Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಹಾ.. ಒಣ ಬೆಳ್ಳುಳ್ಳಿ ಚಟ್ನಿ! ಏನ್ ಟೇಸ್ಟ್ ಅಂತೀರಾ? ಮಾಡೋದು ಈಸಿ
ವಡಾ ಪಾವ್ ಸ್ಪೆಷಲ್ ಚಟ್ನಿ ರೆಸಿಪಿ. ರುಚಿ ಅದ್ಭುತ, ಒಮ್ಮೆ ತಿಂದ್ರೆ ಪದೇ ಪದೇ ಬೇಕು ಅಂತೀರಾ! ಬೆಳ್ಳುಳ್ಳಿ ಚಟ್ನಿ ಹೀಗೂ ಮಾಡಬಹುದು. ಒಮ್ಮೆ ಟ್ರೈ ಮಾಡಿ. ಮಳೆಗಾಲದ ಸಂಜೆ, ಹೊರಗೆ ಸುರಿಯುವ ಮಳೆಯ ಹನಿಗಳ ಸದ್ದು, ತಣ್ಣನೆಯ ಗಾಳಿ ಮತ್ತು ಒಳಗೆ ಯಾವುದೋ ಕಟು, ಖಾರವಾದ ತಿಂಡಿ ತಿನ್ನಬೇಕೆಂಬ ಹಂಬಲ. ಈ ಹಂಬಲಕ್ಕೆ ಬೆಳ್ಳುಳ್ಳಿ ಮತ್ತು ಖಾರದ ಪರಿಮಳ ಬೆರೆತರೆ ಹೇಗಿರುತ್ತದೆ? ಹೌದು, ಇದು ನಿಮಿಷಗಳಲ್ಲಿ ಸಿದ್ಧವಾಗುವ ಒಣ ಬೆಳ್ಳುಳ್ಳಿ ಚಟ್ನಿಯ (Dry Garlic Chutney) ಕಥೆ.
ಸಾಮಾನ್ಯವಾಗಿ ಚಟ್ನಿ (Chutney) ಅಂದರೆ ತೆಳ್ಳಗೆ ಅಥವಾ ಗಟ್ಟಿಯಾಗಿ ರುಬ್ಬಿದ, ನೀರಿನಂಶವಿರುವ ಪದಾರ್ಥ ಎಂದು ನಾವು ಭಾವಿಸುತ್ತೇವೆ. ಆದರೆ, ಈ ಚಟ್ನಿ ಬೆಳ್ಳುಳ್ಳಿ ಮತ್ತು ಕೆಲವು ಮಸಾಲೆಗಳ ಸಮ್ಮಿಲನದಿಂದ ಹುಟ್ಟಿಕೊಂಡ ಅದ್ಭುತ ರುಚಿಯನ್ನು ಹೊಂದಿರುತ್ತದೆ. ಇದು ವಿಶೇಷವಾಗಿ ಮುಂಬೈನ ಬೀದಿ ಆಹಾರವಾದ ವಡಾ ಪಾವ್ನಂತಹ ಖಾದ್ಯಗಳ ಜೊತೆ ಸವಿಯಲು ಅತ್ಯುತ್ತಮ ಆಯ್ಕೆ. ಬನ್ನಿ, ಮನೆಯಲ್ಲಿಯೇ ಒಣ ಬೆಳ್ಳುಳ್ಳಿ ಚಟ್ನಿ ತಯಾರಿಸುವ ಸುಲಭವಾದ ವಿಧಾನವನ್ನು (Garlic Chutney Recipe) ತಿಳಿಯೋಣ.

ಒಣ ಬೆಳ್ಳುಳ್ಳಿ ಚಟ್ನಿ ತಯಾರಿಸಲು ಬೇಕಾಗುವ ಪದಾರ್ಥಗಳು
• ಬೆಳ್ಳುಳ್ಳಿ: 5-20 ಬೆಳ್ಳುಳ್ಳಿ ಎಸಳುಗಳು
• ಒಣ ಕೊಬ್ಬರಿ: 3 ದೊಡ್ಡ ಚಮಚ ತುರಿದ ಒಣ ಕೊಬ್ಬರಿ
• ಕೆಂಪು ಮೆಣಸಿನ ಪುಡಿ: 2 ಚಮಚ (ನಿಮ್ಮ ಖಾರಕ್ಕೆ ಅನುಗುಣವಾಗಿ ಇದನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು)
• ಬಿಳಿ ಎಳ್ಳು: 1 ದೊಡ್ಡ ಚಮಚ
• ಶೇಂಗಾ ಬೀಜ: 2 ದೊಡ್ಡ ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ಎಣ್ಣೆ: ಅಗತ್ಯಕ್ಕೆ ತಕ್ಕಷ್ಟು

