Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನುಗ್ಗೆಕಾಯಿ ಸಾಂಬಾರ್ ಅಲ್ಲ, ರಸಂ ರೆಸಿಪಿ: ಮಾಮೂಲಿ ರಸಂಗಿಂತ ಸೂಪರ್ ಆಗಿರುತ್ತೆ
ಇದು ನುಗ್ಗೆಕಾಯಿ ಸಾಂಬಾರ್ ಅಲ್ಲ, ನುಗ್ಗೆಕಾಯಿ ರಸಂ, ಹೌದು ನೀವು ಇದುವರೆಗೆ ನುಗ್ಗೆಕಾಯಿ ರಸಂ ಮಾಡಿಲ್ಲ ಎಂದರೆ ಒಮ್ಮೆ ಟ್ರೈ ಮಾಡಿ ನೋಡಿ, ಅದರ ಟೇಸ್ಟ್ ತುಂಬಾ ಚೆನ್ನಾಗಿರಲಿದೆ. ಮಾಮೂಲಿ ರಸಂಗಿಂತ ಈ ನುಗ್ಗೆಕಾಯಿ ರಸಂ ಎರಡು ಪಟ್ಟು ಹೆಚ್ಚಿರುತ್ತದೆ. ನುಗ್ಗೆಕಾಯಿಯ ರಸವೆಲ್ಲಾ ಈ ರಸಂಗೆ ಸೇರಿರುವುದರಿಂದ ಟೇಸ್ಟ್ ಭಿನ್ನವಾಗಿರುತ್ತೆ, ಸೂಪರ್ ಆಗಿರುತ್ತೆ. ಅಲ್ಲದೆ ನುಗ್ಗೆಕಾಯಿ ಅನೇಕ ಆರೋಗ್ಯಕರ ಗುಣಗಳನ್ನೂ ಹೊಂದಿದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ನುಗ್ಗೆಕಾಯಿ
ತೊಗರಿಬೇಳೆ
ಹಸಿ ಮೆಣಸಿನಕಾಯಿ
3-4 ಟೊಮೆಟೊ
ಎಣ್ಣೆ
ಅರಿಶಿಣ
ಉಪ್ಪು
ಬೆಳ್ಳುಳ್ಳಿ
ಒಗ್ಗರಣೆಗೆ
2 ಚಮಚ ಎಣ್ಣೆ
ಸ್ವಲ್ಪ ಕರಿಬೇವು
3-4 ಎಸಳು ಬೆಳ್ಳುಳ್ಳಿ
ಒಣ ಮೆಣಸು 2
ಸ್ವಲ್ಪ ಇಂಗು
ಸ್ವಲ್ಪ ಕರಿಬೇವು
( ಈ ಸಾಮಗ್ರಿಗಳನ್ನು ನೀವು ಎಷ್ಟು ಪ್ರಮಾಣದಲ್ಲಿ ಮಾಡುತ್ತೀರೋ ಅದರಂತೆ ಸೇರಿಸಿ)
ಮಾಡುವ ವಿಧಾನ
- ಬೇಳೆ ತೊಳೆದು ಕುಕ್ಕರ್‌ಗೆ ಹಾಕಿ, ನುಗ್ಗೆಕಾಯಿ , ಟೊಮೆಟೊ, ಬೆಳ್ಳುಳ್ಳಿ, ಉಪ್ಪು, ಅರಿಶಿಣ, 1 ಚಮಚ ಎಣ್ಣೆ ಹಾಕಿ ಒಂದು ಕಪ್ ನೀರು ಹಾಕಿ 4-5 ವಿಶಲ್ ಬರುವವರೆಗೆ ಬೇಯಿಸಿ
- ನಂತರ ಕುಕ್ಕರ್‌ನಿಂದ ಆವಿ ಹೋದಮೇಲೆ ಕುಕ್ಕರ್ ಮುಚ್ಚಳ ತೆಗೆದು ಚೆನ್ನಾಗಿ ಮ್ಯಾಶ್ ಮಾಡಿ ನಂತರ ಅದರ ರಸವನ್ನು ಮತ್ತೊಂದು ಪಾತ್ರೆಗೆ ಸೋಸಿ.
- ನೀವು ನೀರು ಹಾಕಿ ಮತ್ತೊಮ್ಮೆ ಚೆನ್ನಾಗಿ ಸೋಸಿಕೊಳ್ಳಿ, ರಸವೆಲ್ಲ ಆ ರಸದ ಪಾತ್ರೆಯಲ್ಲಿರಬೇಕು, ನಂತರ ಉಳಿದ ನಾರು, ಟೊಮೆಟೊ ಸಿಪ್ಪೆ ಬಿಸಾಡಿ.
- ಈಗ ಆ ರಸಕ್ಕೆ ರಸಂ ಪುಡಿ, ಸ್ವಲ್ಪ ಬೆಲ್ಲ, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ
- ಈಗ ಮಿಶ್ರಣವನ್ನು ಕುದಿಸಿ, ಉಪ್ಪು ಸರಿಯಾಗಿದೆಯೇ ನೋಡಿ
ಇದೇ ಸಮಯದಲ್ಲಿ ಒಗ್ಗರಣೆಗೆ ಸಿದ್ಧತೆ ಮಾಡಿ
ಒಗ್ಗರಣೆ ಪಾತ್ರೆಗೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಸ್ವಲ್ಪ
ಕರಿಬೇವು, ಸ್ವಲ್ಪ ಜೀರಿಗೆ ಹಾಕಿ, ಇವು ಚಟ್‌ಪಟ್ ಶಬ್ದ ಮಾಡುವಾಗ ಬೆಳ್ಳುಳ್ಳಿ
ಹಾಕಿ, ಇಂಗು ಸೇರಿಸಿ , ಒಣ ಮೆಣಸು ಮುರಿದು ಹಾಕಿ, ಕರಿಬೇವು ಹಾಕಿ
ನಂತರ ರಸಂಗೆ ಸೇರಿಸಿದರೆ ಸೂಪರ್ ರುಚಿಯ ರಸಂ ರೆಡಿ.



Click it and Unblock the Notifications