸದೆ ಇರುವುದರಿಂದ ಬಹುಬೇಗ ಹಾಳಾಗುವುದಿಲ್ಲ. ಹೀಗಾಗಿ ನೀವು ಸಹ ಬೆಳಗ್ಗೆ ತಿಂಡಿಯ ಸಮಯಕ್ಕೆ ಈ ಚಟ್ನಿಯನ್ನು ಮಾಡಿ ಸವಿದು ನೋಡಿ.



Click it and Unblock the Notifications