ಒಣ ಬೆಳ್ಳುಳ್ಳಿ ಚಟ್ನಿ ತಯಾರಿಸುವ ವಿಧಾನ
ಮೊದಲಿಗೆ, ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಈ ಸ್ಟೋರಿಯ ರಿಯಲ್ ನಾಯಕ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ. ಬೆಳ್ಳುಳ್ಳಿ ಸ್ವಲ್ಪ ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಹುರಿಯುವಾಗ ಬೆಳ್ಳುಳ್ಳಿಯಿಂದ ಹೊರಬರುವ ಪರಿಮಳವೇ ನಿಮ್ಮ ಅಡುಗೆಮನೆಯನ್ನು ತುಂಬುತ್ತದೆ. ಬೆಳ್ಳುಳ್ಳಿ ಸುಟ್ಟು ಹೋಗದಂತೆ ನೋಡಿಕೊಳ್ಳಿ.
ಬೆಳ್ಳುಳ್ಳಿ ಹುರಿದ ನಂತರ, ಅದೇ ಬಾಣಲೆಗೆ ಶೇಂಗಾ ಬೀಜ ಮತ್ತು ಬಿಳಿ ಎಳ್ಳು ಹಾಕಿ. ಇವುಗಳನ್ನು ಚೆನ್ನಾಗಿ ಹುರಿಯಿರಿ. ಬಿಳಿ ಎಳ್ಳು ಚಿಟಪಟ ಎಂದು ಸಿಡಿಯಲು ಶುರು ಮಾಡಿದಾಗ, ಅದಕ್ಕೆ ತುರಿದ ಒಣ ಕೊಬ್ಬರಿ ಸೇರಿಸಿ. ಕೊಬ್ಬರಿ ಕೂಡ ಸ್ವಲ್ಪ ಹೊಂಬಣ್ಣಕ್ಕೆ ತಿರುಗಿದ ಬಳಿಕ, ಅದಕ್ಕೆ ಕೆಂಪು ಮೆಣಸಿನ ಪುಡಿ ಸೇರಿಸಿ. ಈಗ ಎಲ್ಲವನ್ನೂ ಚೆನ್ನಾಗಿ ಬೆರೆಸಿ, ಮಿಶ್ರಣವನ್ನು ತಣ್ಣಗಾಗಲು ಬಿಡಿ. ಈ ಹಂತದಲ್ಲಿ ಮಸಾಲೆಗಳನ್ನು ಸುಡದಂತೆ ನೋಡಿಕೊಳ್ಳಿ

ಈಗ ಒಂದು ಮಿಕ್ಸಿಯ ಜಾರ್ಗೆ ಬೆಳ್ಳುಳ್ಳಿ ಮತ್ತು ಈಗ ತಣ್ಣಗಾದ ಮಿಶ್ರಣವನ್ನು ಹಾಕಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ನೆನಪಿಡಿ, ಈ ಚಟ್ನಿಯ ಪ್ರಮುಖ ಅಂಶವೇ ಒಣ ವಿನ್ಯಾಸ. ಹಾಗಾಗಿ, ನೀರು ಬಳಸಬಾರದು. ಮಿಕ್ಸಿಯಲ್ಲಿ ನುಣ್ಣಗೆ ರುಬ್ಬುವ ಬದಲು ತರಿತರಿಯಾಗಿ ರುಬ್ಬಿ. ಇದರಿಂದ ಚಟ್ನಿ ತಿನ್ನುವಾಗ ಗರಿಗರಿಯಾದ ಅನುಭವ ಸಿಗುತ್ತದೆ.
ಚಟ್ನಿ ಸಿದ್ಧವಾದ ಮೇಲೆ ಮುಂದೇನು?
ಇಷ್ಟು ಮಾಡಿದರೆ, ನಿಮ್ಮ ಖಾರವಾದ, ರುಚಿಕರವಾದ ಮತ್ತು ಆರೋಗ್ಯಕರ ಒಣ ಬೆಳ್ಳುಳ್ಳಿ ಚಟ್ನಿ ಸಿದ್ಧ. ಈ ಚಟ್ನಿಯ ವಿಶೇಷತೆ ಏನೆಂದರೆ, ಇದರಲ್ಲಿ ನೀರಿನಂಶ ಇಲ್ಲದಿರುವುದರಿಂದ, ನೀವು ಇದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಹಲವು ವಾರಗಳವರೆಗೆ ಸಂಗ್ರಹಿಸಬಹುದು. ಇದನ್ನು ಕೇವಲ ವಡಾ ಪಾವ್ ಜೊತೆ ಮಾತ್ರವಲ್ಲ. ಇಡ್ಲಿ, ದೋಸೆ, ರೊಟ್ಟಿ, ಅಥವಾ ಬಿಸಿ ಅನ್ನಕ್ಕೆ ತುಪ್ಪದ ಜೊತೆ ಕಲಸಿ ತಿನ್ನಲು ಕೂಡ ಅದ್ಭುತವಾಗಿರುತ್ತದೆ. ಇದು ನಿಮ್ಮ ಅಡುಗೆ ಮನೆಯಲ್ಲಿ ಸದಾ ಸ್ವಾದ ಹೆಚ್ಚಿಸುತ್ತದೆ. ನೀವೂ ಒಮ್ಮೆ ಒಣ ಬೆಳ್ಳುಳ್ಳಿ ಚಟ್ನಿ ಟ್ರೈ ಮಾಡಿ.



Click it and Unblock the Notifications